ರಾಜಾ ರಾಣಿ ಮೊದಲ ಸೀಸನ್ ಗೆ ಸ್ಪರ್ಧಿಗಳಾಗಿ ಸಮೀರಾಚಾರ್ಯ ಮತ್ತು ಶ್ರಾವಣಿ ದಂಪತಿ ಬಂದಿದ್ದರು. ಕಾರ್ಯಕ್ರಮದಲ್ಲಿ ಮನಸ್ಸಿನ ಮಾತು ಹೇಳಿಕೊಳ್ಳುವ ಟಾಸ್ಕ್ ನಲ್ಲಿ ಶ್ರಾವಣಿ ತನಗೆ ಒಂದು ಮಗು ಬೇಕು ಎಂದು ಸಮೀರ್ ಆಚಾರ್ಯರ ಬಳಿ ಹೇಳಿದ್ದರು.
2/ 8
ರಾಜಾ ರಾಣಿ ರಿಯಾಲಿಟಿ ಶೋ ಕಾರ್ಯಕ್ರಮಕ್ಕೂ ಮುನ್ನ ಶ್ರಾವಣಿಯವರಿಗೆ ಒಮ್ಮೆ ಮಿಸ್ ಕ್ಯಾರೇಜ್ ಆಗಿತ್ತು. ಅದಾದ ಮೇಲೆ ಯಾಕೋ ಮಕ್ಕಳಾಗಿರಲಿಲ್ಲ ಎಂದು ಶ್ರಾವಣಿ ಹೇಳಿದ್ದರು.
3/ 8
ಬಹಳ ದಿನಗಳ ನಂತರ ಸಮೀರಾಚಾರ್ಯ ಮತ್ತು ಶ್ರಾವಣಿ ದಂಪತಿಗೆ ಹೆಣ್ಣು ಮಗು ಹುಟ್ಟಿದ್ದು, ಮನೆಯವರೆಲ್ಲಾ ತುಂಬಾ ಖಷಿಯಾಗಿದ್ದಾರೆ. ಅಭಿಮಾನಿಗಳು ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದರು.
4/ 8
ಈ ಜೋಡಿ ಈಗ ಮತ್ತೆ ಮುದ್ದಾದ ಹೆಣ್ಣು ಮಗುವಿನೊಂದಿಗೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮಗು ತುಂಬಾ ಮುದ್ದಾಗಿದೆ.
5/ 8
9 ತಿಂಗಳು ಶ್ರಾವಣಿಯನ್ನು ಸಮೀರ್ ಅವರು ತವರು ಮನೆಗೆ ಕಳಿಸಿಲ್ಲವಂತೆ. ಅವರ ಮನೆಯಲ್ಲೇ ಇಟ್ಟುಕೊಂಡು ಎಲ್ಲಾ ಭಾವನೆಗಳನ್ನು ಶೇರ್ ಮಾಡಿಕೊಂಡಿದ್ದರಂತೆ.
6/ 8
ರಾಜಾ ರಾಣಿ ಕಾರ್ಯಕ್ರಮದ ಎಲ್ಲಾ ಜಡ್ಜ್, ಕನ್ನಡಿಗರು ಆಶೀರ್ವಾದ ಮಾಡಿದ್ರು. ಅದಕ್ಕೆ ನನ್ನ ಮಗಳು ಬಂದಳು ಎಂದು ಸಮೀರ್ ಅವರು ಭಾವುಕರಾದ್ರು.
7/ 8
ಕಾರ್ಯಕ್ರಮಕ್ಕೆ ಬಂದ ಪುಟ್ಟ ಲಕ್ಷ್ಮಿಗೆ ನಟಿ ತಾರಾ ಅನುರಾಧ ಮತ್ತು ಅನು ಪ್ರಭಾಕರ್ ಅವರು ಆರತಿ ಮಾಡಿ ಸ್ವಾಗತಿಸಿದ್ರು. ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ರು.
8/ 8
ಮಗುವಿಗೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ನಾಮಕರಣ ಮಾಡಲಾಯ್ತು. ಸೃಜನ್ ಲೋಕೇಶ್ ಮಗುವಿನ ಕಿವಿಯಲ್ಲಿ ಸರ್ವಾತಾ, ಸರ್ವಾತಾ, ಸರ್ವಾತಾ ಎಂದು ಹೆಸರಿಟ್ಟರು.