Nannamma Super Star: 'ಒಲವಿನ ನಿಲ್ದಾಣ'ದ ಜೊತೆ 'ಲಕ್ಷಣ', 'ನನ್ನಮ್ಮ ಸೂಪರ್ ಸ್ಟಾರ್'ನಲ್ಲಿ ಸಂಕ್ರಾಂತಿಯ ಸಿಹಿ ಹೂರಣ!
ನನ್ನಮ್ಮ ಸೂಪರ್ ಸ್ಟಾರ್ ಸೀನಸ್ 2 ಕಾರ್ಯಕ್ರಮಕ್ಕೆ ಲಕ್ಷಣ ಮತ್ತು ಒಲವಿನ ನಿಲ್ದಾಣ ಧಾರಾವಾಹಿಯ ನಾಯಕ, ನಾಯಕಿ ಬಂದಿದ್ದರು. ಸಂಕ್ರಾಂತಿ ಹಬ್ಬದ ಸಂಭ್ರವನ್ನು ಹೆಚ್ಚುಮಾಡಿದ್ದರು. ಹಾಗಿದ್ರೆ ಹೇಗಿತ್ತು 'ಒಲವಿನ ನಿಲ್ದಾಣ'ದ ಜೊತೆ 'ಲಕ್ಷಣ'?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸೀನಸ್ 2 ನ ಪ್ರಸಾರ ವೇಳೆ ಬದಲಾಗಿದೆ. ಇನ್ಮುಂದೆ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.
2/ 8
ನನ್ನಮ್ಮ ಸೂಪರ್ ಸ್ಟಾರ್ ಸೀನಸ್ 2 ಕಾರ್ಯಕ್ರಮಕ್ಕೆ ಲಕ್ಷಣ ಮತ್ತು ಒಲವಿನ ನಿಲ್ದಾಣ ಧಾರಾವಾಹಿಯ ನಾಯಕ, ನಾಯಕಿ ಬಂದಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರವನ್ನು ಹೆಚ್ಚು ಮಾಡ್ತಾ ಇದ್ದಾರೆ.
3/ 8
ಸಿದ್ಧಾಂತ್ ಮತ್ತು ತಾರಿಣಿ, ನಕ್ಷತ್ರಾ ಮತ್ತು ಭೂಪತಿಗೆ ಕಾರ್ಯಕ್ರಮದಲ್ಲಿ ಡಮಾಲ್-ಡಿಮಿಲ್ ಗೇಮ್ ಕೊಡಲಾಗಿದೆ. ಯಾರು ಈ ಗೇಮ್ ಗೆಲ್ತಾರೆ ನೋಡಬೇಕು.
4/ 8
2 ಜೋಡಿಗಳು ವಿಭಿನ್ನ ರೀತಿ ಡ್ರೆಸ್ ಧರಿಸಿ ಬಲೂನ್ ಗಳನ್ನು ಡಮ್ ಅನ್ನಿಸಬೇಕು. ಬಲೂನ್ ಗಳನ್ನು ಯಾರು ಹೆಚ್ಚು ಹೊಡೆಯುತ್ತಾರೋ, ಅವರು ಟಾಸ್ಕ್ ಗೆಲ್ಲುತ್ತಾರೆ.
5/ 8
ಬಲೂಲ್ ಟಾಸ್ಕ್ ಆಡಲು ಸಿದ್ಧಾಂತ್ ಮತ್ತು ತಾರಿಣಿ ಒದ್ದಾಡಿದ್ದಾರೆ. ನಂದು ಹಾರ್ಟ್ ಮಾತ್ರ ಅಲ್ಲ ಕರುಳೇ ಕಿತ್ತು ಬಂತು ಎಂದು ತಾರಿಣಿ ಹೇಳಿದ್ದಾರೆ.
6/ 8
ನಂಗೆ ಗೊತ್ತಿರಬೇಕಿತ್ತುಇವರು ಎಂಥಾದ್ರೂ ಒಂದು ಇಡ್ತಾರೆ ಈ ರೀತಿ ಗೇಮ್, ನಮಗೆ ಕಷ್ಟ ಮಾಡಲಿಕ್ಕೆ ಎಂದು ತಾರಿಣಿ ಮಂಗಳೂರು ಭಾಷೆಯಲ್ಲಿ ಹೇಳಿದ್ದಾರೆ.
7/ 8
ತಾರಿಣಿ ಮಾತು ಕೇಳಿ ಜಡ್ಜ್ ಆಗಿರುವ ನಟಿ ತಾರಾ, ಎಂಥ ಗೊತ್ತುಂಟಾ, ಎಲ್ಲವನ್ನೂ ನೀವೇ ಆಡಬೇಕು ಎಂದಿದ್ದಾರೆ. ಎಲ್ಲರೂ ಜೋರಾಗಿ ನಕ್ಕಿದ್ದಾರೆ.
8/ 8
ಒಟ್ಟಿನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮದಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಎಲ್ಲರೂ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.