ಕಲಸ್ ಕನ್ನಡ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಹಲವು ಹಿಟ್ ಧಾರಾವಾಹಿಗಳನ್ನು ನೀಡಿದೆ. ಅಲ್ಲದೇ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬರ್ತಿದೆ. ಜೊತೆಗೆ ಮತ್ತೆರಡು ಹೊಸ ಧಾರಾವಾಹಿಗಳು ಬರಲಿವೆ.
2/ 8
ಒಲವಿನ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯ ಲಕ್ಷ್ಮಿ, ಕನ್ನಡತಿ, ಲಕ್ಷಣ, ರಾಮಾಚಾರಿಯಂತಹ ಸೂಪರ್ ಹಿಟ್ ಧಾರಾವಾಹಿ ಪ್ರಸಾರವಾಗುತ್ತಿವೆ. ಈಗ ಮತ್ತೆರೆಡು ಹೊಸ ಧಾರಾವಾಹಿಗಳು ಬರಲು ಸಜ್ಜಾಗಿವೆ.
3/ 8
ಕಲರ್ಸ್ ಕನ್ನಡ ಈಗಾಗಲೇ ಧಾರಾವಾಹಿಗಳ ಮೂಲಕ ಜನ ಟಿವಿ ಮುಂದೆ ಕೂರುವಂತೆ ಮಾಡಿದೆ. ಮತ್ತೆ ಈಗ 2 ಹೊಸ ಧಾರಾವಾಹಿಗಳು ಪ್ರಸಾರವಾಗಲಿವೆ.
4/ 8
ಪುಣ್ಯವತಿ ಅನ್ನು ಹೊಸ ಧಾರಾವಾಹಿ ಬರಲಿದ್ದು, ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನವಾಗುತ್ತೆ. ಆಕೆಗೆ ಡ್ಯಾನ್ಸ್ ಅಂದ್ರೆ ಇಷ್ಟ, ಆದ್ರೆ ಮದುವೆ ಎಂಬ ಬಂಧನದಲ್ಲಿ ಸಿಲುಕುತ್ತಾಳೆ.
5/ 8
ಪುಣ್ಯವತಿ ಧಾರಾವಾಹಿ ಜೊತೆ ತ್ರಿಪುರ ಸುಂದರಿ ಅನ್ನೋ ಹೊಸ ಧಾರಾವಾಹಿ ಬರಲಿದೆ. ರಾಜಕುಮಾರನ ಅರಸಿ ಈ ತ್ರಿಪುರ ಸುಂದರಿ. ಧಾರಾವಾಹಿ ಸುದಂರವಾಗಿರುತ್ತಾ ನೋಡಬೇಕು.
6/ 8
ಪುಣ್ಯವತಿಗೆ ಗೆಜ್ಜೆ ಕಟ್ಟಿ ಡ್ಯಾನ್ಸ್ ಮಾಡಬೇಕು ಎಂದುಕೊಂಡ್ರೆ, ತ್ರಿಪುರ ಸುಂದರಿ ಖತ್ತಿ ಹಿಡಿದು ಯುದ್ಧ ಮಾಡಬೇಕು ಎನ್ನುತ್ತಿದ್ದಾಳೆ.
7/ 8
ಇನ್ನು ತ್ರಿಪುರ ಸುಂದರಿಯಲ್ಲಿ ನಾಯಕಿಯಾಗಿ ಬಿಗ್ ಬಾಸ್ ಸೀಸನ್ 08 ಅಭ್ಯರ್ಥಿ ದಿವ್ಯಾ ಸುರೇಶ್ ಇದ್ದಾರೆ. ನೋಡಲು ತುಂಬಾ ಸುಂದರವಾಗಿದ್ದಾಳೆ.
8/ 8
ತ್ರಿಪುರ ಸುಂದರಿ ಮತ್ತು ಪುಣ್ಯವತಿ ಧಾರಾವಾಹಿ ಯಾವ ಟೈಂಗೆ ಬರುತ್ತವೆ ಎನ್ನುವುದು ತಿಳಿದಿಲ್ಲ. ಶೀಘ್ರದಲ್ಲೇ ಬರಲಿವೆ ಎಂಬ ಮಾಹಿತಿ ಇದೆ.