Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನಾಯಕಿ ತಾರಿಣಿ ಮದುವೆಗೆ ತಯಾರಾಗಿದ್ದಾಳೆ. ಸಿದ್ಧಾಂತ್‍ಗೆ ಅಳುತ್ತಲೇ ಗುಡ್ ಬೈ ಹೇಳಿದ್ದಾಳೆ. ಹಾಗಾದ್ರೆ ಶಾಶ್ವತವಾಗಿ ದೂರವಾಗ್ತಾರಾ ಈ ಪ್ರೇಮಿಗಳು?

First published:

 • 18

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ.

  MORE
  GALLERIES

 • 28

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ತಾರಿಣಿ ಸಿದ್ಧಾಂತ್‍ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಳು. ಅವನಿಗೆ ತನ್ನ ಪ್ರೀತಿ ವಿಷ್ಯ ಹೇಳಿಕೊಂಡು ಮದುವೆಯಾಗಬೇಕು ಎಂದುಕೊಂಡಿದ್ದಾಳೆ. ಆದ್ರೆ ಸಿದ್ಧಾಂತ್ ಅವತ್ತೇ ತಾನು ವಿದೇಶಕ್ಕೆ ಹೋಗುವುದಾಗಿ ಹೇಳಿದ್ದ. ಅದಕ್ಕೆ ತನ್ನ ಪ್ರೀತಿ ಮುಚ್ಚಿಟ್ಟು ಧೀರಜ್ ಜೊತೆ ಮದುವೆಯಾಗಲು ಸಿದ್ಧವಾಗಿದ್ದಾಳೆ. ಹಸೆಮಣೆ ಏರಲು ರೆಡಿಯಾಗಿದ್ದಾಳೆ.

  MORE
  GALLERIES

 • 38

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ನಾನು ನಕ್ಕಾಗ ಜೊತೆಗಿದ್ರಿ. ನಾನು ಅತ್ತಾಗ ಜೊತೆಗಿದ್ರಿ. ಕಷ್ಟ ಬಂದಾಗ ನನ್ನ ಜೊತೆ ನಿಂತವರೇ ನೀವು. ಆದ್ರೆ ಇನ್ಮೇಲೆ ನನ್ನ ಕಷ್ಟ ನನಗೆ. ನನ್ನ ಖುಷಿ ನನಗೆ. ಆದ್ರೆ ನೀವು ನೆನಪಿರುತ್ತೀರಿ ಸಿದ್ಧಾಂತ್ ಎಂದು ತಾರಿಣಿ ಹೇಳಿದ್ದಾರೆ.

  MORE
  GALLERIES

 • 48

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ನಾನು ಅಷ್ಟೇ ತಾರಿಣಿ ನಿನ್ನ ಯಾವತ್ತೂ ಮರೆಯಲ್ಲ. ಆಸ್ಟ್ರೇಲಿಯಾಗೆ ಹೋದ್ರೂ ಕಾಲ್ ಮಾಡ್ತಾ ಇರ್ತೇನೆ. ಈ ಕಣ್ಣಲ್ಲೇ ನಕ್ಷತ್ರಾ ಹೊಳೆಯುತ್ತಿತ್ತು. ಆ ಬೆಳಕೇ ನನಗೆ ಇಷ್ಟ. ಈ ಮಳೆಯಲ್ಲ ಎಂದ ಅಳ್ತಿದ್ದ ತಾರಿಣಿಗೆ ಸಿದ್ಧಾಂತ್ ಹೇಳಿದ್ದಾನೆ.

  MORE
  GALLERIES

 • 58

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ಆದ್ರೆ ನನಗೆ ಮಳೆನೇ ಇಷ್ಟ. ತಾರಿಣಿ ಅಳುತ್ತಾ ಸಿದ್ಧಾಂತ್‍ಗೆ ಗುಡ್ ಬೈ ಹೇಳಿದ್ದಾಳೆ. ಇದು ಸಿದ್ಧಾಂತ್ ಮತ್ತು ತಾರಿಣಿಯ ಕೊನೆ ಭೇಟಿ. ಬೆಳಗಾದ್ರೆ ತಾರಿಣಿ ಮದುವೆ.

  MORE
  GALLERIES

 • 68

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ನನ್ನ ಮದುವೆ ಪ್ರೀತಿಸಿದ ಹುಡುಗನ ಜೊತೆಯಲ್ಲ. ಯಾರು ಹೇಳಿದ್ದು ಪ್ರೀತಿಸಿದ ಹುಡುಗನನ್ನೇ ಮದುವೆಯಾಗಬೇಕು ಅಂತ. ಆ ರೂಲ್ಸ್ ಏನು ಇಲ್ವ ತಾನೇ ಎಂದು ತಾರಿಣಿ ತನ್ನನ್ನೇ ತಾನು ಕೇಳಿಕೊಳ್ತಾ ಇದ್ದಾಳೆ.

  MORE
  GALLERIES

 • 78

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ಮದುವೆಯಾದ ಮೇಲೆ ಪ್ರೀತಿ ಹುಟ್ಟಬಹುದು. ನಾನು ಧೀರಜ್ ನ ಮದುವೆ ಆಗ್ತಾ ಇದೀನಿ. ಮದುವೆಯಾದ ಮೇಲೆ ಸಿದ್ಧಾಂತ್‍ನ ಪ್ರೀತಿ ಮರೆಯುತ್ತೇನೆ ಎಂದು ಹೇಳ್ತಾ ಇದ್ದಾಳೆ.

  MORE
  GALLERIES

 • 88

  Olavina Nildana: ಹಸೆಮಣೆ ಏರಲು ಸಜ್ಜಾದ ತಾರಿಣಿ, ಸಿದ್ಧಾಂತ್‌ಗೆ ಬರೀ ಕಣ್ಣೀರಿನ ವಿದಾಯ!

  ತಾರಿಣಿ ಮದುವೆ ಆಗ್ತಿರುವ ಧೀರಜ್ ಕೆಟ್ಟವನು. ತಾರಿಣಿ ಮೇಲೆ ಸೇಡು ತೀರಿಸಿಕೊಳ್ಳಲು ಈ ಮದುವೆ ಆಗ್ತಾ ಇದ್ದಾನೆ. ಹಾಗಾದ್ರೆ ತಾರಿಣಿ ಮದುವೆ ಯಾರ ಜೊತೆ ಆಗುತ್ತೆ ಎನ್ನುವುದೇ ಕುತೂಹಲ.

  MORE
  GALLERIES