ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಕನ್ನಡತಿ' ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ. ಕಥಾನಾಯಕ ಹರ್ಷ ಮಂದೇನು ಮಾಡ್ತಾರೆ ಎನ್ನುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಹರ್ಷ ಅಲಿಯಾಸ್ ಕಿರಣ್ ರಾಜ್ ಮುಂದೆ ಏನ್ ಮಾಡ್ತಾರೆ ಗೊತ್ತಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ 'ಕನ್ನಡತಿ' ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ.
2/ 8
ಅಭಿಮಾನಿಗಳು ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಮನೆಯಲ್ಲಿನ ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ.
3/ 8
ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಇದರ ಕಥಾನಾಯಕ ಹರ್ಷನ ಪಾತ್ರ ಎಲ್ಲರನ್ನೂ ಆವರಿಸಿದೆ.
4/ 8
ಸದ್ಯದಲ್ಲೇ ಕನ್ನಡತಿ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಹರ್ಷ ಮಂದೇನು ಮಾಡ್ತಾರೆ ಎನ್ನುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮುಂದೆ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವ ಆಸೆ ಹೊಂದಿದ್ದಾರೆ.
5/ 8
ಧಾರಾವಾಹಿಯಲ್ಲಿ ಒಂದು ಕುಟುಂಬಕ್ಕೆ ಸಂಬಂಧಿಸಿದ್ದ ಪಾತ್ರ ಮಾತ್ರ ಇರುತ್ತೆ. ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರ ಮಾಡಲು ಅವಕಾಶ ಸಿಗುತ್ತೆ ಎಂದು ಕಿರಣ್ ರಾಜ್ ಹೇಳಿದ್ದಾರೆ.
6/ 8
ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿರುವ ಕಿರಣ್ ರಾಜ್ ಅವರಿಗೆ ಸಿನಿಮಾದಿಂದ ಹಲವು ಅವಕಾಶಗಳು ಬಂದಿವೆಯಂತೆ. ಅದರಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
7/ 8
ಕೋವಿಡ್ ಟೈಂನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಆದ್ರೆ ಕೆಲ ಸಿನಿಮಾಗಳ ಅಡ್ವಾನ್ಸ್ ವಾಪಸ್ ಕೊಟ್ಟಿದ್ದೇನೆ. ಒಳ್ಳೆ ಸಿನಿಮಾಗಳನ್ನು ಮಾತ್ರ ಮಾಡ್ತೇನೆ ಎಂದು ಹೇಳಿದ್ದಾರೆ.
8/ 8
ಕನ್ನಡತಿ ಧಾರಾವಾಹಿ ಮುಗಿಯುತ್ತಿರುವುದಕ್ಕೆ ಕಿರಣ್ ರಾಜ್ ಬೇಸರ ವ್ಯಕ್ತ ಪಡಿಸಿದ್ದಾರೆ. ಧಾರಾವಾಹಿ ಕಲಾವಿದರ ಜೊತೆ ಒಂದು ನಂಟು ಬೆಳೆದಿರುತ್ತೆ ಎಂದು ಕಿರಣ್ ರಾಜ್ ಹೇಳಿದ್ದಾರೆ.