ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ 7.30ಕ್ಕೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮ ಪ್ರಸಾರವಾಗುತ್ತೆ. ಕಾರ್ಯಕ್ರಮಕ್ಕೆ ಕೆಂಡಸಂಪಿಗೆ ಧಾರಾವಾಹಿಯಿಂದ ತೀರ್ಥಂಕರ್ ಪ್ರಸಾದ್, ಸುಮನಾ ಬಂದಿದ್ದಾರೆ.
2/ 8
ನೀವು ಸೀರಿಯಲ್ ಸುಮನಾ ನೋಡಿದ್ರಿ. ಆದ್ರೆ ಇವಳು ಜೂನಿಯರ್ ಸುಮನಾ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನ ಗೊಂಬೆ ಎನ್ನುವ ಸ್ಪರ್ಧಿ ಸುಮನಾ ಪಾತ್ರ ಮಾಡ್ತಾ ಇದ್ದಾಳೆ.
3/ 8
ಇನ್ನು ಕೆಂಡಸಂಪಿಗೆ ಸೀರಿಯಲ್ ಟೀಂ ಮಾತ್ರ ಅಲ್ಲ, ರಾಮಾಚಾರಿ ಧಾರಾವಾಹಿ ತಂಡದಿಂದ ಚಾರು ಮತ್ತು ರಾಮಾಚಾರಿ ಬಂದಿದ್ದಾರೆ. ಕ್ರಿಸ್ ಮಸ್ ಸ್ಪೆಷಲ್ ಗೆ ಕಾರ್ಯಕ್ರಮ ಮಾಡ್ತಾ ಇದ್ದಾರೆ.
4/ 8
ಇನ್ನೂ ಜೂನಿಯರ್ ಚಾರು ಸಹ ಇದ್ದಾರೆ. ಚಾರು ಆಗಿ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ನ ನಿರೂಪಕಿ ವಂಶಿ. ವಂಶಿ ಅಂದ ಮೇಲೆ ಕೇಳಬೇಕೇ? ನಟನೆ ಅವಳ ಬ್ಲಡ್ ನಲ್ಲೇ ಇದೆ.
5/ 8
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮದ ವೇದಿಕೆಯಲ್ಲಿ ಜೂನಿಯರ್ ಚಾರು ಮತ್ತು ಸುಮನಾ ಜಗಳ ಮಾಡಿಕೊಂಡಿದ್ದಾರೆ. ತಮ್ಮ ಪಾತ್ರ ಹೆಚ್ಚೆಂದು ಹೇಳಿಕೊಂಡಿದ್ದಾರೆ.
6/ 8
ಕಾಲೊನಿ, ಡಾಲರ್ಸ್ ಕಾಲೊನಿ ಎಂದು ಇಬ್ಬರು ಜಗಳ ಮಾಡಿದ್ದಾರೆ. ನೀನು ಹೂವು ಕಟ್ಟುವವಳು ಎಂದು ಚಾರು ರೇಗಿಸಿದ್ರೆ, ನೀನು ಕಿವಿಯಲ್ಲಿ ಹೂವು ಇಡುವವಳು ಎಂದು ಸುಮನಾ ಹೇಳ್ತಾರೆ.
7/ 8
ನಾನು ರಾಮಾಚಾರಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಚಾರು ಆಗಿರುವ ವಂಶಿ ಹೇಳಿದ್ರೆ, ನಾನು ನಮ್ಮ ಸಾಹೇಬ್ರನ್ನು ಮದುವೆ ಆಗಿದ್ದೇನೆ ಎಂದು ಸುಮನಾ ಆಗಿರುವ ಗೊಂಬೆ ಹೇಳ್ತಾರೆ.