ಡಿಸೆಂಬರ್ 31 ಜನವರಿ 01ರಂದು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅದಕ್ಕೆ ಕಲರ್ಸ್ ಕನ್ನಡದಲ್ಲಿ ಜನವರಿ 2 ರಿಂದ ಹೊಸ ಕತೆಗಳು ಪ್ರಾರಂಭ ಆಗಲಿವೆ.
2/ 8
ಜನವರಿ 2 ರಂದು ಪುಣ್ಯವತಿ ಮತ್ತು ತ್ರಿಪುರ ಸುಂದರಿ ಧಾರಾವಾಹಿಗಳು ಪ್ರಸಾರವಾಗಲಿವೆ. ತ್ರಿಪುರ ಸುಂದರಿ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
3/ 8
ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಸಲಿದ್ದಾರೆ. ಆಮ್ರಪಾಲಿ ಎನ್ನುವ ಪಾತ್ರ ನಿರ್ವಹಿಸಲಿದ್ದಾರೆ.
4/ 8
ಗಂಧರ್ವ ಲೋಕದಿಂದ ತಪ್ಪಿಸಿಕೊಂಡು ಬಂದಿರುವ ರಾಜಕುಮಾರನನ್ನು ಹುಡುಕಲು ಆಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ. ರಾಜಕುಮಾರನ್ನು ಕರೆ ತರು ಜವಾಬ್ದಾರಿ ಈಕೆ ಮೇಲಿದೆ.
5/ 8
ರಾಜಕುಮಾರನಿಲ್ಲದೇ ಗಂಧರ್ವ ಲೋಕಕ್ಕೆ ಮರಳುವುದಿಲ್ಲ ಎಂದು ಶಪಥ ಮಾಡಿ ಬಂದಿದ್ದಾಳೆ ಆಮ್ರಪಾಲಿ. ರಾಜಕುಮಾರನ್ನು ಹುಡುಕಿ, ಅವನ ಮನವೊಲಿಸಿ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗಬೇಕು.
6/ 8
ದಿವ್ಯಾ ಸುರೇಶ್ ರನ್ನು ತ್ರಿಪುರ ಸುಂದರಿ ರೂಪದಲ್ಲಿ ನೋಡಿ ಜನ ಮೆಚ್ಚುತ್ತಿದ್ದಾರೆ. ಸುಂದರಿಯಂತೆ ಕಾಣ್ತಾ ಇದ್ದಾಳೆ ತ್ರಿಪುರ ಸುಂದರಿ ಎಂದು ಹೇಳ್ತಾ ಇದ್ದಾರೆ. ಅಲ್ಲದೇ ಇದೆ ಪ್ರೋಮೋ ನೋಡಿರುವ ಜನ ಬಾಹುಬಲಿ ಸೀರಿಯಲ್ ಇದು ಎಂದು ಹೇಳ್ತಾ ಇದ್ದಾರೆ.
7/ 8
ಬಿಗ್ ಸೀಸನ್ 08 ರಲ್ಲಿ ದಿವ್ಯಾ ಸುರೇಶ್ ಹೆಸರು ಮಾಡಿದ್ದರು. ಟಾಪ್ 5 ನಲ್ಲಿ ಕೂಡ ಇದ್ರು. ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಮತ್ತು ಇವರು ಆತ್ಮೀಯ ಸ್ನೇಹಿತರಾಗಿದ್ದರು.
8/ 8
ದಿವ್ಯಾ ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಅದು ಅರ್ಧಕ್ಕೆ ನಿಲ್ಲುತ್ತೆ ಎಂದು ಸುದ್ದಿ ಇತ್ತು. ಆದ್ರೆ ಈಗ ಈ ಧಾರಾವಾಹಿ ಮೂಲಕ ಅದನ್ನು ಸುಳ್ಳು ಮಾಡ್ತಾರಾ ನೋಡಬೇಕು.