ಬೆಂಗಳೂರಿನಲ್ಲಿ ಸರಳ ವಿವಾಹವಾದ ನಟ ಚೇತನ್ಗೆ ಶಹಬ್ಭಾಸ್ ಎಂದ ಕಾಂಗ್ರೆಸ್ ನಾಯಕ ಶಶಿ ತರೂರ್
ನಟ ಚೇತನ್ ಮತ್ತು ಮೇಘಾ ಅವರ ಸರಳ ವಿವಾಹದ ಆರತಕ್ಷತೆಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪತ್ನಿ ಸಮೇತ ಬಂದು ಶುಭ ಹಾರೈಸಿದ್ದರು. ಹಾಗೆಯೇ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಆರತಕ್ಷತೆಗೆ ಬಂದು ಶುಭ ಕೋರಿದ್ದರು. ಇದೀಗ ಟ್ವಿಟ್ಟರ್ ಮೂಲಕ ಚೇತನ್ ಮತ್ತು ಮೇಘಾ ಜೋಡಿಗೆ ಶುಭ ಕೋರಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಹೊಸ ದಂಪತಿಯ ವಿನೂತನ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
News18 Kannada | February 9, 2020, 4:04 PM IST
1/ 21
ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಆ ದಿನಗಳು ಖ್ಯಾತಿಯ ನಟ ಚೇತನ್ ಮತ್ತು ಮೇಘಾ ಅವರ ಸರಳ ವಿವಾಹಕ್ಕೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಮೆಚ್ಚುಗೆ ಸೂಚಿಸಿದ್ದಾರೆ.
2/ 21
ಆ ದಿನಗಳು' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟ ಚೇತನ್.
3/ 21
ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ಹಲವು ಹೋರಾಟಗಳಲ್ಲೂ ತೊಡಗಿಸಿಕೊಂಡಿರುವ ಚೇತನ್ ಫೆ. 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
4/ 21
ತಮ್ಮ ಬಹುಕಾಲದ ಗೆಳತಿ ಮೇಘಾ ಜೊತೆ ಚೇತನ್ ಫೆ. 1ರಂದು ರಿಜಿಸ್ಟರ್ ಮದುವೆಯಾಗಿದ್ದರು.
5/ 21
ಬಿಳಿ ಪಂಚೆಯುಟ್ಟು, ಹಸಿರು ಶಾಲು ಹೊದ್ದ ಚೇತನ್ ಕೆಂಪು ರೇಷ್ಮೆ ಸೀರೆಯುಟ್ಟಿದ್ದ ಮೇಘಾ ಜೊತೆಗೆ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ಮದುವೆಯಾಗಿದ್ದರು.
6/ 21
ವಿವಾಹ ಕಾಯ್ದೆ ಅಡಿಯಲ್ಲಿ ಚೇತನ್ ಮತ್ತು ಮೇಘಾ ಮದುವೆಯಾಗಿದ್ದರು.
7/ 21
ಗಾಂಧಿನಗರದಲ್ಲಿರುವ ರಿಜಿಸ್ಟ್ರಾರ್ ಕಚೇರಿಯಲ್ಲಿ ಚೇತನ್ ಮತ್ತು ಮೇಘಾ ಮದುವೆಯಾಗಿದ್ದರು.
8/ 21
ಅಸ್ಸಾಂ ಮೂಲದ ಮೇಘಾ ಅವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.
9/ 21
ಸಾಮಾಜಿಕ ಹೋರಾಟದ ಮೂಲಕವೇ ಇವರಿಬ್ಬರ ಪರಿಚಯವಾಗಿತ್ತು.
10/ 21
ಸಮಾನ ಮನಸ್ಕರಾಗಿರುವ ಚೇತನ್ ಮತ್ತು ಮೇಘಾ ಇದೀಗ ಬಾಳ ಸಂಗಾತಿಗಳಾಗಿದ್ದಾರೆ.
