ಕಲರ್ಸ್ ಕನ್ನಡ ವಾಹಿನಿಯು ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಧಾರಾವಾಹಿಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಆ ಸಾಲಿಗೆ 'ಪುಣ್ಯವತಿ' ಧಾರಾವಾಹಿ ಸೇರ್ತಾ ಇದೆ.
2/ 8
ಪ್ರತಿದಿನ ರಾತ್ರಿ 10 ಗಂಟೆಗೆ ಪುಣ್ಯವತಿ ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಡ್ಯಾನ್ಸ್ ನಲ್ಲೇ ಏನಾದ್ರೂ ಸಾಧನೆ ಮಾಡಬೇಕು ಎಂದು ಪದ್ಮಿನಿ ಹಂಬಲಿಸುತ್ತಿದ್ದಾಳೆ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ.
3/ 8
ಪದ್ಮಿನಿ ಕಾಲೇಜಿನಲ್ಲಿ ನಡೆದ ಡ್ಯಾನ್ಸ್ ಆಡಿಷನ್ ನಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಅದು ಎಲ್ಲರಿಗೂ ಇಷ್ಟ ಆಗಿದೆ. ಜಡ್ಜ್ ಗಳು ಸಹ ಡ್ಯಾನ್ಸ್ ಇಷ್ಟ ಪಟ್ಟಿದ್ದರು.
4/ 8
ಪದ್ಮಿನಿ ಡ್ಯಾನ್ಸ್ ಮಾಡಿ ಮುಂದಿನ ರೌಂಡ್ಗೆ ಸೆಲೆಕ್ಟ್ ಆಗಿದ್ದಾಳೆ. ಆ ಫೋಟೋ ಪೇಪರ್ ನಲ್ಲಿ ಬಂದಿದೆ. ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆ ಪದ್ಮಿನಿ ಅಂತ ಬಂದಿದೆ.
5/ 8
ಪೇಪರ್ ನಲ್ಲಿ ಫೋಟೋ ನೋಡಿ ಪದ್ಮಿನಿ ತುಂಬಾ ಖುಷಿಯಾಗಿದ್ದಾಳೆ. ನನ್ನ ಡ್ಯಾನ್ಸ್ ಎಲ್ಲರಿಗೂ ಇಷ್ಟ ಆಗಿದೆ. ನಾನು ಮುಂದಿನ ರೌಂಡ್ಗೆ ಸೆಲೆಕ್ಟ್ ಆಗಿದ್ದೀನಿ ಎಂದು ಸಂತೋಷವಾಗಿದ್ದಾಳೆ.
6/ 8
ತನ್ನ ತಂಗಿ ಪೂರ್ಣಿ ಬಳಿ ತನ್ನ ಖುಷಿಯನ್ನು ಹಂಚಿಕೊಳ್ತಾ ಇದ್ದಾಳೆ. ನೋಡು ಪೂರ್ಣಿ ನಾನು ಮುಂದಿನ ರೌಂಡ್ಗೆ ಸೆಲೆಕ್ಟ್ ಆಗಿದ್ದೇನೆ. ತುಂಬಾ ಖುಷಿ ಆಗ್ತಿದೆ ಎಂದು ಹೇಳಿದ್ದಾಳೆ.
7/ 8
ಆದ್ರೆ ಆ ಸಂತೋಷ ಮರು ಕ್ಷಣವೇ ಇರಲಿಲ್ಲ. ಯಾಕಂದ್ರೆ ಆ ಪೇಪರ್ ನ್ನು ಅಪ್ಪ ಓದಿದ್ರೆ, ಅಷ್ಟೇ ನಮ್ಮ ಕಥೆ ಮುಗಿತು ಎಂದು ಇಬ್ಬರು ಯೋಚ್ನೆ ಮಾಡ್ತಾರೆ. ಅಷ್ಟರಲ್ಲೇ ಅವರ ಅಪ್ಪ ಪದ್ಮಿನಿ ಎಂದು ಕೂಗುತ್ತಾರೆ.
8/ 8
ಪದ್ಮಿನಿ ತಂದೆ ಭುಜಂಗಯ್ಯ ಪೇಪರ್ ಕೊಡಿ ನಾನು ಓದಬೇಕು ಎನ್ನುತ್ತಾರೆ. ಪೇಪರ್ ನಲ್ಲಿ ಪದ್ಮಿನಿ ಫೋಟೋ ನೋಡಿದ್ರೆ ಅಲ್ಲಿಗೆ ಎಲ್ಲಾ ಸತ್ಯ ಬಯಲಾಗುತ್ತೆ. ಪದ್ಮಿನಿ ಡ್ಯಾನ್ಸ್ ಮಾಡೋ ಕನಸಿಗೆ ಬ್ರೇಕ್ ಬೀಳುತ್ತೆ.