ಕಲರ್ಸ್ ಕನ್ನಡದಲ್ಲಿ ವೀಕೆಂಡ್ ಪ್ರಸಾರವಾಗ್ತಿದ್ದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ಎಲ್ಲರಿಗೂ ಪರಿಚಿತ. ಆ ಶೋ ನೋಡಿ ಎಷ್ಟೋ ಜನ ಮೆಚ್ಚಿಕೊಂಡಿದ್ದರು ಎಲ್ಲರಿಗೂ ಇಷ್ಟ ಆಗಿತ್ತು.
2/ 8
ಜನವರಿ 14 ರಿಂದ ಗಿಚ್ಚಿ ಗಿಲಿಗಿಲಿ ಸೀಸನ್ 2 ಶುರುವಾಗಲಿದೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಗಿಚ್ಚಿ ಗಿಲಿ ಗಿಲಿ ಸೀಸನ್ 2 ಅನ್ನು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಲಾಗಿದೆ.
3/ 8
ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ್ ಬಂದಿದ್ದು, ಅವರಿಂದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರವನ್ನು ವೆಲ್ ಕಮ್ ಮಾಡಲಾಗಿದೆ. ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
4/ 8
ಜಮಾಲಿಗುಡ್ಡ ಸಿನಿಮಾ ಪ್ರಮೋಶನ್ ಗೆ ಡಾಲಿ ಅವರು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದರು. ಅವರ ಕೈಯಲ್ಲಿ ಮುಂದಿನ ವಾರ ಶುರುವಾಗಲಿರುವ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
5/ 8
ಕಾರ್ಯಕ್ರಮದ ಉದ್ಘಾಟನೆಗೆ ಹಳೆ ಸೀಸನ್ ಸ್ಪರ್ಧಿಗಳು ಸ್ಕಿಟ್ ಮಾಡಿ ಎಲ್ಲರನ್ನೂ ನಗಿಸಿದ್ದಾರೆ. ವಿನೋದ್ ಗೊಬ್ಬರಗಾಲ ಮತ್ತು ರಾಘವೇಂದ್ರ ಇಲ್ಲಿ ಸ್ಕಿಟ್ ಮಾಡ್ತಾ ಇದ್ದಾರೆ.
6/ 8
ಮೊದಲ ಸೀಸನ್ ನಲ್ಲಿ ಕಲಾವಿದರು ಮತ್ತು ಕಲಾವಿದರಲ್ಲದವರನ್ನು ಕರೆದುಕೊಂಡು ಇಬ್ಬರಿಗೂ ಜೋಡಿ ಮಾಡಲಾಗಿತ್ತು. ಮಜಾ ಭಾರತದ ಕಲಾವಿದರು ಮತ್ತೆ ಮಿಂಚಿದ್ರು.
7/ 8
ಕಳೆದ ಬಾರಿ ಶಿವು ಮತ್ತು ವಂಶಿ ವಿನ್ನರ್ ಆಗಿದ್ದರು. ಗೊಬ್ಬರಗಾಲ ಮತ್ತು ನಿವೇದಿತಾ ಗೌಡ ರನ್ನರ್ ಆಗಿದ್ದರು. ಆಗ ನೀಡಿದಷ್ಟೇ ಮನರಂಜನೆ ನೀಡಲು ಗಿಚ್ಚಿ ಗಿಲಿಗಿಲಿ 2 ಬರ್ತಿದೆ.
8/ 8
ಮೊದಲ ಸೀಸನ್ ಸ್ಪರ್ಧಿಗಳ ಸ್ಕಿಟ್ ನೋಡಿ ಡಾಲಿ ಧನಂಜಯ್ ಸಖತ್ ಎಂಜಾಯ್ ಮಾಡಿದ್ರು. ಅದೇ ರೀತಿ ಟೀಮ್ ಗೆ ಒಳ್ಳೆಯದಾಗಲಿ ಅಂತ ವಿಶ್ ಮಾಡಿದ್ರು.