BBK Season 09: ಸಾನ್ಯಾ ಮಾಡಿದ್ದನ್ನು ಪವಾಡ ಎಂದುಕೊಂಡ ರೂಪೇಶ್ ರಾಜಣ್ಣ, ಮಜಾ ತೆಗೆದುಕೊಂಡ ಪ್ರಶಾಂತ್!
ಬಿಗ್ ಬಾಸ್ ಸೀಸನ್ 09 ರಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯಾ ಐಯ್ಯರ್ ಸೇರಿ ರೂಪೇಶ್ ರಾಜಣ್ಣನನ್ನು ಬಕ್ರಾ ಮಾಡಿದ್ದಾರೆ. ಮೈಂಡ್ ರೀಡ್ ಮಾಡ್ತೀನಿ ಅಂತ ಹೊಸ ಕಥೆ ಕಟ್ಟಿದ್ದಾರೆ. ಅದನ್ನು ನಂಬಿ ರಾಜಣ್ಣ ಬೆಚ್ಚಿ ಬಿದ್ದಿದ್ದಾರೆ.
ಬಿಗ್ ಬಾಸ್ ಸೀಸನ್ 09 ರಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯಾ ಐಯ್ಯರ್ ಸೇರಿ ರೂಪೇಶ್ ರಾಜಣ್ಣನನ್ನು ಬಕ್ರಾ ಮಾಡಿದ್ದಾರೆ. ಮೈಂಡ್ ರೀಡ್ ಮಾಡ್ತೀನಿ ಅಂತ ಹೊಸ ಕಥೆ ಕಟ್ಟಿದ್ದಾರೆ. ಅದನ್ನು ನಂಬಿ ರಾಜಣ್ಣ ಬೆಚ್ಚಿ ಬಿದ್ದಿದ್ದಾರೆ.
2/ 8
ರೂಪೇಶ್ ರಾಜಣ್ಣಗೆ ಸಾನ್ಯಾ ನಾನು ಮೈಂಡ್ ರೀಡ್ ಮಾಡ್ತೀನಿ ಗೊತ್ತಾ ಎನ್ನುತ್ತಾಳೆ. ಅದಕ್ಕೆ ಹೌದಾ ಅದೆಲ್ಲಾ ಬರುತ್ತಾ ನಿಮಗೆ ಎಂದು ಕೇಳ್ತಾನೆ. ಸಾನ್ಯಾ ಹೌದು ಎನ್ನುತ್ತಾಳೆ.
3/ 8
ಇತ್ತೀಚೆಗೆ ನಾನು ಮೈಂಡ್ ರೀಡ್ ಮಾಡಬಹುದು ಅನ್ನಿಸುತ್ತಿದೆ ಎಂದ ಸಾನ್ಯಾ, ತನ್ನ ಹೆಬ್ಬೆಟ್ಟನ್ನು ಹಣೆಯ ಮೇಲಿಟ್ಟು ಏನೂ ಯೋಚನೆ ಮಾಡುವಂತೆ ನಟಿಸುತ್ತಾಳೆ. ಅದನ್ನು ರಾಜಣ್ಣ ನಂಬ್ತಾರೆ. ಇದೇನಿದು ಬಿಗ್ ಬಾಸ್ ಏನ್ ಕಥೆ ಇದು ಎಂದು ರಾಜಣ್ಣ ಆಶ್ಚರ್ಯಗೊಂಡಿದ್ರು.
4/ 8
ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯಾ ಐಯ್ಯರ್ ಸೇರಿ ರೂಪೇಶ್ ರಾಜಣ್ಣನನ್ನು ಬಕ್ರಾ ಮಾಡಿದ್ದಾರೆ. ಅದನ್ನು ರಾಜಣ್ಣ ಹೌದಾ ಎಂದು ನಂಬಿದ್ದಾರೆ. ಅದನ್ನು ನೋಡಿ ಪ್ರಶಾಂತ್ ಸಂಬರ್ಗಿ ಮಜಾ ತೆಗೆದುಕೊಂಡಿದ್ದಾರೆ.
5/ 8
ಸಾನ್ಯಾ ದೇವರ ಮುಂದೆ ಒಂದು ಬಾಳೆಹಣ್ಣು ಇದೆ. ಅದು 5 ಪೀಸ್ ಆಗಿರುತ್ತೆ ಎಂದು ಹೇಳ್ತಾಳೆ. ಅಲ್ಲಿ ಹೋಗಿ ರೂಪೇಶ್ ರಾಜಣ್ಣ ನೋಡಿದ್ರೆ ಅದು 5 ಪೀಸ್ ಆಗಿರುತ್ತೆ.
6/ 8
ಸಾನ್ಯಾ ಐಯ್ಯರ್ ಹೇಳಿದ್ದು ನಿಜ ಆಗ್ತಿದೆ. ಅವಳದು ಪವಾಡ. ಮನೆಯಲ್ಲಿ ನನಗೆ ಒಬ್ಬನಿಗೆ ಅದು ಗೊತ್ತಾಗ್ತಿದೆ ಎಂದು ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಬಳಿ ಹೇಳ್ತಾರೆ.
7/ 8
ಪ್ರಶಾಂತ್, ಸಾನ್ಯಾ ಸೇರಿ ರಾಜಣ್ಣನನ್ನು ಬಕ್ರಾ ಮಾಡಿ, ಏನೂ ಗೊತ್ತಿಲ್ಲದ ರೀತಿ ಅವರ ಬಳಿಯೇ ನಾಟಕ ವಾಡ್ತಾರೆ. ಇಬ್ಬರು ಮಾಡಿದ್ದನ್ನು ನಂಬಿ ರಾಜಣ್ಣ ನಿಜ ಎಂದುಕೊಳ್ತಾರೆ.
8/ 8
ಸಾನಿಯಾ ಮಾಡ್ತಿರೋದು ಪವಾಡ. ನಾನ್ ಬಾಟಲ್ ಸಿಗಲಿಲ್ಲ ಎಂದ್ರೂ ಪರವಾಗಿಲ್ಲ. ನೀನು ನಾರ್ಮಲ್ ಆಗು ಎಂದು ರೂಪೇಶ್ ರಾಜಣ್ಣ ಸಾನ್ಯಾಗೆ ಹೇಳ್ತಾರೆ.