BBK Season 9: ರೂಪೇಶ್ ಶೆಟ್ಟಿ-ಸಾನ್ಯಾ ಐಯ್ಯರ್ಗೆ ಸುದೀಪ್ ಕ್ಲಾಸ್, ನಿಮ್ಮ ರೊಮ್ಯಾನ್ಸ್ ಓವರ್ ಆಯ್ತು ಎಂದು ಎಚ್ಚರಿಕೆ!
ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್, ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅವರವರ ತಪ್ಪನ್ನು ಹೇಳಿದ್ದಾರೆ. ರೂಪೇಶ್ ಶೆಟ್ಟಿ-ಸಾನ್ಯಾ ಐಯ್ಯರ್ ಗೆ ಕ್ಲಾಸ್ ತೆಗೆದುಕೊಂಡಿದ್ದು, ಶೆಟ್ಟಿ ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್, ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅವರವರ ತಪ್ಪನ್ನು ಹೇಳಿದ್ದಾರೆ. ರೂಪೇಶ್ ಶೆಟ್ಟಿ-ಸಾನ್ಯಾ ಐಯ್ಯರ್ ಗೆ ಕ್ಲಾಸ್ ತೆಗೆದುಕೊಂಡಿದ್ದು, ಶೆಟ್ಟಿ ಕಣ್ಣೀರು ಹಾಕಿದ್ದಾರೆ.
2/ 8
ಆರ್ಯವರ್ಧನ್ ಗುರೂಜಿಗೆ ಸುದೀಪ್ ಪ್ರಶ್ನೆ ಕೇಳಿದ್ರು. ನಿಮ್ಮ ಕ್ಯಾಪ್ಟನ್ ಅವಧಿ ಮುಗಿದ್ರೂ, ನೀವು, ರೂಪೇಶ್, ಸಾನ್ಯಾ ಕ್ಯಾಪ್ಟನ್ ರೂಮ್ ನ ಹಾಸಿಗೆ ಮೇಲೆ ಮಲಗಿ ಪಿಕ್ ನಿಕ್ ಮಾಡ್ತಾ ಇದ್ರಾ ಎಂದು ಕೇಳಿದ್ದಾರೆ. ಆ ರೂಮ್ ಗೆ ಒಂದು ಗೌರವ ಇದೆ. ಪಿಕ್ ನಿಕ್ ಸ್ಪಾಟ್ ಅಲ್ಲ ಅದು ಎಂದು ಹೇಳಿದ್ರು.
3/ 8
ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಅವಧಿ ಮುಗಿದ ಮೇಲೆ ಅದರ ಮೇಲೆ ರೂಪೇಶ್, ಸಾನ್ಯಾ, ಗುರೂಜಿ ಮಲಗಿ ಟಾಸ್ಕ್ ವಿಚಾರವಾಗಿ ಮಾತನಾಡುತ್ತಿದ್ದ ದೃಶ್ಯ.
4/ 8
ಸುದೀಪ್ ಹೇಳಿದ್ದಕ್ಕೆ ರೂಪೇಶ್ ಶೆಟ್ಟಿ ನನ್ನ ಉದ್ದೇಶ ಯಾವುತ್ತೂ ಆ ರೀತಿ ಇರೋದಿಲ್ಲ ಸರ್ ಎನ್ನುತ್ತಾರೆ. ಇಲ್ಲಿ ಪ್ರಶಾಂತ್ ಸಂಬರ್ಗಿ ಬಗ್ಗೆ ಮಾತನಾಡುತ್ತಿದ್ದಾರೆ.
5/ 8
ರೂಪೇಶ್ ಶೆಟ್ಟಿ ನನ್ನ ಉದ್ದೇಶ ಅದಾಗಿರಲಿಲ್ಲ ಸರ್ ಎಂದಿದ್ದಕ್ಕೆ, ಸುದೀಪ್ ಅವರು, ಉದ್ದೇಶ ನಮಗೆ ಅರ್ಥ ಆಗಿರಲಿಲ್ಲ ಅಂದ್ರೆ ಯಾವತ್ತೋ ಮಾತನಾಡ್ತಾ ಇದ್ವಿ. ಇವತ್ತು ಬಂದಿದ್ದು ಯಾಕೆ ಎಂದ್ರೆ, ದಟ್ ಪರ್ಟಿಕ್ಯೂಲರ್ ಟೈಮ್ ಇಸ್ ನಾಟ್ ಓಕೆ ಎಂದು ಎಚ್ಚರಿಸುತ್ತಾರೆ.
6/ 8
ಸಾನ್ಯಾ ಅವರು ಆ ಡ್ರೆಸ್ ನಲ್ಲಿ ರೂಪೇಶ್ ಶೆಟ್ಟಿ ಮೇಲೆ ಆ ರೀತಿ ಮಲಗಿದ್ದನ್ನು ನೋಡಿ ಜನ ಸಹ ಕೆಟ್ಟದಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆ ರೊಮ್ಯಾನ್ಸ್ ಹಾಲ್ ಆಗಿದೆ ಎಂದಿದ್ದಾರೆ.
7/ 8
ರೂಪೇಶ್ ಶೆಟ್ಟಿ, ಸಾನ್ಯಾ ಓಟಿಟಿಯಿಂದ ಬಂದಿದ್ದಾರೆ. ಅಲ್ಲಿಂದ ಕ್ಲೋಸ್ ಆಗಿ ಇದ್ದಾರೆ. ಅವರಿಬ್ಬರ ಕೂತು ರೊಮ್ಯಾನ್ಸ್ ಮಾಡುವುದು ಹೆಚ್ಚಾಗಿದೆ ಎಂದು ಸುದೀಪ್ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದಾರೆ.
8/ 8
ಸುದೀಪ್ ಹೇಳಿದ್ದಕ್ಕೆ ರೂಪೇಶ್ ಶೆಟ್ಟಿಗೆ ಏನ್ ಅನ್ನಿಸ್ತೋ ಗೊತ್ತಿಲ್ಲ. ಬ್ರೇಕ್ ಬಂದಾಗ ಜೋರಾಗಿ ಅತ್ತಿದ್ದಾರೆ. ನನ್ನದು ಕೆಟ್ಟ ಉದ್ದೇಶ ಏನೂ ಇಲ್ಲ ಎಂದು ಮನೆಯವರ ಬಳಿ ಹೇಳಿದ್ದಾರೆ.