ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ದಾಸ ಪುರಂದರ ಸೀರಿಯಲ್ ಮುಕ್ತಾಯವಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಧಾರಾವಾಹಿ ಪ್ರಸಾರವಾಗ್ತಿತ್ತು.
2/ 8
ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ ಧಾರಾವಾಹಿ ದಾಸ ಪುರಂದರ. ಭಕ್ತಿ ರಸ, ಸಾಹಿತ್ಯ ಮತ್ತು ಸಂಗೀತವನ್ನೇ ಪ್ರಧಾನವಾಗಿಟ್ಟುಕೊಂಡು ಪ್ರಸಾರ ಕಂಡ ಸೀರಿಯಲ್.
3/ 8
15ನೇ ಶತಮಾನದಲ್ಲಿ ಬದುಕಿದ್ದ ದಾಸ ಶ್ರೇಷ್ಠ, ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರ ಜೀವನಚರಿತ್ರೆ ಆಧರಿಸಿದ ಈ ದಾಸ ಪುರಂದರ ಧಾರಾವಾಹಿಯನ್ನು ತೆಗೆಯಲಾಗಿತ್ತು.
4/ 8
ಹೋದ ವರ್ಷ ಫೆಬ್ರವರಿ 28 ರಂದು ದಾಸ ಪುರಂದರ ಧಾರಾವಾಹಿ ಶುರುವಾಗಿತ್ತು. ಆರಂಭದಲ್ಲಿ ಸೋಮವಾರದಿಂದ ಶನಿವಾರದವರೆಗೂ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿತ್ತು. ನಂತರ ಶನಿವಾರ, ಭಾನುವಾರ ಒಂದು ಗಂಟೆ ಪ್ರಸಾರವಾಗ್ತಿತ್ತು.
5/ 8
ಸುಮಾರು ಎರಡೂವರೆ ವರ್ಷಗಳ ಕಾಲ ರಿಸರ್ಚ್ ಮಾಡಿ ಈ ಸೀರಿಯಲ್ ನಿರ್ಮಾನ ಮಾಡಲಾಗಿತ್ತು. ದಾಸ ಪರಂದರ ಕಥೆ ಜಯದುರ್ಗಾ ಕ್ರಿಯೇಷನ್ಸ್ ನಿರ್ಮಾಣದ ಧಾರಾವಾಹಿ.
6/ 8
ನವಕೋಟಿ ನಾರಾಯಣ ದಾಸರಾದ ಕಥೆಯನ್ನು ಹೊಂದಿದ್ದ ಈ ಧಾರಾವಾಹಿ, ರತ್ನದ ವ್ಯಾಪಾರಿ ಸಾಹಿತ್ಯ ಲೋಕದ ರತ್ನವಾಗುವ ಕಥಾಹಂದರವನ್ನ 'ದಾಸ ಪುರಂದರ' ಧಾರಾವಾಹಿ ಹೊಂದಿತ್ತು.
7/ 8
ಧಾರಾವಾಹಿಯಲ್ಲಿ ರತ್ನದ ವ್ಯಾಪಾರಿ ಶ್ರೀನಿವಾಸ ಮಹಾನ್ ಜುಗ್ಗ. ದೇವರಿಗೆ ಕಾಣಿಕೆ ಸಲ್ಲಿಸುವಾಗಲೂ ಜಿಪುಣತನ ಮಾಡುತ್ತಿದ್ದ. ನಂತರ ಎಲ್ಲವನ್ನೂ ತ್ಯಜಿಸಿ ಹೇಗೆ ದಾಸನಾಗುತ್ತಾನೆ ಎಂಬುದೇ ಕಥೆ.
8/ 8
ದಾಸ ಪುರಂದರ ಧಾರಾವಾಹಿಯನ್ನು ಅಭಿಮಾನಿಗಳು ಇಷ್ಟ ಪಟ್ಟು ನೋಡುತ್ತಿದ್ದರು. ಧಾರಾವಾಹಿ ಮುಕ್ತಾಯಗೊಂಡಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ.