Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

ಚಾರು ರಾಮಾಚಾರಿ ಹುಟ್ಟುಹಬ್ಬ ಮಾಡಲು ಅವರು ಮನೆಗೆ ಬಂದಿದ್ದಳು. ರಾತ್ರೋ ರಾತ್ರಿ ಮನೆಗೆ ಬಂದ ಚಾರು ರಾಮಾಚಾರಿ ಮನೆಯವರ ಮುಂದೆ ಸಿಕ್ಕಿಹಾಕಿಕೊಂಡಿದ್ದಾಳೆ.

First published:

  • 18

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ರಾಮಾಚಾರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಚಾರು-ರಾಮಾಚಾರಿ ಗುಟ್ಟಾಗಿ ಮದುವೆಯಾಗಿದ್ದಾರೆ. ಮನೆಯಲ್ಲಿ ಈ ಸತ್ಯ ಯಾರಿಗೂ ಗೊತ್ತಿಲ್ಲ. ಗೊತ್ತಾದ್ರೆ ದೊಡ್ಡ ರಂಪ ರಾಮಾಯಣ  ಆಗೋದು ಪಕ್ಕಾ.

    MORE
    GALLERIES

  • 28

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ರಾಮಾಚಾರಿ ಹುಟ್ಟುಹಬ್ಬ ಇರುವ ಕಾರಣಕ್ಕೆ, ಚಾರು ರಾತ್ರೋ ರಾತ್ರಿ ಕಳ್ಳಿಯಂತೆ ಮನೆಗೆ ಬಂದಿದ್ದಾಳೆ. ತಾನೇ ಬಾಗಿಲು ತೆಗೆದು, ಕೇಕ್ ಸಮೇತ ತನ್ನ ಗಂಡನ ಹುಟ್ಟುಹಬ್ಬ ಮಾಡೋಣ ಎಂದು ಬಂದಿದ್ದಾಳೆ.

    MORE
    GALLERIES

  • 38

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ಚಾರು ಬಾಗಿಲು ತೆಗೆಯುವುದನ್ನು ರಾಮಾಚಾರಿ ಅತ್ತಿಗೆ ವೈಶಾಖ ನೋಡ್ತಾ ಇರ್ತಾಳೆ. ಕಳ್ಳನಾ, ದೆವ್ವನಾ ಎಂದು ಭಯಗೊಂಡು ನೋಡ್ತಾ ಇರ್ತಾಳೆ. ಅಷ್ಟರಲ್ಲಿ ಚಾರು ಕೇಕ್ ತೆಗೆದುಕೊಂಡು ಒಳಗೆ ಬರ್ತಾಳೆ. ಅದನ್ನು ನೋಡಿ ವೈಶಾಖ ಶಾಕ್ ಆಗ್ತಾಳೆ. ಇವಳು ಶೃತಿಯನ್ನು ಹುಡುಕಿಕೊಂಡು ಬಂದಿಲ್ಲ. ನನ್ನ ಗಂಡನನ್ನು ಹುಡುಕಿಕೊಂಡು ಬಂದಿಲ್ಲ. ಹಾಗಾದ್ರೆ ರಾಮಾಚಾರಿಯನ್ನೇ ಹುಡುಕಿಕೊಂಡು ಬಂದಿದ್ದಾಳೆ ಎಂದು ಗೆಸ್ ಮಾಡಿದ್ದಾಳೆ.

    MORE
    GALLERIES

  • 48

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ಚಾರು ರಾಮಾಚಾರಿ ಕೋಣೆಗೆ ಹೋಗಿ, ಅವನು ಮಲಗಿದ್ದಾಗ ಸೆಲ್ಫಿ ತೆಗೆದುಕೊಂಡಿದ್ದಾಳೆ. ಆಗ ರಾಮಾಚಾರಿಗೆ ಎಚ್ಚರವಾಗುತ್ತೆ ಗಾಬರಿಯಾಗ್ತಾನೆ. ನೀವೇನು ಮಾಡ್ತಿದ್ದೀರಾ ಎಂದು ಕೇಳ್ತಾನೆ. ಅದಕ್ಕೆ ಚಾರು ಬರ್ತ್‍ಡೇ ವಿಶ್ ಮಾಡಿದ್ದಾಳೆ. ಕೇಕ್ ಕಟ್ ಮಾಡು ಬಾ ಎಂದು ಕರೆದಿದ್ದಾಳೆ. ರಾಮಾಚಾರಿ ಯಾಕೆ ಈ ರೀತಿ ಕಾಟ ಕೊಡ್ತೀರಾ ಎಂದು ಕೇಳಿದ್ದಾನೆ.

    MORE
    GALLERIES

  • 58

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ನನ್ನ ಸಮಸ್ಯೆ ನನಗೆ. ನಿಮಗೆ ಹುಡುಗಾಟ. ನಿಮ್ಮಿಂದ ನನಗೆ ಪದೇ ಪದೇ ತೊಂದ್ರೆ ಆಗ್ತಾ ಇದೆ. ಈಗಾಗಲೇ ನಮ್ಮ ಮನೆಯಲ್ಲಿ ದೊಡ್ಡ ಯುದ್ಧ ನಡೆದಿದೆ. ಬೆಂಕಿ ಕಾವು ಇನ್ನೂ ತಣ್ಣಾಗಾಗಿಲ್ಲ. ನೀವು ತುಪ್ಪ ಸುರಿಯೋಕೆ ಬಂದ್ರಾ? ನಿಮಗೆ ಒಂದು ದೊಡ್ಡ ನಮಸ್ಕಾರ. ಇಲ್ಲಿಂದ ಮೊದಲು ಹೋಗಿ ಎಂದು ರಾಮಾಚಾರಿ ಹೇಳಿದ್ದಾನೆ.

    MORE
    GALLERIES

  • 68

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ರಾಮಾಚಾರಿ ಚಾರುವನ್ನು ಮನೆಯಿಂದ ಆಚೆ ಕಳಿಸಲು ಹೊರಡುತ್ತಾನೆ. ಆಗ ರೂಮ್ ಬಾಗಿಲು ಲಾಕ್ ಆಗಿರುತ್ತೆ. ಚಾರು ರಾಮಾಚಾರಿ ರೂಮ್‍ಗೆ ಹೋಗುವುದನ್ನು ನೋಡಿದ ವೈಶಾಖ ರೂಮ್ ಲಾಕ್ ಮಾಡಿದ್ದಾಳೆ. ರಾಮಾಚಾರಿಗೆ ಇನ್ನೂ ಟೆನ್ಶನ್ ಹೆಚ್ಚಾಗಿದೆ.

    MORE
    GALLERIES

  • 78

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ನಂತರ ರೂಮ್ ಬಾಗಿಲು ಓಪನ್ ಆಗುತ್ತೆ. ಆಗ ಮನೆಯವರೆಲ್ಲಾ ಎದ್ದು ಬಂದಿರುತ್ತಾರೆ. ಮನೆಯವರನ್ನು ನೋಡಿ ರಾಮಾಚಾರಿ ಶಾಕ್ ಆಗಿದ್ದಾನೆ. ಈಗ ರಾಮಾಚಾರಿ ಮನೆಯವರ ಮುಂದೆ ಸತ್ಯ ಒಪ್ಪಿಕೊಳ್ಳುವ ಪರಿಸ್ಥಿತಿ ಬಂದಿದೆ.

    MORE
    GALLERIES

  • 88

    Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್​ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!

    ಇಬ್ಬರನ್ನು ನೋಡಿದ ರಾಮಾಚಾರಿ ಅಪ್ಪ ನಾರಾಯಣ ಆಚಾರ್ಯರು ಪ್ರಶ್ನೆ ಮಾಡ್ತಾ ಇದ್ದಾರೆ. ಈ ಹುಡುಗಿ ಇಷ್ಟೊತ್ತಿನಲ್ಲಿ ಇಲ್ಲಿಗೆ ಏಕೆ ಬಂದ್ಲು? ಅದು ನಿನ್ನ ಕೋಣೆಯಲ್ಲಿ ಏನ್ ಮಾಡ್ತಾ ಇದ್ಲು? ಎಂದು ಪ್ರಶ್ನೆ ಮಾಡಿದ್ದಾರೆ. ರಾಮಾಚಾರಿ ಉತ್ತರ ನೀಡಲು ಆಗದೇ ಒದ್ದಾಡುತ್ತಿದ್ದಾನೆ. ರಾಮಾಚಾರಿ ಮನೆಯವರ ಮುಂದೆ ಮದುವೆ ಆದ ಸತ್ಯ ಒಪ್ಪಿಕೊಳ್ತಾನಾ ನೋಡಬೇಕು.

    MORE
    GALLERIES