ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಸಿದ್ಧಾಂತ್-ತಾರಿಣಿ ಪ್ರೀತಿ ಸಕ್ಸಸ್ ಆಗ್ತಾ ಇಲ್ಲ. ಇಬ್ಬರು ದೂರ ದೂರ ಆಗ್ತಾರೆ. ಇಬ್ಬರು ಕೈನಿಂದ ಹಾರ್ಟ್ ಮಾಡಿ ಪ್ರೀತಿಯ ಸಂಕೇತದೊಂದಿಗೆ ಪ್ರೋಮೋ ಮಾಡಿದ್ದಾರೆ.
2/ 8
ಕೆಂಡಸಂಪಿಗೆ ಧಾರಾವಾಹಿಯೂ ಪ್ರತಿ ದಿನ ಸಂಜೆ 6.30ಕ್ಕೆ ಪ್ರಸಾರ ಆಗ್ತಿದೆ. ಸುಮನಾ ಪ್ರೀತಿಯನ್ನು ತೀರ್ಥಂಕರ್ ಒಪ್ಪಿಕೊಳ್ತಾರಾ. ಸುಮನಾಳ ಹೆಗಲ ಮೇಲೆ ಕೈ ಹಾಕಿರುವ ರೀತಿ ಪ್ರೋಮೋ ಇದೆ.
3/ 8
ಪ್ರತಿ ದಿನ ಸಂಜೆ 7ಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್ ಪ್ರಸಾರವಾಗ್ತಿದೆ. ಅಕ್ಕ ತಂಗಿಯರ ಪ್ರೀತಿ ಕಥೆಯ ಧಾರಾವಾಹಿ. ಅಕ್ಕ ತಂಗಿ ಒಟ್ಟಿಗೆ ಕೂತು ಪ್ರೋಮೋ ಮಾಡಿದ್ದಾರೆ. ಲಕ್ಷ್ಮಿಗೆ ಭಾಗ್ಯ ಒಳ್ಳೆಯ ಹುಡುಗನನ್ನು ಹುಡುಕುತ್ತಿದ್ದಾಳೆ.
4/ 8
ಸಂಜೆ 7.30ಕ್ಕೆ ಕನ್ನಡತಿ ಸೀರಿಯಲ್ ಪ್ರಸಾರವಾಗ್ತಿದೆ. ಹರ್ಷ ಮತ್ತು ಭುವಿಯನ್ನು ದೂರ ಮಾಡಲು ವರು ಪ್ಲ್ಯಾನ್ ಮಾಡಿದ್ದಾಳೆ. ಇಬ್ಬರು ಕಚೇರಿಗೆ ಹೋಗುವ ರೀತಿ ಪ್ರೋಮೋ ಮಾಡಿದ್ದಾರೆ.
5/ 8
ರಾತ್ರಿ 8 ಗಂಟೆಗೆ ಗೀತಾ ಧಾರಾವಾಹಿ ಪ್ರಸಾರವಾಗ್ತಿದೆ. ಗೀತಾ ಭಾನುಮತಿಗೆ ಬುದ್ಧಿ ಕಲಿಸುತ್ತಿದ್ದಾಳೆ. ವಿಜಿ ಗೀತಾಗೆ ಪ್ರೀತಿಯಿಂದ ಗುಲಾಬಿ ಹೂವು ನೀಡುತ್ತಿರುವ ಪ್ರೋಮೋ ಮಾಡಲಾಗಿದೆ.
6/ 8
ರಾತ್ರಿ 8.30ಕ್ಕೆ ಲಕ್ಷಣ ಧಾರಾವಾಹಿ ಪ್ರಸಾರವಾಗ್ತಿದೆ. ಧಾರಾವಾಹಿಯಲ್ಲಿ ನಕ್ಷತ್ರಾ ಭೂಪತಿ ಪ್ರೀತಿ ಪಡೆಯಲು ಒದ್ದಾಡುತ್ತಿದ್ದಾಳೆ. ಇಬ್ಬರು ಪ್ರೀತಿಯಿಂದ ಟೀ ಕುಡಿಯುತ್ತಿರುವ ಪ್ರೋಮೋ ಇದು.
7/ 8
ರಾತ್ರಿ 9 ಗಂಟೆಗೆ ರಾಮಾಚಾರಿ ಧಾರಾವಾಹಿ ಪ್ರಸಾರವಾಗ್ತಿದೆ. ಧಾರಾವಾಹಿಯಲ್ಲಿ ಚಾರು ರಾಮಾಚಾರಿಯನ್ನು ಪ್ರೀತಿ ಮಾಡ್ತಾ ಇದ್ದಾಳೆ. ಆದ್ರೆ ರಾಮಾಚಾರಿ ಪ್ರೀತಿ ಮಾಡ್ತಾ ಇಲ್ಲ. ಚಾರು ಬಂದಾಗ ರಾಮಾಚಾರಿ ಎದ್ದು ಹೋಗುವ ಪ್ರೋಮೋ ಮಾಡಿದ್ದಾರೆ.
8/ 8
ಇನ್ನು ಸೋಮವಾರದಿಂದ ಹೊಸ ಧಾರಾವಾಹಿಗಳು ಪ್ರಸಾರವಾಗ್ತಿವೆ. ರಾತ್ರಿ 9.30ಕ್ಕೆ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗಲಿದೆ. ರಾತ್ರಿ 10ಕ್ಕೆ ಪುಣ್ಯವತಿ ಧಾರಾವಾಹಿ ಪ್ರಸಾರವಾಗಲಿದೆ.