ಡಾಲಿ ಧನಂಜಯ್ ಸ್ಯಾಂಡಲ್ವುಡ್ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಹಲವು ಕನ್ನಡ ಹಿಟ್ ಸಿನಿಮಾಗಳನ್ನು ನೀಡಿ ಕನ್ನಡಿಗರ ಹೃದಯ ಗೆದ್ದಿದ್ದಾರೆ.
2/ 8
ಡಾಲಿ ನಟನೆಗೆ ಇಳಿದು 10 ವರ್ಷ ಆಗಿದೆ. ಅದಕ್ಕೆ ಕಲರ್ಸ್ ಕನ್ನಡದ ವತಿಯಿಂದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಟನಿಗೆ ಸ್ಪೆಷಲ್ ಟ್ರಿಬ್ಯೂಟ್ ಅರ್ಪಿಸಲಾಗಿದೆ.
3/ 8
ಡಾಲಿ ಅವರು ಬೆಂಗಳೂರಿಗೆ ಹೀರೋ ಆಗಲು ಬಂದಿದ್ದರು. ಆಗ ಅವರು ಅನುಭವಿಸಿದ ನೋವುಗಳು, ಅವುಗಳನ್ನು ಅವರು ಮೆಟ್ಟಿ ನಿಂತಿದ್ದನ್ನು ಸಾಂಗ್ ಮೂಲಕ ಹೇಳಿದ್ದಾರೆ.
4/ 8
ಮೊದಲನೇ ಸಿನಿಮಾ ಸೋತು. ಮತ್ತೆ ಹೀರೋ ಆಗಿ ಮೇಲೆಳಲು ರಾಟೆ ತರ ತಿರುಗಿದ್ದಾರಂತೆ ಡಾಲಿ ಧನಂಜಯ್. ಅವರು ಸಿನಿಮಾ ರಂಗದಲ್ಲಿ ಈಗ ಸಾಕಷ್ಟು ಹೆಸರು ಮಾಡಿದ್ದಾರೆ.
5/ 8
ಸೋಲಿನ ಮೇಲೆ ಸೋಲಗಳ ಜೊತೆ ಮತ್ತೆ ಮತ್ತೆ ಗುದ್ದಾಡಿ, 10 ವರ್ಷಗಳ ಆಕ್ರೋಶವನ್ನು ಸಿನಿಮಾ ಮೂಲಕ ತೋರಿಸಿದ್ದಾರೆ ಡಾಲಿ ಧನಂಜಯ್. ಇನ್ನಷ್ಟು ಹೊಸ ಸಿನಿಮಾಗಳನ್ನು ನೀಡಲಿದ್ದಾರೆ.
6/ 8
ಚೆಲುವು ಕನ್ನಡಿಗರ ಉಸಿರಲ್ಲಿ ಹಾಡಾಗಿ ಬಾಳುವ ತವಕ, ಕಾಯುವೆನು ಎಂದಾದರೂ ಒಂದು ದಿನ, ನನ್ನ ಸ್ವರಗಳಿಗೆ ರಾಗಾ ಸಿಗುವ ತನಕ ಎಂದು ಡಾಲಿ ವೇದಿಕ ಮೇಲೆ ಹೇಳಿದ್ದಾರೆ. ಅದು ಒಂದು ಮಟ್ಟಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
7/ 8
ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವು ಶನಿವಾರ, ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. ಕಾರ್ಯಕ್ರಮಕ್ಕೆ ಈ ಬಾರಿ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಬಂದಿದ್ದಾರೆ.
8/ 8
ಜಮಾಲಿಗುಡ್ಡ ಚಿತ್ರದ ಪ್ರಮೋಶನ್ ಗಾಗಿ ಬಂದಿದ್ದಾರೆ. ಆ ವೇಳೆ ಡಾಲಿ ಅವರಿಗೆ ಸ್ಪೆಷಲ್ ಟ್ರಿಬ್ಯೂಟ್ ಮೂಲಕ ಗೌರವ ಸಲ್ಲಿಸಲಾಗಿದೆ. ಡಾಲಿ ಖುಷಿ ಆಗಿದ್ದಾರೆ.