ಗಿಚ್ಚಿ ಗಿಲಿ ಗಿಲಿ ಸೀಸನ್ 2 ಗ್ರ್ಯಾಂಡ್ ಓಪನಿಂಗ್ಗೆ ಶಿವಣ್ಣ ಬಂದಿದ್ದು, ಅವರ ಸಿನಿ ಪಯಣಕ್ಕೆ ಇಡೀ ತಂಡ ಗೌರವ ಸಲ್ಲಿಸಿದೆ. ಅದನ್ನು ನೋಡಿ ಶಿವರಾಜ್ ಕುಮಾರ್ ತುಂಬಾ ಖುಷಿಯಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ವೀಕೆಂಡ್ ಪ್ರಸಾರವಾಗ್ತಿದ್ದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮ ಎಲ್ಲರಿಗೂ ಪರಿಚಿತ. ಆ ಶೋ ನೋಡಿ ಎಷ್ಟೋ ಜನ ಮೆಚ್ಚಿಕೊಂಡಿದ್ದರು, ಎಲ್ಲರಿಗೂ ಇಷ್ಟ ಆಗಿತ್ತು. ಇದೀಗ ಮತ್ತೆ ಸೀಸನ್ 2 ಶುರುವಾಗಲಿದೆ.
2/ 8
ಇದೇ ಶನಿವಾರದಿಂದ ಗಿಚ್ಚಿ ಗಿಲಿಗಿಲಿ ಸೀಸನ್ 2 ಶುರುವಾಗಲಿದೆ. ಕಳೆದ ವಾರ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಗಿಚ್ಚಿ ಗಿಲಿ ಗಿಲಿ ಸೀಸನ್ 2 ಅನ್ನು ಗ್ರ್ಯಾಂಡ್ ಆಗಿ ವೆಲ್ ಕಮ್ ಮಾಡಲಾಗಿತ್ತು.
3/ 8
ಮೊದಲ ಸೀಸನ್ ನಲ್ಲಿ ಕಲಾವಿದರು ಮತ್ತು ಕಲಾವಿದರಲ್ಲದವರನ್ನು ಕರೆದುಕೊಂಡು ಇಬ್ಬರಿಗೂ ಜೋಡಿ ಮಾಡಲಾಗಿತ್ತು. ಮಜಾ ಭಾರತದ ಕಲಾವಿದರು ಮತ್ತೆ ಮಿಂಚಿದ್ರು.
4/ 8
ಈ ಬಾರಿ ಗಿಚ್ಚಿ ಗಿಲಿ ಗಿಲಿ ಗ್ರ್ಯಾಂಡ್ ಓಪೆನಿಂಗ್ಗೆ ಕರುನಾಡ ಚಕ್ರವರ್ತಿ ಶಿವಣ್ಣ ಬಂದಿದ್ದಾರೆ. ಜಗ ಮೆಚ್ಚಿದ ಸಿನಿ ಸಾಧನೆಗೆ ಶಿವಣ್ಣ ಅವರಿಗೆ ಗೌರವ ಸಲ್ಲಿಸಲಾಗಿದೆ.
5/ 8
ಶಿವರಾಜ್ ಕುಮಾರ್ ಅವರು 125 ಸಿನಿಮಾಗಳನ್ನು ಪೂರ್ಣಗೊಳಿಸಿದ್ದು, ಅವರಿಗೆ ಗಿಚ್ಚಿ ಗಿಲಿ ಗಿಲಿ ತಂಡ ಸಲಾಂ ಅರ್ಪಿದೆ. ಅದನ್ನು ನೋಡಿ ಶಿವಣ್ಣ ತುಂಬಾ ಖುಷಿಯಾಗಿದ್ರು.
6/ 8
ಶಿವಣ್ಣ ಅವರ ಕೆಲವು ಸಿನಿಮಾಗಳ ಪಾತ್ರಗಳ ವೇಷ ಧರಿಸಿ ಮಕ್ಕಳು ಡ್ಯಾನ್ಸ್ ಮಾಡಿದ್ದಾರೆ. ಒಂದೊಂದು ಪಾತ್ರವನ್ನೂ ಮಕ್ಕಳು ತುಂಬಾ ಚೆನ್ನಾಗಿ ಮಾಡಿದ್ದರು.
7/ 8
ಮಕ್ಕಳ ಜೊತೆ ವೇದಿಕೆಗೆ ಬಂದು ಶಿವಣ್ಣ ಡ್ಯಾನ್ಸ್ ಮಾಡಿದ್ದಾರೆ. ಮಕ್ಕಳು ಶಿವಣ್ಣಗೆ ಗುಲಾಬಿ ಹೂವುಗಳನ್ನು ನೀಡಿ ವಿಶ್ ಮಾಡಿದ್ದಾರೆ. ಇದಕ್ಕಿಂತ ಒಳ್ಳೆ ಆಶೀರ್ವಾದ ಬೇರೆ ಇಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
8/ 8
ಶಿವಣ್ಣ ತಮ್ಮ ತಾಯಿಯನ್ನು ನೆನೆದಿದ್ದಾರೆ. "ಅಮ್ಮ ಅದು ಯಾವ ಘಳಿಗೆಯಲ್ಲಿ ಮೊದಲ ಸಿನಿಮಾಕ್ಕೆ 'ಆನಂದ್' ಅಂತ ಹೆಸರು ಇಟ್ರೋ, ಅಲ್ಲಿಂದ ಆನಂದ 'ವೇದ'ವಾಗಿದೆ" ಎಂದಿದ್ದಾರೆ. ಕೇಕ್ ಕಟ್ ಮಾಡಿ ಸಂತೋಷಪಟ್ಟಿದ್ದಾರೆ.