ಇಷ್ಟು ದಿನ ಪ್ರತಿ ದಿನ ರಾತ್ರಿ 9.30ಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಈಗ ಬಿಗ್ ಬಾಸ್ ಮುಗಿದಿದ್ದು, ಕಲರ್ಸ್ ಕನ್ನಡದಲ್ಲಿ 2 ಹೊಸ ಧಾರಾವಾಹಿಗಳು ಇಂದಿನಿಂದ ಶುರುವಾಗಲಿವೆ.
2/ 8
ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ತ್ರಿಪುರ ಸುಂದರಿ ಧಾರಾವಾಹಿ, 10 ಗಂಟೆಗೆ ಪುಣ್ಯವತಿ ಧಾರಾವಾಹಿ ಪ್ರಸಾರವಾಗಲಿದೆ. ಬಿಗ್ ಬಾಸ್ ನಂತರ ಅದರ ಜಾಗ ತುಂಬುತ್ತಿವೆ ನ್ಯೂ ಸೀರಿಯಲ್ ಗಳು.
3/ 8
ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಿಸಲಿದ್ದಾರೆ. ಆಮ್ರಪಾಲಿ ಎನ್ನುವ ಪಾತ್ರ ನಿರ್ವಹಿಸಲಿದ್ದಾರೆ. ಗಂಧರ್ವ ಲೋಕದಿಂದ ತಪ್ಪಿಸಿಕೊಂಡು ಬಂದಿರುವ ರಾಜಕುಮಾರನನ್ನು ಹುಡುಕಲು ಆಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ. ರಾಜಕುಮಾರನನ್ನು ಕರೆ ತರುವ ಜವಾಬ್ದಾರಿ ಈಕೆ ಮೇಲಿದೆ.
4/ 8
ರಾಜಕುಮಾರನಿಲ್ಲದೇ ಗಂಧರ್ವ ಲೋಕಕ್ಕೆ ಮರಳುವುದಿಲ್ಲ ಎಂದು ಶಪಥ ಮಾಡಿ ಬಂದಿದ್ದಾಳೆ ಆಮ್ರಪಾಲಿ. ರಾಜಕುಮಾರನನ್ನು ಹುಡುಕಿ, ಅವನ ಮನವೊಲಿಸಿ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗಬೇಕು.
5/ 8
ದಿವ್ಯಾ ಸುರೇಶ್ ರನ್ನು ತ್ರಿಪುರ ಸುಂದರಿ ರೂಪದಲ್ಲಿ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಸುಂದರಿಯಂತೆ ಕಾಣ್ತಾ ಇದ್ದಾಳೆ ತ್ರಿಪುರ ಸುಂದರಿ ಎಂದು ಹೇಳ್ತಾ ಇದ್ದಾರೆ. ಅಲ್ಲದೇ ಇದೆ ಪ್ರೊಮೋ ನೋಡಿರುವ ಜನ ಬಾಹುಬಲಿ ಸೀರಿಯಲ್ ಇದು ಎಂದು ಹೇಳ್ತಾ ಇದ್ದಾರೆ.
6/ 8
ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಾಯಕನಾಗಿ ನನ್ನರಸಿ ರಾಧೆಯ ನಟ ಅಗಸ್ತ್ಯ ಈ ಧಾರಾವಾಹಿಯಲ್ಲಿ ಪ್ರದ್ಯುಮ್ನನ ಪಾತ್ರ ನಿರ್ವಹಿಸುತ್ತಿದ್ದಾರೆ. ಭೂಲೋಕದಲ್ಲಿರುವ ಇವನಿಗೆ ಅಮ್ಮನೇ ಪ್ರಪಂಚ.
7/ 8
ಇನ್ನು ರಾತ್ರಿ 10 ಗಂಟೆಗೆ ಪುಣ್ಯವತಿ ಧಾರಾವಾಹಿ ಪ್ರಸಾರವಾಗಲಿದೆ. ಇದರಲ್ಲಿರುವ ನಟಿ ಪದ್ಮಿನಿ ಅಂತ. ಈಕೆಗೆ ಡ್ಯಾನ್ಸ್ ಅಂದ್ರೆ ಪ್ರಾಣ. ಅದರಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂಬ ಹಠ.
8/ 8
ಆದ್ರೆ ಪುಣ್ಯವತಿ ಧಾರಾವಾಹಿಯೂ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು ಶುರುವಾಗ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಕನಸು ಕಾಣಲು ಸಹ ಹಕ್ಕಿಲ್ಲ. ಅಪ್ಪ ಹೇಳಿದ ಹಾಗೇ ಕೇಳಬೇಕು. 2 ಹೊಸ ಧಾರಾವಾಹಿಗಳು ಇಂದಿನಿಂದ ಪ್ರಾರಂಭ ಆಗಲಿವೆ.