ಬಿಗ್ ಬಾಸ್ ಸ್ಪರ್ಧಿ, ನಟಿ, ಗೊಂಬೆ ನಿವೇದಿತಾ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 2 ನಲ್ಲಿ ಭಾಗವಹಿಸಿದ್ದಾರೆ. ನಿವೇದಿತಾ ಗೌಡ ಕಳೆದ ಸೀಸನ್ ನಲ್ಲೂ ಇದ್ದರು, ಚೆನ್ನಾಗಿ ನಟನೆ ಕಲಿತಿದ್ದಾರೆ. ಎಲ್ಲಾ ರೀತಿಯ ಸ್ಕಿಟ್‍ಗಳನ್ನು ಮಾಡ್ತಾರೆ. ನಿವಿ ಎಲ್ಲರಿಗೂ ಇಷ್ಟ ಆಗಿದ್ದಾರೆ. ನಿವೇದಿತಾ ಈ ವಾರದ ಸ್ಕಿಟ್ ಗೆ ಡೈಲಾಗ್ ಗಳನ್ನು ಅಂಗೈನಲ್ಲಿ ಬರೆದುಕೊಂಡು ಬಂದಿದ್ದಾರೆ. ಡೈಲಾಗ್ ಹೇಳುವಾಗ ಪ್ರತಿ ಬಾರಿ ಕೈ ನೋಡಿಕೊಳ್ತಾ ಇದ್ದಾರೆ. ನಿರೂಪಕ ನಿರಂಜನ್ ನಿವೇದಿತಾ ಕೈ ತೋರಿಸುತ್ತಾರೆ. ಎಲ್ಲಾ ಡೈಲಾಗ್ ಗಳನ್ನು ಕೈನಲ್ಲಿ ಬರೆದುಕೊಂಡಿದ್ದಾರೆ ಎಂದು ಹೇಳ್ತಾರೆ. ನಿವೇದಿತಾ ಜೊತೆ ಜಗ್ಗಪ್ಪ ಸ್ಕಿಟ್ ಮಾಡಿದ್ದಾರೆ. ಕಳೆದ ಸೀಸನ್‍ನಿಂದ ನಿವೇದಿತಾ ಗಿಚ್ಚಿ ಗಿಲಿಗಿಲಿಯಲ್ಲಿ ಸ್ಪರ್ಧಿಯಾಗಿದ್ದಾರೆ. ಆದ್ರೂ ಕೂಡ ಡೈಲಾಗ್ ಗಳು ಮರೆತು ಹೋಗುತ್ತವೆಯಂತೆ ಅದಕ್ಕೆ ಡೈಲಾಗ್ ಬರೆದುಕೊಂಡು ಬಂದಿದ್ದಾಳೆ. ಶ್ರುತಿ ಅವರು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಜಡ್ಜ್. ಅವರು ನಿವೇದಿತಾ ಗೌಡ ಡೈಲಾಗ್ ಕಾಪಿ ನೋಡಿ ನಕ್ಕಿದ್ದಾರೆ. ಯಾಕಮ್ಮಾ ಅಷ್ಟು ಮರೆತು ಹೋಗುತ್ತಾ ಎಂದು ಕೇಳಿದ್ದಾರೆ. ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಸೀಸನ್ 01ರ ಕಲಾವಿದೆ ಅಲ್ಲದ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದರು. ಈಗಲೂ ಕೂಡ ಶೋನಲ್ಲಿ ಭಾಗವಹಿಸಿ ಜನರನ್ನು ರಂಜಿಸುತ್ತಿದ್ದಾರೆ. ಈ ಬಾರಿ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಡಾರ್ಲಿಂಗ್ ಕೃಷ್ಣ, ಮಿಲನ್ ನಾಗರಾಜ್ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಲವ್ ಬರ್ಡ್ಸ್ ಚಿತ್ರ ರಿಲೀಸ್ ಆಗಲಿದೆ.