Ramachari Hero: ಹೇಗಿದ್ದ ಹೇಗಾದ ಗೊತ್ತಾ ನಮ್ಮ ರಾಮಾಚಾರಿ! 125 ರಿಂದ 85 ಕೆಜಿಗೆ ಇಳಿದ ರಿತ್ವಿಕ್!
ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ಕೃಪಾಕರ್ ಅವರ ನಿಜ ಜೀವನದ ನೋವಿನ ಕಥೆ ಇದು. ಹಿತರು ಹೀಯಾಳಿಸಿದ್ದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಆ ಸವಾಲಿನಲ್ಲಿ ಗೆದ್ದಿದ್ದಾರೆ. ಅವರ ಲೈಫ್ನಲ್ಲಿ ಏನಾಗಿತ್ತು ಗೊತ್ತಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಈ ಬಾರಿ ರಾಮಾಚಾರಿ ಧಾರಾವಾಹಿಯ ಹೀರೋ ಮತ್ತು ಕೆಂಡಸಂಪಿಗೆಯ ತೀರ್ಥಂಕರ್ ಪ್ರಸಾದ್ ಬಂದಿದ್ದಾರೆ.
2/ 8
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ರಾಮಾಚಾರಿ ಪಾತ್ರದಲ್ಲಿರುವ ರಿತ್ವಿಕ್ ಕೃಪಾಕರ್ ಕನ್ನಡಿಗರ ಮನಸ್ಸು ಕದ್ದಿದ್ದಾರೆ. ಅದ್ಭುತವಾಗಿ ನಟನೆ ಮಾಡ್ತಾರೆ.
3/ 8
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನಲ್ಲಿ ರಾಮಾಚಾರಿ ಮತ್ತು ತೀರ್ಥಂಕರ್ ಪ್ರಸಾದ್ ಜಂಗಿ ಕುಸ್ತಿ ಆಡ್ತಿದ್ದಾರೆ. ಇಬ್ಬರ ವೇಷ ನೋಡಿ ಎಲ್ಲರು ನಕ್ಕು ಎಂಜಾಯ್ ಮಾಡಿದ್ದಾರೆ.
4/ 8
ಈ ಫೋಟೋದಲ್ಲಿ ಇರುವವರು ಯಾರು ಅಂತ ಒಮ್ಮೆ ಸರಿಯಾಗಿ ನೋಡಿ. ಇವರು ರಾಮಾಚಾರಿ ಅಂದ್ರೆ ರಿತ್ವಿಕ್ ಕೃಪಾಕರ್. ಇದು 4 ವರ್ಷದ ಹಿಂದಿನ ಫೋಟೋ. ಆಗ 125 ಕೆಜಿ ಇದ್ರು ಅವರು.
5/ 8
ಫ್ರೆಂಡ್ಸ್ ಜತೆ ಆಚೆ ಹೋಗಿದ್ದೆ. ಎಲ್ಲರೂ ನನ್ನ ಕೆಟ್ಟದಾಗಿ ರೇಗಿಸಲು ಶುರು ಮಾಡಿದರು. ತುಂಬಾನೇ ಬೇಸರ ಆಯ್ತು. ಅವತ್ತು ನಾನು ಸಣ್ಣ ಆಗಬೇಕು ಎಂದು ನಿರ್ಧರಿಸಿದೆ ಎಂದು ರಿತ್ವಿಕ್ ಹೇಳಿದ್ದಾರೆ.
6/ 8
125 ಕೆಜಿ ಇದ್ದ ರಿತ್ವಿಕ್ ಈಗ 85 ಕೆಜಿ ಆಗಿದ್ದಾರೆ. ಸ್ನೇಹಿತರು ಹೀಯಾಳಿಸಿದ್ದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಆ ಸವಾಲಿನಲ್ಲಿ ಗೆದ್ದಿದ್ದಾರೆ. ಎಲ್ಲದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು ಎಂದು ರಿತ್ವಿಕ್ ಹೇಳಿದ್ದಾರೆ.
7/ 8
ರಾಮಾಚಾರಿ ಧಾರಾವಾಹಿಯಲ್ಲಿ ತನ್ನ ನಡೆ, ನುಡಿಯಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಚಾರು ರಾಮಾಚಾರಿಯನ್ನು ಪ್ರೀತಿ ಮಾಡ್ತಿದ್ದಾಳೆ. ಆದ್ರೆ ರಾಮಾಚಾರಿ ಒಪ್ಪುತ್ತಿಲ್ಲ.
8/ 8
ಸೀರಿಯಲ್ ಸ್ಪರ್ಧೆಗಳ ಮಧ್ಯೆ ರಾಮಾಚಾರಿ ಧಾರಾವಾಹಿ ಸೂಪರ್ ಹಿಟ್ ಆಗಿ ಓಡ್ತಾ ಇದೆ. ಟಿಆರ್ ಪಿ ಯಲ್ಲೂ ತನ್ನದೇ ಸ್ಥಾನ ಉಳಿಸಿಕೊಂಡು ಮುನ್ನುಗ್ಗುತ್ತಿದೆ.