ಕಲರ್ಸ್ ಕನ್ನಡದಲ್ಲಿ ಕಳೆದ ವಾರದಿಂದ ಗಿಚ್ಚಿ ಗಿಲಿಗಿಲಿ ಸೀಸನ್ 02 ಶುರುವಾಗಿದೆ. ಶನಿವಾರ ಮತ್ತು ಭಾನುವಾರು ಸಂಜೆ 7.30ಕ್ಕೆ ಪ್ರಸಾರವಾಗ್ತಿದೆ. ಈ ಬಾರಿಯೂ ಹಳೇ ಸ್ಪರ್ಧಿಗಳು ಇದ್ದಾರೆ. ಮತ್ತೆ ಗೆಲ್ಲೋಕೆ ಚಿಲ್ಲರ್ ಮಂಜು ಬಂದಿದ್ದಾರೆ.
2/ 8
ಈ ಬಾರಿ ಕಲಾವಿದರಲ್ಲದ ಸ್ಪರ್ಧಿಗಳಲ್ಲಿ ಇಂದುಶ್ರೀ ಅವರು ಕೋಕಿಲ ಅಜ್ಜಿ ಗೊಂಬೆ ಜೊತೆ ಬಂದಿದ್ದಾರೆ. ಇಂದು ಅವರು ಗೊಂಬೆಯ ಮಾತುಗಳನ್ನು ಅವರೇ ಮಾತನಾಡುತ್ತಾರೆ. ಆದ್ರೆ ಅದು ಯಾರಿಗೂ ಗೊತ್ತಾಗಲ್ಲ.
3/ 8
ಇಂದುಶ್ರೀ ಕೋಕಿಲ ಅಜ್ಜಿಗೆ ಚಿಲ್ಲರ್ ಮೆಂಟರ್ ಆಗಿದ್ದಾರೆ. ಇಬ್ಬರು ಸೇರಿ ಸ್ಕಿಟ್ ಮಾಡಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇಬ್ಬರ ಜೋಡಿ ಮೊದಲ ವಾರವೇ ಎಲ್ಲರನ್ನೂ ನಕ್ಕಿ ನಗಿಸಿದ್ದಾರೆ.
4/ 8
ನಿರೂಪಕ ನಿರಂಜನ್ ನೋಡೋ ಹೆಂಗ್ ಕಾಣ್ತಾ ಇದಾನೆ, ಜಾಸ್ತಿ ಪೇಮೆಂಟ್ ಕೊಟ್ಟು, ಒಳ್ಳೆ ಡ್ರೆಸ್ ಹಾಕಿ ಕೂರಿಸಿರುವ ಆಫೀಸ್ ಬಾಯ್ ಅವರು ಎಂದು ಕೋಕಿಲ ಅಜ್ಜಿ ಕಾಲೆಳೆಯುತ್ತಾರೆ. ಎಲ್ಲರೂ ನಗುತ್ತಾರೆ.
5/ 8
ಚಿಲ್ಲರ್ ನೀನು ನನ್ನ ಜೊತೆ ಇರು ಕೊನೆಯವರೆಗೂ ಇರುತ್ತೀಯಾ ಎಂದು ಕೋಕಿಲ ಅಜ್ಜಿ ಹೇಳಿದ್ದಾರೆ. ಆಗ ಚಿಲ್ಲರ್ ನಮ್ಮ ಶೋನ ಗೊಬ್ಬರ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳಿದ್ದಾರೆ.
6/ 8
ಸ್ಕಿಟ್ ಮಾಡುವಾಗ ಗೊಬ್ಬರ ಬಂದು ಆಗಲ್ಲ, ಆಗಲ್ಲ ಎನ್ನುತ್ತಾನೆ ಓಕೆ. ಬಿಗ್ ಬಾಸ್ ಮನೆಯಲ್ಲೂ ಆಗಲ್ಲ ಆಗಲ್ಲ ಎಂದಿದ್ದಾನೆ. ಅದಕ್ಕೆ ಬಿಗ್ ಬಾಸ್ ನಿನ್ನ ಕೈಯಲ್ಲಿ ಏನೂ ಆಗಲ್ಲ ಹೋಗು ಎಂದು ಕಳಿಸಿದ್ದಾರೆ ಎಂದು ಕೋಕಿಲ ಅಜ್ಜಿ ಹೇಳುತ್ತಾರೆ.
7/ 8
ಈ ಬಾರಿ ಗಿಚ್ಚಿ ಗಿಲಿಗಿಲಿ ಶೋಗೆ ಸೋಶಿಯಲ್ ಸ್ಟಾರ್ ಧನರಾಜ್ ಬಂದಿದ್ದಾರೆ. ಅವರು ಕಳೆದ ಸೀಸನ್ ನ ಪ್ರಶಾಂತ್ ಅವರ ವಿಡಿಯೋ ನೋಡಿಕೊಂಡು ಈ ಶೋಗೆ ಬಂದಿದ್ದಾರಂತೆ.
8/ 8
ರಿಯಾಲಿಟಿ ಶೋ, ರಿಯಾಲಿಟಿ ಶೋ, ರಿಯಾಲಿಟಿ ಶೋ, ಐ ಡೋಂಟ್ ಲೈಕ್, ಐ ಅವೈಡ್, ಬಟ್ ರಿಯಾಲಿಟಿ ಶೋ ಲೈಕ್ಸ್ ಮಿ, ಈ ಕ್ಯಾನಾಟ್ ಅವೈಡ್ ಎಂದು ಕೋಕಿಲ ಅಜ್ಜಿ ತಮ್ಮ ಬಗ್ಗೆ ಬಿಲ್ಡ್ ಅಪ್ ಕೊಟ್ಟಿಕೊಂಡಿದ್ದಾರೆ.