ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ವಿಭಿನ್ನವಾಗಿರುವ ಕಥೆ ಆಗಿದೆ.
2/ 8
ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಸಲಿದ್ದಾರೆ. ಆಮ್ರಪಾಲಿ ಎನ್ನುವ ಪಾತ್ರ ನಿರ್ವಹಿಸಲಿದ್ದಾರೆ.
3/ 8
ದಿವ್ಯಾ ಸುರೇಶ್ ನಟನೆ, ನೋಟವನ್ನು ಜನ ಮೆಚ್ಚಿಕೊಂಡಿದ್ದಾರೆ. ತ್ರಿಪುರ ಸುಂದರಿ ಹೆಸರಿಗೆ ತಕ್ಕಂತೆ ತ್ರಿಪುರ ಸುಂದರಿಯೇ ಆಗಿದ್ದಾರೆ. ತುಂಬಾ ಚೆನ್ನಾಗಿ ಕಾಣ್ತಾ ಇದ್ದಾರೆ ಎಂದು ಹೇಳಿದ್ದಾರೆ.
4/ 8
ಗಂಧರ್ವ ಲೋಕದಿಂದ ತಪ್ಪಿಸಿಕೊಂಡು ಬಂದಿರುವ ರಾಜಕುಮಾರನನ್ನು ಹುಡುಕಲು ಆಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ. ರಾಜಕುಮಾರನ್ನು ಕರೆವ ತರು ಜವಾಬ್ದಾರಿ ಈಕೆ ಮೇಲಿದೆ.
5/ 8
ರಾಜಕುಮಾರನಿಲ್ಲದೇ ಗಂಧರ್ವ ಲೋಕಕ್ಕೆ ಮರಳುವುದಿಲ್ಲ ಎಂದು ಶಪಥ ಮಾಡಿ ಬಂದಿದ್ದಾಳೆ ಆಮ್ರಪಾಲಿ. ರಾಜಕುಮಾರನ್ನು ಹುಡುಕಿ, ಅವನ ಮನವೊಲಿಸಿ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗಬೇಕು.
6/ 8
ಆಮ್ರಪಾಲಿ ರಾಜಕುಮಾರನನ್ನು ಹುಡುಕಲು ಕೊಟ್ಟಿದ್ದ ಪದಕವನ್ನು ಕಳೆದುಕೊಂಡಿದ್ದಾರೆ. ಪದಕ ಇದ್ದಿದ್ರೆ ರಾಜಕುಮಾರ ಹತ್ತಿರ ಇದ್ರೆ ಆ ಪದಕ ಹೊಳೆಯುತ್ತಿತ್ತು. ಈಗ ಅದು ಇಲ್ಲದೇ ಹುಡುಕಲು ಕಷ್ಟವಾಗ್ತಿದೆ.
7/ 8
ಆಮ್ರಪಾಲಿ ಯಾವ ರಾಜಕುಮಾರನನ್ನು ಹುಡುಕುತ್ತಿದ್ದಾಳಾ ಅದೇ ಮನೆಗೆ ಬಂದಿದ್ದಾಳೆ. ಕಷ್ಟದಲ್ಲಿದ್ದ ಆಮ್ರಪಾಲಿಯನ್ನು ಪ್ರದ್ಯುಮ್ನ ಕಾಪಾಡಿದ್ದ. ಮನೆಗೆ ಕರೆದುಕೊಂಡು ಬಂದಿದ್ದಾನೆ.
8/ 8
ಈಗ ಪ್ರದ್ಯುಮ್ನನ ನಿಶ್ಚಿತಾರ್ಥ ನಡೆಯುತ್ತಿದೆ. ಅದು ಆಮ್ರಪಾಲಿ ಜೊತೆ ನಡೆಯುತ್ತಾ ಎಂದು ಜನ ಹೇಳ್ತಾ ಇದ್ದಾರೆ. ಮುಂದೇನಾಗುತ್ತೆ ಅಂತ ನೋಡೋಕೆ ತ್ರಿಪುರ ಸುಂದರಿ ಧಾರಾವಾಹಿ ನೋಡಬೇಕು.