ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 09 ರ ಗೆಲುವಿನ ಮಾಲೆಯನ್ನು ರೂಪೇಶ್ ಶೆಟ್ಟಿ ತಮ್ಮ ಕೊರಳಿಗೆ ಧರಿಸಿದ್ದಾರೆ. ಬಿಗ್ ಬಾಸ್ ಸೀಸನ್ 09 ರ ವಿನ್ನರ್ ಆಗಿದ್ದಾರೆ.
2/ 8
ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಕೊನೆಯಲ್ಲಿ ಉಳಿದ ಇಬ್ಬರು ಸ್ಪರ್ಧಿಗಳಾಗಿದ್ದರು. ಆದ್ರೆ ರೂಪೇಶ್ ಶೆಟ್ಟಿ ಕನ್ನಡಿಗರ ಮನಸ್ಸು ಗೆದ್ದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
3/ 8
ಸುದೀಪ್ ಅವರು ವಿನ್ನರ್ ಘೋಷಣೆ ಮಾಡ್ತಿದ್ದಂತೆ ರೂಪೇಶ್ ಶೆಟ್ಟಿ ತುಂಬಾ ಖುಷಿಯಾಗಿ ಕುಣಿದಾಡಿದ್ರು. ಅವರು ಗೆಲುವಿನ ಖುಷಿ ಕಣ್ಣೀರನ ಮೂಲಕ ಹೊರ ಬಂತು.
4/ 8
ರೂಪೇಶ್ ಶೆಟ್ಟಿ ತಮಗೆ ವೋಟ್ ಮಾಡಿದ ಎಲ್ಲಾ ಜನತೆಗೂ ಧನ್ಯವಾದ ತಿಳಿಸಿದ್ರು, ನಾನೊಬ್ಬ ಕರಾವಳಿ ಮೂಲದವನು. ಅಲ್ಲಿನ ಜನರ ಪ್ರೀತಿ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ಈಗ ಕರುನಾಡ ಜನರ ಪ್ರೀತಿ ಸಿಕ್ಕಿದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
5/ 8
ಓಟಿಟಿ ಸೀಸನ್ ನಿಂದ ಬಿಗ್ ಬಾಸ್ ಸೀಸನ್ 09 ಕ್ಕೆ ಆಯ್ಕೆ ಆಗಿದ್ದ ರೂಪೇಶ್ ಶೆಟ್ಟಿ, ಇಂದು ಬಿಗ್ ಬಾಸ್ ಸೀಸನ್ 09ರ ಟೈಟಲ್ ವಿನ್ನರ್ ಆಗಿದ್ದಾರೆ.
6/ 8
ತಾವು ಗೆದ್ದಿದ್ದಕ್ಕೆ ಆರ್ಯವರ್ಧನ್ ಗುರೂಜಿ ಮತ್ತು ಸಾನ್ಯಾ ಐಯ್ಯರ್ ಗೆ ಧನ್ಯವಾದ ತಿಳಿಸಿದ್ರು. ನಂತರ ಎಲ್ಲಾ ಅಭ್ಯರ್ಥಿಗಳಿಗೂ ಥ್ಯಾಂಕ್ಸ್ ಹೇಳಿದ್ರು.
7/ 8
ಅಲ್ಲದೇ ನಾನು ಇಲ್ಲಿ ಇರಲು ನನ್ನ ಕುಟುಂಬ ಕಾರಣ. ಅವರಿಗೂ ನಾನು ಧನ್ಯವಾದ ಹೇಳ್ತೇನೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದರು. ರೂಪೇಶ್ ಅವರ ಅಕ್ಕ ಖುಷಿಯಿಂದ ಕಣ್ಣೀರು ಹಾಕಿದ್ರು.
8/ 8
ಸುದೀಪ್ ಅವರಿಗೆ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ ರೂಪೇಶ್ ಶೆಟ್ಟಿ. ನನಗೆ ಮೇಷ್ಟ್ರು ಕೊಟ್ಟ ಸಲಹೆಯಿಂದ ಇಲ್ಲಿ ತನಕ ಬರಲು ಸಾಧ್ಯವಾಯ್ತು ಎಂದು ಹೇಳಿದ್ರು.ಅಲ್ಲದೇ 60 ಲಕ್ಷ ರೂಪಾಯಿ ಹಣ ಪಡೆದ್ರು.