ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ.
2/ 8
ಲಕ್ಷಣ ಧಾರಾವಾಹಿ ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗಿದ್ದಾಳೆ.
3/ 8
ನಕ್ಷತ್ರಾ ಆಗಿ ನಟಿಸುತ್ತಿರುವ ವಿಜಯಲಕ್ಷ್ಮಿ ನಿಜ ಜೀವನದಲ್ಲೂ ನೋಡಲು ಕಪ್ಪಾಗಿದ್ದಾರೆ. ಆ ಕಪ್ಪು ಬಣ್ಣದಿಂದ ತಮಗಾದ ಅವಮಾನ, ತಮ್ಮ ತಾಯಿ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ.
4/ 8
ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಗೆ ಸಂಕ್ರಾಂತಿ ಸಂಭ್ರಮಕ್ಕೆ ಲಕ್ಷಣ ಧಾರಾವಾಹಿ ತಂಡ ಬಂದಿದೆ. ಅಲ್ಲಿ ವಿಜಯ ಲಕ್ಷ್ಮಿ ತಮ್ಮ ಮನದ ಮಾತನ್ನು ಜನರ ಮುಂದೆ ಹಂಚಿಕೊಂಡಿದ್ದಾರೆ.
5/ 8
ಇದೊಂದು ಬಣ್ಣದ ಜಗತ್ತು. ನಾವು ಹೇಗೆ ಕಾಣಿಸಿಕೊಳ್ತೇವೆ ಅದರ ಮೇಲೆ ನಮ್ಮನ್ನು ಆಯ್ಕೆ ಮಾಡ್ತಾರೆ. ಒಂದು ಕಪ್ಪು ಹುಡುಗಿ ಆಡಿಷನ್ ಗೆ ಹೋಗಿ ರಿಜೆಕ್ಟ್ ಆಗಿರೋ ನೋವನ್ನು ನಾನು ಅನುಭವಿಸಿದ್ದೇನೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
6/ 8
ನನ್ನ ತಾಯಿ ಮಧ್ಯ ರಾತ್ರಿ ಎದ್ದು ಅಳೋರು. ಅಮ್ಮ ನಿನ್ನ ಮೇಲೆ ಆ ತಪ್ಪನ್ನು ದಯವಿಟ್ಟು ಹಾಕಿಕೊಳ್ಳಬೇಡ. ಅದೇನೋ ಕೆಟ್ಟ ಗಳಿಗೆ ಆ ರೀತಿ ನಡೆಯಿತು ಎಂದು ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ.
7/ 8
ವಿಜಯಲಕ್ಷ್ಮಿ ಅವರ ತಾಯಿಯನ್ನು ಕಲರ್ಸ್ ಕನ್ನಡದವರು ಸಪ್ರ್ರೈಸ್ ಆಗಿ ಕರೆಸಿದ್ದರು. ಅವರ ಅಮ್ಮನನ್ನು ವೇದಿಕೆಯಲ್ಲಿ ನೋಡಿ ವಿಜಯಲಕ್ಷ್ಮಿ ಕಣ್ಣೀರು ಹಾಕಿದರು.
8/ 8
ನಂತರ ಅಮ್ಮಾ, ಅಮ್ಮಾ ಐ ಲವ್ ಯೂ ಹಾಡು ಹೇಳಿ, ತನಗೆ ತನ್ನ ಅಮ್ಮನೇ ಸೂಪರ್ ಸ್ಟಾರ್ ಎಂದು ಹೇಳಿದ್ರು. ವಿಜಯಲಕ್ಷ್ಮಿ ಮನದ ಮಾತು ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತು.