ಕಳೆದ ತಿಂಗಳು ಸುಕೇಶ್ ಜಾಕ್ಲಿನ್ಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಿದ್ದ. ಸುಕೇಶ್ ನನ್ನನ್ನು ಬಳಸಿಕೊಂಡ ಎಂಬ ಜಾಕ್ಲಿನ್ ಹೇಳಿಕೆ ಬಗ್ಗೆ ಸುಕೇಶ್ಗೆ ಹೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿ, ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಹಾಗೆ ಹೇಳಲು ಅವಳಿಗೆ ಅವಳದ್ದೇ ಆದ ಕಾರಣಗಳಿವೆ. ಆಕೆ ಬಗ್ಗೆ ಏನು ಹೇಳುವುದಕ್ಕೂ ಬಯಸುವುದಿಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನೀವು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತೀರಿ ಎಂದಿದ್ದಾನೆ.