Kannadathi Kiran Raj: ಜೀವನದಲ್ಲಿ ಅನೇಕ ಆಯ್ಕೆಗಳಿವೆ ಎಂದಿದ್ಯಾಕೆ ಕಿರಣ್ ರಾಜ್? ಕನ್ನಡತಿ ಮುಗಿದ್ಮೇಲೆ ಏನ್ಮಾಡ್ತಾರೆ ಹರ್ಷ?
ಇನ್ನೇನು ಕೆಲವೇ ದಿನಗಳಲ್ಲಿ 'ಕನ್ನಡತಿ' ಸೀರಿಯಲ್ ಮುಗಿಯುತ್ತೆ. ಕಲಾವಿದರೆಲ್ಲಾ ಮುಂದೆ ಏನ್ ಮಾಡ್ತಾರೆ ಅನ್ನೋ ಪ್ರಶ್ನೆಗಳು ಶುರುವಾಗಿವೆ. ಇದಕ್ಕೆ ನಾಯಕ 'ಹರ್ಷ' ಪಾತ್ರಧಾರಿ ಕಿರಣ್ ರಾಜ್ ಹೇಳಿರುವುದೇನು?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ.
2/ 8
ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ.
3/ 8
ಕನ್ನಡತಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿವೆ. ಹರ್ಷನ ಪಾತ್ರ ಮಾಡ್ತೀರೋ ಕಿರಣ್ ರಾಜ್ ಸಹ ಜನರಿಗೆ ತುಂಬಾ ಇಷ್ಟ ಆಗಿದ್ದಾರೆ.
4/ 8
ಕಿರಣ್ ರಾಜ್ ಸಹ ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಅಮ್ಮಮ್ಮನ ಮುದ್ದಿನ ಮಗನಾಗಿ, ಭುವಿಯ ಪ್ರೀತಿಯ ಗಂಡನಾಗಿ, ಸ್ವಲ್ಪ ಕೋಪಿಷ್ಠ. ತುಂಬಾ ಕೇರ್ ಮಾಡುವ ವ್ಯಕ್ತಿ.
5/ 8
ಕನ್ನಡತಿ ಸೀರಿಯಲ್ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಕಲಾವಿದರು ಕೊನೆ ದಿನದ ಶೂಟಿಂಗ್ನಲ್ಲಿ ಕಣ್ಣೀರು ಹಾಕಿದ್ದಾರೆ. ಇಷ್ಟು ದಿನದ ಗೆಳೆತನವನ್ನು ಮಿಸ್ ಮಾಡಿಕೊಳ್ತಾ ಇದ್ದಾರೆ.
6/ 8
ಜೀವನವು ಅನೇಕ ಆಯ್ಕೆಗಳನ್ನು ಒದಗಿಸುತ್ತದೆ, ನಾವು ಮಾಡುವ ಆಯ್ಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಕಿರಣ್ ರಾಜ್ ಪೋಸ್ಟ್ ಹಾಕಿಕೊಂಡಿದ್ದಾರೆ.
7/ 8
ಕನ್ನಡತಿ ಧಾರಾವಾಹಿ ಮುಗಿದ ಮೇಲೆ ಕಿರಣ್ ರಾಜ್ ಒಳ್ಳೆ ಸಿನಿಮಾ ಬಂದ್ರೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಧಾರಾವಾಹಿ ಮೂಲಕ ಹೆಸರುವಾಸಿಯಾಗಿರುವ ಕಿರಣ್ ರಾಜ್ ಮುಂದೆ ಒಳ್ಳೆ ಧಾರಾವಾಹಿ ಸಿಕ್ರೆ ಅರದಲ್ಲಿ ನಟಿಸುವುದಾಗಿ ಹೇಳಿದ್ದಾರೆ.
8/ 8
ಕಿರಣ್ ನೋಡಲು ತುಂಬಾ ಚೆನ್ನಾಗಿದ್ದು, ಅದ್ಭುತವಾಗಿ ನಟಿಸುತ್ತಿದ್ದಾರೆ. ಅದಕ್ಕೆ ಒಳ್ಳೆ ಅವಕಾಶಗಳು ಸಿಗಬಹುದು. ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ.