ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

First published:

  • 110

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ವಿಶ್ವದೆಲ್ಲೆಡೆ ಕೊರೋನಾ ಮರಣ ಮೃದಂಗವಾಡುತ್ತಿದೆ. ಇತ್ತ ಭಾರತದಲ್ಲೂ ಈ ಸೋಂಕು 300 ಕ್ಕೂ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಈ ಮಹಾಮಾರಿಗೆ ದೇಶದಲ್ಲಿ  7 ಮಂದಿ ಬಲಿಯಾಗಿದ್ದಾರೆ.

    MORE
    GALLERIES

  • 210

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಇತ್ತ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೂಡ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಕಳೆದ ಒಂದು ವಾರದಿಂದ ಮಾಲ್, ರೆಸ್ಟೊರೆಂಟ್, ಚಿತ್ರಮಂದಿರಗಳಿಗೆ ಬಾಗಿಲು ಹಾಕುವಂತೆ ಆದೇಶ ಹೊರಡಿಸಲಾಗಿದೆ.

    MORE
    GALLERIES

  • 310

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಈ ಆದೇಶ ಮಾರ್ಚ್ 31 ರವರೆಗೆ ಮುಂದುವರೆಯಲಿದೆ. ಅದರೊಂದಿಗೆ ಚಿತ್ರರಂಗದ ಕೆಲಸಗಳು ಸಹ ಸ್ಥಗಿತಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿದ್ದ ಸಿನಿಮಾಗಳ ದಿನಾಂಕ ಮುಂದೂಡಲಾಗಿದೆ.

    MORE
    GALLERIES

  • 410

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಇನ್ನು ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಒಂದಷ್ಟು ಚಿತ್ರ ತಂಡಗಳು ಇದೀಗ ಕೆಲಸವನ್ನು ಸ್ಥಗಿತಗೊಳಿಸಿದೆ. ಅಂತಹ ತಂಡಗಳಲ್ಲಿ ತ್ರಿವಿಕ್ರಮ ಸಿನಿಮಾ ಟೀಂ ಕೂಡ ಒಂದು.

    MORE
    GALLERIES

  • 510

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಆದರೆ ಈ ಚಿತ್ರತಂಡ ಇತ್ತೀಚೆಗಷ್ಟೇ ಥಾಯ್ಲೆಂಡ್​ನಿಂದ ಭಾರತಕ್ಕೆ ಮರಳಿತ್ತು. ಅಂದರೆ ಚೀನಾದಲ್ಲಿ ಕೊರೋನಾ ಕಿಂಕರ ಆರ್ಭಟಿಸುತ್ತಿದ್ದರೆ ತ್ರಿವಿಕ್ರಮ ತಂಡ ಥಾಯ್ಲೆಂಡ್​ನಲ್ಲಿ ಚಿತ್ರೀಕರಣದಲ್ಲಿ ನಿರತವಾಗಿತ್ತು.

    MORE
    GALLERIES

  • 610

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಹಾಡೊಂದರ ಶೂಟಿಂಗ್​ಗಾಗಿ ನಿರ್ದೇಶಕ ಸಹನಾಮೂರ್ತಿ ಮತ್ತು ತಂಡ ಥಾಯ್ಲೆಂಡ್​ಗೆ ಹೊರಟಿತ್ತು. ಅಲ್ಲಿ ಚಿತ್ರದ ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಂ ಹಾಗೂ ನಾಯಕಿ ಅಕಾಂಕ್ಷ ಶರ್ಮಾ ಜೊತೆಗಿನ ಡ್ಯುಯೆಟ್ ಹಾಡಿನ ಚಿತ್ರೀಕರಣ.

    MORE
    GALLERIES

  • 710

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಬ್ಯಾಂಕಾಕ್​ನಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿತ್ತು. ನಗರದಿಂದ ತುಸು ಹೊರಗೆ ಕಾಡಿನಲ್ಲಿ ಕೆಲವು ಗಂಟೆಗಳ ಕಾಲ ಚಿತ್ರೀಕರಿಸಿದ್ದರು. ಅದಾಗಲೇ ಚೀನಾದಲ್ಲಿ ಕೊರೋನಾ ಮರಣ ಮೃದಂಗವಾಡಲು ಆರಂಭಿಸಿತ್ತು.

    MORE
    GALLERIES

  • 810

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಇತ್ತ ಶೂಟಿಂಗ್ ಮುಗಿಸಿದ ತ್ರಿವಿಕ್ರಮ ತಂಡ ಭಾರತಕ್ಕೆ ಮರಳಿದ್ದರು. ಇಲ್ಲಿ ತಲುಪಿದ ಕೆಲ ದಿನಗಳಲ್ಲೇ ಥಾಯ್ಲೆಂಡ್​ಗೂ ಕೊರೋನಾ ಆವರಿಸಿರುವ ಸುದ್ದಿ ಬಂತು.

    MORE
    GALLERIES

  • 910

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ಥಾಯ್ಲೆಂಡ್​ಗೆ ಹೋದಾಗ ನಮಗೆ ಕೊರೋನಾ ವೈರಸ್ ಬಗ್ಗೆ ಯಾವುದೇ ಆಲೋಚನೆಯಿರಲಿಲ್ಲ. ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಬೇಕು ಅಷ್ಟೇ ಪ್ಲ್ಯಾನ್ ಮಾಡಿಕೊಂಡಿದ್ದೆವು. ಆದರೆ ಆ ಬಳಿಕ ವಿಶ್ವದೆಲ್ಲೆಡೆ ಕೊರೋನಾ ಮಹಾಮಾರಿ ಆವರಿಸಿರುವುದು ಗೊತ್ತಾಯಿತು. ಒಂದಾರ್ಥದಲ್ಲಿ ನಾವು ಅದೃಷ್ಟದಿಂದ ಪಾರಾಗಿದ್ದೇವೆ ಎಂದರು ವಿಕ್ರಂ ರವಿಚಂದ್ರನ್.

    MORE
    GALLERIES

  • 1010

    ಕೊರೋನಾ ವೈರಸ್​ನಿಂದ ಅದೃಷ್ಟದಿಂದ ಪಾರಾದ ಸ್ಟಾರ್ ನಟನ ಮಗ..!

    ವಿಕ್ರಂ ರವಿಚಂದ್ರನ್

    MORE
    GALLERIES