ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಕಾರ್ಯಕ್ರಮಕ್ಕೆ ಪುಣ್ಯವತಿಯ ಪದ್ಮಿನಿ ಬಂದಿದ್ದಾರೆ.
2/ 8
ಕಲರ್ಸ್ ಕನ್ನಡದಲ್ಲಿ ಜನವರಿ 2 ರಿಂದ ರಾತ್ರಿ 10ಕ್ಕೆ ಪುಣ್ಯವತಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ ಅದರ ಪ್ರಮೋಶನ್ ಗೆ ಪುಣ್ಯವತಿ ನಟಿ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಬಂದಿದ್ದಾರೆ.
3/ 8
ಪುಣ್ಯವತಿ ನಟಿ ಪದ್ಮಿನಿಯನ್ನು ನಟಿ, ನಮ್ಮಮ್ಮ ಸೂಪರ್ ಸ್ಟಾರ್ ಜಡ್ಜ್ ಆದ ತಾರ ಅನುರಾಧ ಅವರು ಮೆಚ್ಚಿಕೊಂಡಿದ್ದಾರೆ. ಧಾರಾವಾಹಿಗೆ ಶುಭಕೋರಿದ್ದಾರೆ.
4/ 8
ನ್ಯಾಷನಲ್ ಅವಾರ್ಡ್ ವಿನ್ನರ್ ತಾರಾ ಅನುರಾಧ ಅವರು, ಮೊದಲ ಬಾರಿಗೆ ಹೊಸ ಪ್ರತಿಭೆಗೆ ಮೇಕಪ್ ಮಾಡುವ ಮೂಲಕ ಪುಣ್ಯವತಿಯನ್ನು ವೆಲ್ ಕಮ್ ಮಾಡಿದ್ದಾರೆ.
5/ 8
ಪುಣ್ಯವತಿ ಅನ್ನೋ ಸೀರಿಯಲ್ ನಲ್ಲಿ ನಿಜವಾಗ್ಲೂ, ಗ್ರಾಮೀಣ ಪ್ರತಿಭೆಯನ್ನು ಕರೆ ತಂದಿದ್ದಾರೆ. ಅದು ನನಗೆ ತುಂಬಾ ಖುಷಿ ಆಯ್ತು ಎಂದು ತಾರ ಅವರು ಹೇಳಿದ್ದಾರೆ.
6/ 8
ನನಗೆ ತುಂಬಾ ಖುಷಿ ಆಗ್ತಿದೆ. ನನ್ನಷ್ಟು ಪುಣ್ಯವತಿ ಯಾರು ಇಲ್ಲ ಎಂದು ನಟಿ ಹೇಳಿದ್ದಾರೆ. ವೇದಿಕೆಯಲ್ಲಿದ್ದವರು ಹೊಸ ಧಾರಾವಾಹಿಗೆ ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ರು.
7/ 8
ನಂದು ಅಂತ ಒಂದೇ ಒಂದು ಕನಸು ಇದೆ. ಡ್ಯಾನ್ಸ್ ನಿಂದ ಪರಪಂಚವನ್ನೇ ಗೆಲ್ಲಬೇಕು ಎಂತಿದ್ದಾಳೆ ಪುಣ್ಯವತಿ. ಆದ್ರೆ ಆಕೆಯ ಆಸೆಗೆ ಅವರ ಅಪ್ಪ ಸಾಥ್ ನೀಡಲ್ಲ.
8/ 8
ಕುಣಿವ ಕನಸಿಗೆ ಬ್ರೇಕ್ ಹಾಕಿ, ಪುಣ್ಯವತಿಗೆ ಮದುವೆ ಎಂಬ ಬಂಧನದಲ್ಲಿ ಸಿಲುಕಿಸುತ್ತಿದ್ದಾರೆ. ಧಾರಾವಾಹಿ ಪ್ರೋಮೋ ಜನ ಇಷ್ಟ ಪಟ್ಟಿದ್ದಾರೆ. ಧಾರಾವಾಹಿ ನೋಡಲು ಕಾಯ್ತಾ ಇದ್ದಾರೆ.