BBK Season 09: ಬಿಗ್ ಬಾಸ್ ಮನೆಯಿಂದ ಉದ್ಯಮಿ ಔಟ್; ಲುಕ್, ಬಲ ಇದ್ರೂ ವರ್ಕೌಟ್ ಆಗಲಿಲ್ಲ ಆಟ
ಬಿಗ್ ಬಾಸ್ ಸೀಸನ್ 9 ರಿಂದ ಔಟ್ ಆಗಿರುವ ಮೂರನೇ ವ್ಯಕ್ತಿ ದರ್ಶ್ ಚಂದ್ರಪ್ಪ ಎಂದು ಹೇಳಲಾಗ್ತಿದೆ. ನೋಡಲು ಸುಂದರವಾಗಿದ್ರೂ, ಸ್ಟ್ರಾಂಗ್ ಕೂಡ ಇದ್ರೂ ಆದ್ರೂ ಜನರ ಮನಸ್ಸು ಗೆಲ್ಲಲು ಆಗಲಿಲ್ಲ ಈ ಯಶಸ್ವಿ ಉದ್ಯಮಿಗೆ.
ಬಿಗ್ ಬಾಸ್ ಸೀಸನ್ 9 ರಲ್ಲಿ ಮೂರನೇ ವಾರದಲ್ಲಿ ಕಿಚ್ಚ ಸುದೀಪ್, ವಾರದ ಕಥೆ ಕಿಚ್ಚನ ಜೊತೆಯಲ್ಲಿ ಹಲವಾರು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅವರವರ ತಪ್ಪನ್ನು ಹೇಳಿದ್ದಾರೆ.
2/ 8
ಬಿಗ್ ಬಾಸ್ ಸೀಸನ್ 9 ರಿಂದ ಔಟ್ ಆಗಿರುವ ಮೂರನೇ ವ್ಯಕ್ತಿ ದರ್ಶ್ ಚಂದ್ರಪ್ಪ ಎಂದು ಹೇಳಲಾಗ್ತಿದೆ. ನೋಡಲು ಸುಂದರವಾಗಿದ್ರೂ, ಸ್ಟ್ರಾಂಗ್ ಕೂಡ ಇದ್ರೂ ಆದ್ರೂ ಜನರ ಮನಸ್ಸು ಗೆಲ್ಲಲು ಆಗಲಿಲ್ಲ ಈ ಯಶಸ್ವಿ ಉದ್ಯಮಿಗೆ.
3/ 8
ದುರ್ಗಾ, ಸೀತಾ ವಲ್ಲಭ, ಸೀರಿಯಲ್ ಮೂಲಕ ಜನರ ಮನಸ್ಸು ಗೆದ್ದಿದ್ದ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗ್ತಿದೆ. ಲುಕ್, ಸ್ಟ್ರಾಂಗ್ ಯಾವುದೂ ವರ್ಕ್ ಆಗಲಿಲ್ಲ.
4/ 8
ಮೊದಲ ವಾರ ದರ್ಶ್ ಚಂದ್ರಪ್ಪ ಸಂಬರ್ಗಿ ಜೊತೆ ಜಗಳ ಆಡಿಕೊಂಡಿದ್ದರು. ಆಟದಲ್ಲೂ ಯಾವಾಗಲೂ ಮುಂದೆ ಇರುತ್ತಿದ್ದರು. ಆದ್ರೆ ಇನ್ನು ಸ್ವಲ್ಪ ಗೇಮ್ ಚೆನ್ನಾಗಿ ಆಡಬೇಕಿತ್ತು ಎಂದು ಜನ ಹೇಳ್ತಾ ಇದ್ದಾರೆ.
5/ 8
ಪ್ರಶಾಂತ್ ಸಂಬರ್ಗಿ ಕಳೆದ ಬಾರಿ ಮನೆಯಿಂದ ಹೊರ ಹೋದ ಮೇಲೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಹೇಳಿಕೆ ನೀಡಿದ್ರು ಎಂದು ಮಾತಿನ ಜಗಳವಾಗಿತ್ತು. ಅದಕ್ಕೆ ಪ್ರಶಾಂತ್ ಸಂಬರ್ಗಿ ಅದು ನನ್ನ ಇಷ್ಟ ಎಂದಿದ್ದರು.
6/ 8
ಈ ವಾರದ ಕ್ಯಾಪ್ಟನ್ ಆಗಲು ಬಿಗ್ ಬಾಸ್ ಗೋಲ್ಡ್ ಮೈನ್ ಆಟವನ್ನೂ ದರ್ಶ್ ಚೆನ್ನಾಗಿ ಆಡಿದ್ರೂ. ಆದ್ರೆ ಒಮ್ಮೆ ರೂಲ್ಸ್ ಬ್ರೇಕ್ ಮಾಡಿ ಚಿನ್ನ ತೆಗೆದುಕೊಂಡು ಬಂದು, ದಂಡವಾಗಿ ಸಂಪಾದಿಸಿದ ಚಿನ್ನವನ್ನೆಲ್ಲಾ ಬಿಗ್ ಬಾಸ್ಗೆ ಕೊಟ್ಟಿದ್ದರು.
7/ 8
ದರ್ಶ್ ಚಂದ್ರಪ್ಪ ಅವರ ಬಗ್ಗೆ ದಸರಾ ಸಮಯದಲ್ಲಿ ಎಲ್ಲರೂ ಏನೇನು ಕಾಮೆಂಟ್ ಕೊಟ್ಟಾಗ ಕಣ್ಣೀರು ಹಾಕಿದ್ದರು. ನಾನು ತುಂಬಾ ಕಷ್ಟ ಪಟ್ಟು ನಟನೆಗೆ ಬಂದೆ. ಅಲ್ಲೂ ಅವಕಾಶ ಅಷ್ಟು ಸಿಕ್ಕಿಲ್ಲ. ಈಗ ಉದ್ಯಮ ಶುರು ಮಾಡಿ ಅದರಲ್ಲಿ ಯಶಸ್ವಿ ಆಗುತ್ತಿದ್ದೇನೆ ಎಂದು ಹೇಳಿದ್ರು.
8/ 8
ಬಿಗ್ ಬಾಸ್ ಮನೆ ಮಂದಿ ಜೊತೆ ದರ್ಶ್ ಚೆನ್ನಾಗಿ ಹೊಂದಿಕೊಳ್ತಾ ಇದ್ರು. ಎಲ್ಲರ ಜೊತೆ ಮಾತನಾಡ್ತಾ ಇದ್ರು. ಆದ್ರೂ ಜನಕ್ಕೆ ಯಾಕೋ ದರ್ಶ್ ಚಂದ್ರಪ್ಪ ಇಷ್ಟ ಆಗಿಲ್ಲ. ಇನ್ನೂ ಚೆನ್ನಾಗಿ ಆಡಬೇಕಿತ್ತು ಎಂದಿದ್ದಾರೆ.