ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
2/ 8
ಅತ್ತಿಗೆ ಸಾವಿನ ಸೇಡು ತೀರಿಸಿಕೊಳ್ಳಲು ಮಾನ್ಯತಾ ಮತ್ತು ಚಾರುಗೆ ಬುದ್ದಿ ಕಲಿಸಬೇಕು ಎಂದು ರಾಮಾಚಾರಿ ಅಂದುಕೊಳ್ತಿದ್ದಾನೆ. ಬುದ್ಧಿವಂತಿಕೆಯಿಂದಲೇ ಶಾಸ್ತಿ ಮಾಡ್ತೀನಿ ಎಂದು ಪಣ ತೊಟ್ಟಿದ್ದಾನೆ.
3/ 8
ಆದ್ರೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗಿದೆ. ರಾಮಾಚಾರಿ ಬಳಿ ಹೋಗಿ ಲವ್ ಪ್ರಪೋಸ್ ಮಾಡಿದ್ದಾಳೆ. ಅವನು ಒಪ್ಪದಿದ್ದಕ್ಕೆ ಹಿಂದೆ ಹಿಂದೆ ಹೋಗಿ ಹಿಂದೆ ನೀಡುತ್ತಿದ್ದಾಳೆ.
4/ 8
ಚಾರು ಮೊದಲೇ ಸೊಕ್ಕಿನ ಹುಡುಗಿ. ಅಹಂಕಾರವಿತ್ತು. ಮಾರ್ಡನ್ ಬೇರೆ. ತಾನು ಹೇಳಿದ್ದೇ ನಡೆಯಬೇಕು ಎಂಬ ಹಠ ಇತ್ತು. ಆದರೆ ಈಗ ಬದಲಾಗಿದ್ದಾಳೆ.
5/ 8
ನಾನು ಈಗ ಮೊದಲಿನ ರೀತಿ ಇಲ್ಲ. ತುಂಬಾ ಬದಲಾಗಿದ್ದೇನೆ ನನ್ನ ನಂಬು ಎಂದು ರಾಮಾಚಾರಿ ಬಳಿ ಚಾರು ಹೇಳಿದ್ದಾಳೆ. ಆದ್ರೆ ರಾಮಾಚಾರಿ ಒಪ್ಪುತ್ತಿಲ್ಲ.
6/ 8
ಚಾರು ಅಮ್ಮನಾಗಿರೋ ಮಾನ್ಯತಾ ಈ ಧಾರಾವಾಹಿಯಲ್ಲಿ ವಿಲನ್. ತನ್ನ ಮಗಳಿಗೆ ಕೆಟ್ಟ ಗುಣಗಳನ್ನು ಹೇಳಿಕೊಟ್ಟಿದ್ದಾಳೆ. ಗರ್ವದಿಂದ ಇದ್ದಾಳೆ.
7/ 8
ಮಾರ್ಡನ್ ಡ್ರೆಸ್ ನಿಂದ ಚಾರು ಬದಲಾಗಿದ್ದಾಳೆ. ಟ್ರೆಡಿಷನಲ್ ಡ್ರೆಸ್ ನಲ್ಲಿ ಚೆನ್ನಾಗಿ ಕಾಣ್ತಾಳೆ. ರಾಮಾಚಾರಿ ಈ ರೀತಿ ಇದ್ರೆ ಒಪ್ಪಿಗೆ ಆಗಬಹುದು ಎಂದು ಅವಳ ಭಾವನೆ.
8/ 8
ಬದಲಾಗಿರುವ ಚಾರುಳನ್ನು ರಾಮಾಚಾರಿ ಒಪ್ತಾನಾ? ಅಲ್ಲದೇ ನೋಟಕ್ಕಿಂತ ಗುಣ ಇಷ್ಟ ಆಗಬೇಕು ಎನ್ನುವನು ರಾಮಾಚಾರಿ. ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.