Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಫ್ಯಾಷನ್ ಶೋನಲ್ಲಿ ತಾಪ್ಸಿ ಲಕ್ಷ್ಮಿದೇವಿ ಇರುವ ನೆಕ್ಲೇಸ್ ಧರಿಸುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಹಿಂದೂ ದೇವರಿಗೆ ಮಾಡಿದ ಅಪಮಾನ ಎಂದು ಹಿಂದೂ ಸಂಘಟನೆಗಳು ಕಿಡಿಕಾರಿವೆ.

First published:

  • 17

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ತಾಪ್ಸಿ ಫ್ಯಾಷನ್ ಡ್ರೆಸ್ ತೊಟ್ಟು ಕತ್ತಿಗೆ ಲಕ್ಷ್ಮಿದೇವಿ ಇರುವ ನೆಕ್ಲೇಸ್ ಧರಿಸಿದ್ದಾರೆ. ಬಾಲಿವುಡ್ ನಟಿ ಸನಾತನ ಧರ್ಮ ಮತ್ತು ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಕಿಡಿಕಾರಿದ್ದು, ನಟಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ

    MORE
    GALLERIES

  • 27

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ಎಫ್ಐಆರ್ ದಾಖಲಿಸದಿದ್ದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

    MORE
    GALLERIES

  • 37

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ಮಾರ್ಚ್ 14 ರಂದು ಮುಂಬೈನಲ್ಲಿ ಲ್ಯಾಕ್ಮಿ ಫ್ಯಾಷನ್ ವೀಕ್ ಆಯೋಜಿಸಲಾಗಿತ್ತು, ಇದರಲ್ಲಿ ಮಾಡೆಲ್ ಮತ್ತು ಸಿನಿಮಾ ನಟಿ ತಾಪ್ಸಿ ಪನ್ನು ಓಪನ್ ಡ್ರೆಸ್ ಧರಿಸಿದ್ದರು. ಕೊರಳಲ್ಲಿ ಧರಿಸಿದ್ದ ಲಾಕೆಟ್​ನಲ್ಲಿ ಲಕ್ಷ್ಮಿದೇವಿಯ ಚಿತ್ರವನ್ನು ಕಾಣಬಹುದಾಗಿದೆ.

    MORE
    GALLERIES

  • 47

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ಫ್ಯಾಷನ್ ಶೋ ವಿಡಿಯೋ ಹಾಗೂ ಫೋಟೋವನ್ನು ನಟಿ ತಾಪ್ಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ಕೆಲವೇ ಗಂಟೆಗಳಲ್ಲಿ ಫುಲ್ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳು ನಟಿ ವಿರುದ್ಧ ಕೋಪಗೊಂಡಿವೆ.

    MORE
    GALLERIES

  • 57

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ಇಂದೋರ್​ನ ಹಿಂದ್ ರಕ್ಷಕ ಸಂಘಟನೆಯು ತಾಪ್ಸಿ ಪನ್ನು ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಛತ್ರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಟಿ ತಾಪ್ಸಿ ಪನ್ನು ಅಸಭ್ಯ ಉಡುಗೆ ತೊಟ್ಟು ದೇವರ ಹಾರ ತೊಟ್ಟಿದ್ದಾರೆ ಎಂದು ಹಿಂದ್ ರಕ್ಷಕ ಸಂಘಟನೆಯ ಸಂಚಾಲಕ ಏಕಲವ್ಯ ಗೌರ್ ಹೇಳಿದ್ದಾರೆ.

    MORE
    GALLERIES

  • 67

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ಸನಾತನ ಹಿಂದೂ ಧರ್ಮದ ಆರಾಧ್ಯ ದೇವತೆ ಲಕ್ಷ್ಮಿಯ ಲಾಕೆಟ್ ಅನ್ನು ಕುತ್ತಿಗೆಯಲ್ಲಿ ಹಾಕಿಕೊಂಡಿದ್ದು, ನಟಿ ಒಳ್ಳೆಯ ಬಟ್ಟೆ ಧರಿಸಿಲ್ಲ. ಹಿಂದೂ ಧರ್ಮವನ್ನು ಅವಮಾನಿಸಲು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಏಕಲವ್ಯ ಗೌರ್ ಆರೋಪಿಸಿದ್ದಾರೆ.

    MORE
    GALLERIES

  • 77

    Taapsee Pannu: ಮೈಮೇಲೆ ತುಂಡು ಬಟ್ಟೆ, ಕತ್ತಿಗೆ ಲಕ್ಷ್ಮೀದೇವಿ ನೆಕ್ಲೇಸ್! ನಟಿ ತಾಪ್ಸಿ ಪನ್ನು ಮೇಲೆ ಬಿತ್ತು ಕೇಸ್

    ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಫ್ಯಾಷನ್ ಶೋನಲ್ಲಿ ಧರಿಸಿದ ನೆಕ್ಲೇಸ್​ನಿಂದ ನಟಿ ತಾಪ್ಸಿಗೆ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    MORE
    GALLERIES