ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಸೀರಿಯಲ್ ನೋಡುತ್ತಾರೆ.
2/ 8
ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಕಣ್ಣು ಕಳೆದುಕೊಂಡಿದ್ದಾಳೆ. ಒಂದು ವಾರದ ಮಟ್ಟಿಗೆ ರಾಮಾಚಾರಿ ಮನೆಯಲ್ಲಿ ಇದ್ದಾಳೆ. ರಾಮಾಚಾರಿ ಆಕೆಯನ್ನು ಮಗುವಿನಂತೆ ನೋಡಿಕೊಳ್ತಾ ಇದ್ದಾನೆ.
3/ 8
ರಾಮಾಚಾರಿ ಅಮೆರಿಕಾದ ಡಾಕ್ಟರ್ ರನ್ನು ಸಂಪರ್ಕಿಸಿ ಚಾರು ಅವರಿಗೆ ಕಣ್ಣು ಬರುವಂತೆ ಮಾಡುತ್ತಿದ್ದಾನೆ. ಅದನ್ನು ಕೇಳಿ ಚಾರು ಖುಷಿ ಆಗಿದ್ದಾಳೆ. ಕಣ್ಣು ಬರುತ್ತೆ ಮೊದಲಿನ ತರ ಇರಬಹುದು ಎಂದುಕೊಂಡಿದ್ದಾಳೆ.
4/ 8
ಇತ್ತ ಚಾರು ಅಮ್ಮ ಮಾನ್ಯತಾ, ತನ್ನ ಮಗಳನ್ನು ಅಣ್ಣನ ಮಗ ವಿನಿಗೆ ಕೊಡಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಹುಡುಗನನ್ನು ಕರೆಸಿ ಸಹ ಮಾತನಾಡಿದ್ದಾಳೆ.
5/ 8
ಆದ್ರೆ ಚಾರು ಅತ್ತೆ ಮಗ ವಿನಿ ಜಯಶಂಕರ್ ಎರಡನೇ ಹೆಂಡ್ತಿ ಮಗಳು ಆದ್ಯಾಳನ್ನು ಪ್ರೀತಿ ಮಾಡ್ತಾ ಇದ್ದಾನೆ. ಆದ್ಯಾ ಸಹ ಅವನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಾಳೆ.
6/ 8
ವಿನಿ ಮಾನ್ಯತಾಳನ್ನು ಕರೆದುಕೊಂಡು ಆದ್ಯಾಳನ್ನು ಭೇಟಿಯಾಗಿಲು ಬಂದಿದ್ದಾನೆ. ಆದ್ಯಾಗೆ ಅವನು ಚಾರು ಅತ್ತೆ ಮಗ ಎಂದು ಗೊತ್ತಿಲ್ಲ. ಆದ್ರೆ ಈ ಭೇಟಿ ಜಗಳಕ್ಕೆ ದಾರಿ ಮಾಡಿಕೊಡಬಹುದು.
7/ 8
ಆದ್ಯಾ ತನ್ನ ತಾಯಿ ಶರ್ಮಿಳಾ ಜೊತೆ ವಿನಿಯನ್ನು ಭೇಟಿಯಾಗಲು ಬಂದಿದ್ದಾಳೆ. ಆದ್ಯಾಳ ಪ್ರೀತಿಯನ್ನು ಶರ್ಮಿಳಾ ಮತ್ತು ಜಯಶಂಕರ್ ಒಪ್ಪಿಕೊಂಡಿದ್ದಾರೆ. ಆದ್ರೆ ಅವನು ಮಾನ್ಯತಾ ಅಣ್ಣನ ಮಗ ಎಂದು ಗೊತ್ತಿಲ್ಲ.
8/ 8
ಮಾನ್ಯತಾಗೆ ತನ್ನ ಮಗಳನ್ನು ಮದುವೆ ಆಗೋ ಹುಡುಗ ಶರ್ಮಿಳಾ ಮಗಳನ್ನು ಪ್ರೀತಿ ಮಾಡ್ತಾನೆ ಅಂತ ಗೊತ್ತಾದ್ರೆ ಆಕೆ ಸುಮ್ಮನಿರಲ್ಲ. ಏನು ಬೇಕಾದ್ರೂ ಮಾಡಬಹುದು. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.