Bigg Boss Kannada: ಬಿಗ್ ಬಾಸ್ ಫೈನಲ್ಗೂ ಮೊದಲೇ ವಿನ್ನರ್ ಸ್ಪೀಚ್! ಈ ಬಾರಿ ಅರ್ಧ ಕೋಟಿ ಯಾರಿಗೆ?
ಮುಂದಿನ ವಾರವೇ ಯಾರ ಬಿಗ್ ಬಾಸ್ ಸೀಸನ್ 09ರ ವಿನ್ನರ್ ಯಾರು ಎಂದು ತಿಳಿಯಲಿದೆ. ಉಳಿದಿರುವ 8 ಅಭ್ಯರ್ಥಿಗಳಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಆದ್ರೆ ಅದಾಗಲೇ ವಿನ್ನರ್ ಸ್ಪೀಚ್ ನಡೆದಿದೆ!
ಮುಂದಿನ ವಾರವೇ ಯಾರ ಬಿಗ್ ಬಾಸ್ ಸೀಸನ್ 09ರ ವಿನ್ನರ್ ಯಾರು ಎಂದು ತಿಳಿಯಲಿದೆ. ಉಳಿದಿರುವ 8 ಅಭ್ಯರ್ಥಿಗಳಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
2/ 8
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಸುದೀಪ್ ಲುಕ್ ಇದು. ಸುದೀಪ್ ಅವರು ಮನೆಯವರಿಗೆ ಪ್ರಶ್ನೆಯೊಂದನ್ನು ಕೇಳ್ತಾರೆ. ಯಾರು ಟ್ರೋಫಿ ಗೆದ್ರೆ ಹೇಗೆ ಮಾತನಾಡುತ್ತಾರೆ ಎಂದು ಕೇಳ್ತಾರೆ.
3/ 8
ಆರ್ಯವರ್ಧನ್ ಗುರೂಜಿ ಟ್ರೋಫಿ ಗೆದ್ರೆ ಹೇಗೆ ಮಾತನಾಡುತ್ತಾರೆ ಅಂತ ರೂಪೇಶ್ ಶೆಟ್ಟಿ ಹೇಳ್ತಾರೆ. ಮೊದಲು ನಾನು ಐದರಲ್ಲಿ ಒಬ್ಬ ಆದ್ರೆ ಸಾಕು ಅಂತ ಬಂದೆ. ಆದ್ರೆ ನಾನು ಆಗ್ಲೇ ಬೇಕಿತ್ತು ನಂಬರ್ ಒನ್. ನಂಬರ್ ಅಂದ್ರೆ ನಾನು. ನಾನು ಅಂದ್ರೆ ನಂಬರ್ ಎಂದು ಹೇಳ್ತಾರೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
4/ 8
ಅಮೂಲ್ಯ ಗೆದ್ರೆ ಹೇಗಿರುತ್ತೆ ಎಂದು ದಿವ್ಯಾರನ್ನು ಸುದೀಪ್ ಕೇಳ್ತಾರೆ, ಅದಕ್ಕೆ ದಿವ್ಯಾ ಈ ರೀತಿ ಹೇಳಿದ್ರು, ಎಲ್ಲಾ ಹೇಳಿದ್ರೂ ನಾನು ವಾದ ಮಾಡ್ತೀನಿ ಅಂತ. ತಾಳ್ಮೆಯಿಂದ ಇರಲ್ಲ ಅಂತ. ಆದ್ರೆ ನಾನು ಇವತ್ತು ತಾಳ್ಮೆಯಿಂದ ಇದ್ದಿದ್ದಕ್ಕೆ ಗೆದ್ದೆ ಎನ್ನುತ್ತಾರೆ ಸರ್ ಎಂದು ದಿವ್ಯಾ ಹೇಳ್ತಾರೆ.
5/ 8
ದಿವ್ಯಾ ಉರುಡುಗ ಅಮೂಲ್ಯ ಹೇಳಿದ ರೀತಿ ಹೇಳಿದ್ದಕ್ಕೆ, ಸುದೀಪ್ ಟಕ್ಕರ್ ಕೊಟ್ಟರು. ಇದು ಅಮೂಲ್ಯ ಸ್ಪೀಚ್ ಅಲ್ಲ, ನಿಮ್ಮ ಸ್ಪೀಚ್ ತರ ಇತ್ತು ಎಂದು ರೇಗಿಸಿದ್ರು.
6/ 8
ಸುದೀಪ್ ಅವರು ರೇಗಿಸಿದ್ದಕ್ಕೆ ದಿವ್ಯಾ ಉರುಡುಗ ಬಿದ್ದು, ಬಿದ್ದು ನಕ್ಕರು. ಮನೆಯವರೆಲ್ಲಾ ಸಹ ನಕ್ಕು ಎಂಜಾಯ್ ಮಾಡಿದ್ರು.
7/ 8
ರೂಪೇಶ್ ಶೆಟ್ಟಿ ಗೆದ್ರೆ ಏನ್ ಹೇಳ್ತಾರೆ ಎಂದು ರಾಕೇಶ್ ಅಡಿಗ ತೋರಿಸಿದ್ದಾರೆ. ಎವ್ರಿ ಟೈಂ ನಾನು ನಾಮಿನೇಟ್ ಆದಾಗ, ನೀವು ನನಗೆ ವೋಟ್ ಮಾಡಿದ್ದೀರಿ. ಮೂರು ಪುಶ್ ಅಪ್ ಮಾಡ್ತೀನಿ. ಅಯ್ಯೋ ನಾನು ಗೇಲ್ತಾ ಇದೀನಿ ಎಂದು ಹೇಳ್ತಾರೆ ಸರ್ ಎಂದು ರಾಕಿ ಹೇಳಿದ್ದಾರೆ.
8/ 8
ಮನೆಯವರೆಲ್ಲಾ ಸ್ಪೀಚ್ ಕೇಳಿ ಸುದೀಪ್ ಅವರು ನಕ್ಕರು. ಮನೆಯವರು ಸಹ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ರು.