ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರ ಆಗ್ತಾ ಇರೋ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ನಟಿ ತಾರಿಣಿ ತುಂಬಾ ಇಷ್ಟ ಆಗಿದ್ದಾಳೆ.
2/ 8
ಧಾರಾವಾಹಿಯಲ್ಲಿ ತಾರಿಣಿಯ ಮುಗ್ಧತೆ. ಆಕೆಗೆ ಮನೆಯವರ ಮೇಲಿರುವ ಗೌರವ, ಸಿದ್ಧಾಂತ್ ಮೇಲಿನ ಪ್ರೀತಿ. ಅಯ್ಯೋ ಎಷ್ಟು ಒಳ್ಳೆ ಹುಡುಗಿಯೆಪ್ಪಾ ಎನ್ನಿಸಿಕೊಂಡಿದ್ದಾಳೆ ಅಭಿಮಾನಿಗಳಿಂದ.
3/ 8
ತಾರಿಣಿಯ ನಿಜವಾದ ಹೆಸರು ಅಮಿತಾ ಕುಲಾಲ್. ಕರಾವಳಿಯ ಹುಡುಗಿ. ಧಾರಾವಾಹಿಯಲ್ಲಿ ಮಲೆನಾಡ ಹುಡುಗಿ ಪಾತ್ರ ಮಾಡುತ್ತಿದ್ದಾಳೆ. ಹಿರಿತೆರೆಯಿಂದ ಬಣ್ಣದ ಬದುಕು ಆರಂಭಿಸಿದ್ದಾರೆ.
4/ 8
ನಟ ಸೃಜನ್ ಲೋಕೇಶ್ ಅವರ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಿಫ್ಟ್ ಬಾಕ್ಸ್, ಆ ಎರಡು ವರ್ಷಗಳು ಚಿತ್ರದಲ್ಲೂ ಅಮಿತಾ ನಟಿಸಿದ್ದಾರೆ.
5/ 8
ಅಮಿತಾ ಸಣ್ಣ ವಯಸ್ಸಿನಿಂದಲೂ ಮಾಡೆಲಿಂಗ್ ಅಂದ್ರೆ ಇಷ್ಟ ಇತ್ತಂತೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ. ಮುಂಬೈನಲ್ಲಿ ಹಲವು ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.
6/ 8
ತೆಲುಗಿನ ರೌಡಿಗಾರಿ ಪೆಳ್ಳಂ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಪರಭಾಷೆಯಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
7/ 8
ಅಮಿತಾ ಮಂಗಳೂರು ಕನ್ನಡ ಮಾತನಾಡುತ್ತಿದ್ದ ಕಾರಣ ಎಷ್ಟೋ ಅವಕಾಶಗಳು ಕೈ ತಪ್ಪಿವೆ ಅಂತೆ. ಆಗ ಬೇಸರ ಮಾಡಿಕೊಂಡಿದ್ರಂತೆ. ಈಗ ಧಾರಾವಾಹಿಯಲ್ಲಿ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ.
8/ 8
ಒಲವಿನ ನಿಲ್ದಾಣ ಧಾರಾವಾಹಿಗೆ ಆಯ್ಕೆ ಆಗಿರುವುದು ತುಂಬಾ ಖುಷಿ ಆಗಿದೆ. ಕಿರುತೆರೆ ನನಗೆ ತುಂಬಾ ಇಷ್ಟ ಎಂದು ಅಮಿತಾ ಹೇಳಿದ್ದಾರೆ.