Actor Raghu: ತೆಲುಗಿನತ್ತ ಮತ್ತೊಬ್ಬ ಕನ್ನಡದ ಕಿರುತೆರೆ ನಟ, 'ನಮ್ಮನೆ ಯುವರಾಣಿ'ಯ ಸಾಕೇತ್ಗೆ ಬಂಪರ್!
ಕನ್ನಡ ಕಿರುತೆರೆತಯ ಮತ್ತೊಬ್ಬ ನಟ ತೆಲುಗಿನತ್ತ ಮುಖ ಮಾಡಿದ್ದಾರೆ. ಅಲ್ಲೊಂದು ಧಾರಾವಾಹಿ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ಕನ್ನಡದಲ್ಲಿ ಮತ್ತೆ ಧಾರಾವಾಹಿ ಮಾಡೋ ಅವಕಾಶ ಸಿಕ್ರೆ, ಖಂಡಿತಾ ಮಾಡುತ್ತೇನೆ ಎಂದಿದ್ದಾರೆ.
ನಮ್ಮನೆ ಯುವರಾಣಿ ಖ್ಯಾತಿಯ ಸಾಕೇತ್ ಎಲ್ಲರಿಗೂ ಗೊತ್ತೇ ಇದೆ. ಪ್ರೀತಿಯ ಸಾಕು ಆಗಿ ಕರುನಾಡ ಜನರ ಮನಸ್ಸು ಗೆದ್ದಿದ್ದ ರಘು ಅವರು ತೆಲುಗು ಕಿರುತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
2/ 8
ಕೆಲ ತಿಂಗಳ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿ ಮುಕ್ತಾಯ ಆಯ್ತು. ಅಷ್ಟರಲ್ಲಿ ರಘು ಅವರಿಗೆ ತೆಲುಗಿನಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಅಲ್ಲಿನ ಜನರ ಮನಸ್ಸು ಗೆಲ್ಲಲು ರೆಡಿಯಾಗಿದ್ದಾರೆ.
3/ 8
ರಾಧಾ ಕಲ್ಯಾಣ ಧಾರಾವಾಹಿ ಮೂಲಕ ರಘು ಅವರು ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿ ನೆಗೆಟಿವ್ ರೋಲ್ ಮಾಡಿ ಜನರನ್ನು ಸೆಳೆದಿದ್ದರು. ರಘು ಅವರಿಗೆ ಜನ ಬೈದುಕೊಂಡೆ ಮೆಚ್ಚಿಕೊಂಡಿದ್ದರು
4/ 8
ಮಿಸ್ಟರ್ ಆ್ಯಂಡ್ ಮಿಸಸ್ ರಂಗೇಗೌಡದಲ್ಲೂ ಸಹ ರಘು ಮೊದಲ ಬಾರಿಗೆ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿ ನಟಿ ಅಮೃತಾ ರಾಮಮೂರ್ತಿ ಜೊತೆ ನಟಿಸಿದ್ದರು.
5/ 8
ರಘು ಅವರು ನಟಿ ಅಮೃತಾ ರಾಮಮೂರ್ತಿ ಅವರನ್ನು ಮದುವೆ ಆಗಿದ್ದಾರೆ. ಇವರಿಗೆ ಮುದ್ದಾದ ಹೆಣ್ಣು ಮಗು ಇದೆ. ಅಮೃತಾ ಅವರು ಕೆಂಡಸಂಪಿಗೆ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡ್ತಾ ಇದ್ದಾರೆ.
6/ 8
ರಘು ಅವರಿಗೆ ನಮ್ಮನೆ ಯುವರಾಣಿ ತುಂಬಾ ಹೆಸರು ತಂದುಕೊಟ್ಟಿತು. ಅಣ್ಣ ಅಂದ್ರೆ ಈ ರೀತಿ ಇರಬೇಕು ಎನ್ನುವ ರೀತಿ ಸಾಕೇತ್ ಪಾತ್ರ ಜನರನ್ನು ಆವರಿಸಿತ್ತು.
7/ 8
ರಘು ಅವರು ತೆಲುಗಿನಲ್ಲಿ ಹೊಸದಾಗಿ ಶುರುವಾಗಲಿರುವ ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಆ ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ.
8/ 8
ಕನ್ನಡದಲ್ಲಿ ಮತ್ತೆ ಧಾರಾವಾಹಿ ಮಾಡೋ ಅವಕಾಶ ಸಿಕ್ರೆ, ಖಂಡಿತಾ ಮಾಡುತ್ತೇನೆ ಎಂದು ರಘು ಅವರು ಹೇಳಿದ್ದಾರೆ. ನಮ್ಮನೆ ಯುವರಾಣಿ ಪ್ರಾಜೆಕ್ಟ್ ಮುಗಿದ ಕಾರಣ ಅಲ್ಲಿಗೆ ಹೋಗಿದ್ದಾರೆ.