ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಧಾರಾವಾಹಿ ಜನರಿಗೆ ಇಷ್ಟವಾಗಿದೆ. ಇದು ಜನರ ಮನಸ್ಸಿನಲ್ಲಿ ನಾನ್ ಸ್ಟಾಪ್ ಆಗಿ ಓಡ್ತಾ ಇದೆ.
2/ 8
ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ.
3/ 8
ಧಾರಾವಾಹಿಯಲ್ಲಿ ಸಿದ್ಧಾಂತ್ ಪಾತ್ರ ಮಾಡುತ್ತಿರುವವರ ನಿಜವಾದ ಹೆಸರು ಅಕ್ಷಯ್ ನಾಯಕ್. ಈ ನಟ ಧಾರಾವಾಹಿಗಿಂತ ಮುಂಚೆ ಹಲವು ಅವಮಾನಗಳನ್ನು ಎದುರಿಸಿದ್ದಾರೆ.
4/ 8
ಅಕ್ಷಯ್ ನಾಯಕ್ ನಟನೆಯಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದು ಹಂಬಲಿಸುತ್ತಿದ್ದಾಗ, ಕೆಲವರು ಶೂಟಿಂಗ್ ಇದೆ ಬನ್ನಿ ಎಂದು ಕರೆದು, ರಿಜೆಕ್ಟ್ ಮಾಡಿ ಅವಮಾನ ಮಾಡಿದ್ರಂತೆ.
5/ 8
ಸೀರಿಯಲ್ವೊಂದರ ಆಡಿಷನ್ ಇದೆ ಬನ್ನಿ ಎಂದು ಕರೆದಿದ್ರಂತೆ. ಅಲ್ಲಿ ಮೇಕಪ್ ಮಾಡಿ, ಕಾಸ್ಟ್ಯೂಮ್ ಹಾಕಿಸಿ, ಪಾತ್ರ ಇಲ್ಲ ವಾಪಸ್ ಹೋಗಿ ಎಂದ್ರಂತೆ. ಇದರಿಂದ ಅಕ್ಷಯ್ ತುಂಬಾ ನೊಂದಿದ್ದರಂತೆ.
6/ 8
ಅಕ್ಷಯ್ ನಾಯಕ್ ಅವರು ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟಿಸಲು ಶುರು ಮಾಡಿದ ಮೇಲೆ ಜನ ಮೆಚ್ಚಿಕೊಂಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಕರೆದು ಸನ್ಮಾನ ಮಾಡಿದ್ದಾರಂತೆ.
7/ 8
ಅಕ್ಷಯ್ ನಾಯಕ್ ಮಂಡ್ಯದವರು. ಓದಿದ್ದು ಮೈಸೂರು ಮಂಡ್ಯದಲ್ಲಿ. ಆದ್ರೆ ಇವರಿಗೆ ಮೊದಲಿನಿಂದಲೂ ನಟನೆ ಮೇಲೆ ಹೆಚ್ಚು ಆಸಕ್ತಿ ಇತ್ತಂತೆ.
8/ 8
ಸದ್ಯ ಧಾರಾವಾಹಿಯಲ್ಲಿ ಸಿದ್ದು ಮನೆ ಹರಾಜಿಗೆ ಬಂದಿದೆ. ಬ್ಯಾಂಕ್ನವರು 4 ದಿನದಲ್ಲಿ 40 ಲಕ್ಷ ಕಟ್ಟಲು ಹೇಳಿದ್ದಾರೆ. ಅದಕ್ಕೆ ಸಿದ್ಧಾಂತ್ ಮನೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾನೆ.