ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮ ಎಲ್ಲರನ್ನು ಸೆಳೆದಿದೆ. ಅದು ಈಗ ಕ್ವಾರ್ಟರ್ ಫಿನಾಲೆ ತಲುಪಿದೆ.
2/ 8
ಕ್ವಾಟರ್ ಫಿನಾಲೆಗೆ ಎಲ್ಲರು ಗ್ರ್ಯಾಂಡ್ ಆಗಿ ರೆಡಿಯಾಗಿದ್ದಾರೆ. ಜಡ್ಜ್ ಗಳಾದ ತಾರಾ, ನಟಿ ಅನುಪ್ರಭಾಕರ್ ಚೆಂದವಾಗಿ ರೆಡಿಯಾಗಿದ್ದಾರೆ. ಡ್ಯಾನ್ಸ್ ಮಾಡುತ್ತಾ ಕಾರ್ಯಕ್ರಮಕ್ಕೆ ಎಂಟ್ರಿ ಆಗಿದ್ದಾರೆ.
3/ 8
ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಕ್ವಾರ್ಟರ್ ಫಿನಾಲೆಗೆ ಬಿಗ್ ಬಾಸ್ ಸ್ಪರ್ಧಿಗಳು ಬಂದಿದ್ದಾರೆ. ಕಾವ್ಯಶ್ರೀ ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಬಂದಿದ್ದಾರೆ.
4/ 8
ಬಿಗ್ ಬಾಸ್ ಸೀಸನ್ 09 ರ ವಿನ್ನರ್ ರೂಪೇಶ್ ಶೆಟ್ಟಿ ಹಾಡು ಹೇಳಿದ್ದಾರೆ. ಅದಕ್ಕೆ ಸೃಜನ್ ಲೋಕೇಶ್ ರೇಗಿಸಿದ್ದಾರೆ. ಎಲ್ಲರೂ ನಕ್ಕು ಎಂಜಾಯ್ ಮಾಡಿದ್ದಾರೆ.
5/ 8
ಕಾವ್ಯಶ್ರೀ ಗೌಡ, ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಗೊಂಬೆ ಜೊತೆ ತಮಾಷೆ ಮಾಡಿದ್ದಾರೆ. ನಾನೊಂದು ಗೊಂಬೆ, ನೀನೊಂದು ಗೊಂಬೆ ಎಂದು ಹೇಳಿದ್ದಾರೆ.
6/ 8
ಇನ್ನು ಜಡ್ಜ್ ಆಗಿರುವ ಸೃಜನ್ ಲೋಕೇಶ್, ಆರ್ಯವರ್ಧನ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನೀವು ನಿಮ್ಮ ಹೆಂಡ್ತಿಗೆ ದಿನಾ ಹೇಳುವ ಸುಳ್ಳುಗಳನ್ನು ಹೇಳಿ ಎಂದು ಹೇಳಿದ್ದಾರೆ.
7/ 8
ಯಾರ ಜೊತೆಗೂ ಮಾತನಾಡಲ್ಲ. ಕಷ್ಟ ಪಟ್ಟು ದುಡಿಯುತ್ತೇನೆ. ಚೆನ್ನಾಗಿ ನೋಡಿಕೊಳ್ತೇನೆ ಎಂದು ದಿನ ಸುಳ್ಳು ಹೇಳ್ತೇನೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
8/ 8
ಬಿಗ್ ಬಾಸ್ ಸ್ಪರ್ಧಿಗಳು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಸ್ಪರ್ಧಿಗಳ ಜೊತೆ ಗೇಮ್ ಆಡಿ ಎಂಜಾಯ್ ಮಾಡಿದ್ದಾರೆ. ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.