ಎರ್ನಾಕುಲಂ ಜಿಲ್ಲೆಯ ತ್ರಿಪುನಿತುರಾದಲ್ಲಿ ಸುಬಿ ಸುರೇಶ್ ಜನಿಸಿದ್ರು. ಶಾಲೆ ಮತ್ತು ಕಾಲೇಜು ಶಿಕ್ಷಣವು ತ್ರಿಪುನಿತುರಾ ಸರ್ಕಾರಿ ಶಾಲೆ ಮತ್ತು ಎರ್ನಾಕುಲಂ ಸೇಂಟ್ ದಿ ರೆಸಾಸ್ನಲ್ಲಿ ಪೂರ್ಣಗೊಳಿಸಿದ್ರು. ಶಾಲಾ ದಿನಗಳಲ್ಲಿ ಸುಬಿ ಸುರೇಶ್ ಉತ್ತಮ ನೃತ್ಯಗಾರ್ತಿ ಕೂಡ ಆಗಿದ್ದರು. ಸುಬಿ ಬ್ರೇಕ್ ಡ್ಯಾನ್ಸ್ ಕೂಡ ಕಲಿತಿದ್ದರು. ಅನೇಕ ಸ್ಟೇಜ್ ಶೋಗಳನ್ನು ಸಹ ನೀಡಿದ್ದಾರೆ. ನಂತರ ಕಿರುತೆರೆಗೆ ಕಾಲಿಟ್ಟ ಸುಬಿ ಅನೇಕ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಚಲನಚಿತ್ರ ಮತ್ತು ಕಿರುತೆರೆ ನಟಿ ಹಾಗೂ ನಿರೂಪಕಿ ಸುಬಿ ಸುರೇಶ್ ಅವರ ಅಕಾಲಿಕ ಮರಣಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಕೊಚ್ಚಿನ್ ಕಲಾ ಭವನದ ಮೂಲಕ ಕಲಾ ಕ್ಷೇತ್ರಕ್ಕೆ ಕಾಲಿಟ್ಟ ಸುಬಿ, ರಿಯಾಲಿಟಿ ಶೋ, ಕಾಮಿಡಿ ಕಾರ್ಯಕ್ರಮಗಳ ಮೂಲಕ ಮಲಯಾಳಿ ಪ್ರೇಕ್ಷಕರ ಹೃದಯ ಗೆದ್ದರು. ಸುಬಿ ಅವರ ನಿಧನದಿಂದ ಒಬ್ಬ ಭರವಸೆಯ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.