11/ 21
ಫೆ. 2ರಂದು ಗಾಂಧಿಭವನದ ಪಕ್ಕದಲ್ಲಿರುವ ವಲ್ಲಭ ನಿಕೇತನದಲ್ಲಿ ನಟ ಚೇತನ್ ಅವರ ಮದುವೆಯ ಸಂತೋಷ ಕೂಟವನ್ನು ಆಯೋಜಿಸಲಾಗಿತ್ತು.
12/ 21
ಸಂತೋಷಕೂಟದಲ್ಲಿ ಅನಾಥಾಶ್ರಮದ ಮಕ್ಕಳೊಂದಿಗೆ ಮತ್ತು ವೃದ್ಧರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
13/ 21
ಸಂತೋಷಕೂಟದಲ್ಲಿ ಅನಾಥಾಶ್ರಮದ ಮಕ್ಕಳೊಂದಿಗೆ ಮತ್ತು ವೃದ್ಧರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
14/ 21
ವಲ್ಲಭ ನಿಕೇತನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದರು.
15/ 21
ಮಯೂರ್ ಪಟೇಲ್, ನಿರ್ದೇಶಕ ಪಿ.ಸಿ.ಶೇಖರ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಚೇತನ್-ಮೇಘ ಆರತಕ್ಷತೆಯಲ್ಲಿ ಪಾಲ್ಗೊಂಡು ನವ ದಂಪತಿಗೆ ಆಶೀರ್ವದಿಸಿದ್ದರು.
16/ 21
ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪತ್ನಿ ಸಮೇತ ಚೇತನ್-ಮೇಘ ಆರತಕ್ಷತೆಗೆ ಬಂದು ನವ ಜೋಡಿಗೆ ಶುಭ ಹಾರೈಸಿದ್ದರು.
17/ 21
ಹಾಗೆಯೇ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಆರತಕ್ಷತೆಗೆ ಬಂದು ಶುಭ ಕೋರಿದ್ದರು.
18/ 21
ಇದೀಗ ಟ್ವಿಟ್ಟರ್ ಮೂಲಕ ಚೇತನ್ ಮತ್ತು ಮೇಘಾ ಜೋಡಿಗೆ ಶುಭ ಕೋರಿದ ಶಶಿ ತರೂರ್, ”ಇದೊಂದು ಸಾಮಾಜಿಕ ಪ್ರಜ್ಞೆಯ ಮದುವೆ. ವಿವಾಹಕ್ಕೆ ಬಂದವರಿಗೆ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್ ಮತ್ತು ಮೇಘ ಕೊಟ್ಟಿದ್ದಾರೆ.
19/ 21
ಸಂವಿಧಾನದ ಪುಸ್ತಕವನ್ನುತೃತೀಯ ಲಿಂಗಿಗಳ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರಿಂದ ಓದಿಸಿದ್ದಾರೆ. ಹೊಸ ದಂಪತಿಯ ಜೀವನ ಹಸನಾಗಿರಲಿ ಎಂದು ಟ್ವೀಟ್ ಮಾಡಿದ್ದಾರೆ.
20/ 21
ಆ ದಿನಗಳು, ರಾಮ್, ಬಿರುಗಾಳಿ, ಸೂರ್ಯಕಾಂತಿ, ದಶಮುಖ, ಮೈನಾ, ನೂರೊಂದು ನೆನಪು, ಅತಿರಥ ಸಿನಿಮಾಗಳಲ್ಲಿ ಚೇತನ್ ನಟಿಸಿದ್ದಾರೆ.
21/ 21
ಇವುಗಳಲ್ಲಿ ಆ ದಿನಗಳು, ಬಿರುಗಾಳಿ ಮತ್ತು ಮೈನಾ ಸಿನಿಮಾಗಳು ಚೇತನ್ಗೆ ಹೊಸ ಇಮೇಜ್ ಕಟ್ಟಿಕೊಟ್ಟವು. ಸದ್ಯಕ್ಕೆ ಚೇತನ್ ಅಭಿನಯದ ರಣಂ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.