PHOTOS: ಕಿರುತೆರೆಯ ಕಾಮಿಡಿ ಕಿಂಗ್ ಕಪಿಲ್ ಕಾರ್ಯಕ್ರಮದಲ್ಲಿ ಕನ್ನಡದ ಕಿಚ್ಚ ಸುದೀಪ್..!
ಕನ್ನಡದ ಕಿಚ್ಚ-ಕಿರುತೆರೆಯ ಕಾಮಿಡಿ ಕಿಂಗ್ ಒಂದೆಡೆ ಸೇರಿದರೆ ಹೇಗಿರಬೇಡ ಹೇಳಿ. ಹೌದು, ಕಿರುತೆರೆಯ ಕಾಮಿಡಿ ಕಾರ್ಯಕ್ರಮದ ಕಿಂಗ್ ಕಪಿಲ್ ಶರ್ಮಾ ಅವರ ಸೀಸನ್ 2ನ ವಿಶೇಷ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ಸುನಿಲ್ ಶೆಟ್ಟಿ ಹಾಗೂ ಮನೋಜ್ ತಿವಾರಿ ಭಾಗವಹಿಸಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಕಿಚ್ಚ ಭಾಗವಹಿಸಿದ್ದ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಇದರಲ್ಲಿ ಭಾಗವಹಿಸಿರುವುದರ ಕುರಿತು ಸುದೀಪ್ ಟ್ವೀಟ್ ಮಾಡಿದ್ದಾರೆ.