Year Ender 2022: 2022 ರಲ್ಲಿ ಧಾರಾವಾಹಿಯಲ್ಲಿ ಸಾವಿನ ಮೂಲಕ ತಮ್ಮ ಪಯಣ ಮುಗಿಸಿದವರು ಇವರು!
ಧಾರಾವಾಹಿಗಳು ಜನರ ಮನಸ್ಸಿಗೆ ಎಷ್ಟು ಹತ್ತಿರ ಆಗಿರುತ್ತವೆ ಅಲ್ವಾ? ಅಲ್ಲಿನ ಪಾತ್ರಧಾರಿಗಳಿಗೆ ನೋವಾದ್ರೆ, ತಾವೇ ಅಳುತ್ತಾರೆ. ಆ ರೀತಿ ಎಮೋಷನಲ್ ಕ್ರಿಯೇಟ್ ಮಾಡಿ, ಸೀರಿಯಲ್ನಲ್ಲಿ ಸಾವನ್ನಪ್ಪಿದವರು ಇವರು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ.
2/ 8
ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ.
3/ 8
ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ . ರತ್ನಮಾಲಾ ಪಾತ್ರ ಜನರಿಗೆ ತುಂಬಾ ಇಷ್ಟವಾಗಿತ್ತು.
4/ 8
2022ರಲ್ಲಿ ಕೊನೆ ಕೊನೆಗೆ ರತ್ನಮಾಲಾ ಅವರ ಪಾತ್ರ ಎಂಡ್ ಆಗಿದೆ. ಅನಾರೋಗ್ಯದಿಂದ ರತ್ನಮ್ಮ ಸಾವನ್ನಪ್ಪಿದ್ದಾರೆ. ಇರುವಷ್ಟು ದಿನ ಅವರ ಪಾತ್ರಕ್ಕೆ ಜೀವ ತುಂಬಿದ್ದವರು.
5/ 8
ಕೆಂಡಸಂಪಿಗೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಕೆಂಡಸಂಪಿಗೆ ಧಾರಾವಾಹಿ ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
6/ 8
ಕೆಂಡಸಂಪಿಗೆ ಧಾರಾವಾಹಿಯ ಆರಂಭದಲ್ಲಿ ನಟಿ ತಮ್ಮ ರಾಜೇಶ್ ಪಾತ್ರ ಇತ್ತು. ಆ ಪಾತ್ರವನ್ನು ಶನಿ ಖ್ಯಾತಿಯ ಸುನಿಲ್ ಮಾಡಿದ್ದಾರೆ. ಪ್ರತಿಭಟನೆಯೊಂದರಲ್ಲಿ ನಡೆದ ಬೆಂಕಿ ಅನಾಹುತದಿಂದ ಸಾವನ್ನಪ್ಪಿದರು.
7/ 8
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
8/ 8
ಧಾರಾವಾಹಿಯಲ್ಲಿ ರಾಮಾಚಾರಿ ಅತ್ತಿಗೆ ಅಪರ್ಣಾಗೆ ಕ್ಯಾನ್ಸರ್ ಇರುತ್ತೆ. ಅಪರ್ಣಾಗೆ ಆಪರೇಷನ್ ಮಾಡಿಸಲು ಹಣ ಇಲ್ಲದೇ ಆಕೆ ಸಾವನ್ನಪ್ಪುತ್ತಾಳೆ. ಈ ಮೂವರು ಧಾರಾವಾಹಿಗಳಲ್ಲಿ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು.