BBK Grand Finale: 'ಬಿಗ್' ಮನೆಯಲ್ಲಿ ಕ್ಯಾಮೆರಾಗಾಗಿ ಬದುಕಿದ್ದವರು ಯಾರು? ಎಲ್ಲರ ವೋಟ್ ಇವರಿಗೆ!
ಬಿಗ್ ಬಾಸ್ ಮನೆಯಲ್ಲಿ ಯಾರು ಕ್ಯಾಮೆರಾಗಿ ಬದುಕಿದವರು, ಕ್ಯಾಮೆರಾ ಬಗ್ಗೆ ತಲೆ ಕೆಡಿಸಿಕೊಳ್ಳದವರು ಯಾರು ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸ್ಪರ್ಧಿಗಳು ನೀಡಿದ ಉತ್ತರ ಕೇಳಿದ್ರೆ ನೀವು ನಗ್ತೀರಿ!
ಬಿಗ್ ಬಾಸ್ ಮನೆಯಲ್ಲಿ ಯಾರು ಕ್ಯಾಮೆರಾಗಿ ಬದುಕಿದವರು, ಕ್ಯಾಮೆರಾ ಬಗ್ಗೆ ತಲೆ ಕೆಡಿಸಿಕೊಳ್ಳದವರು ಯಾರು ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.
2/ 8
ಕ್ಯಾಮೆರಾಕ್ಕಾಗಿ ಬದುಕಿದವರು ಆರ್ಯವರ್ಧನ್ ಗುರೂಜಿ ಅವರು. ಕ್ಯಾಮೆರಾ ಬಗ್ಗೆ ತಲೆಕೆಡಿಸಿಕೊಳ್ಳದವರು ಅಂದ್ರೆ ರಾಕೇಶ್ ಅಡಿಗ. ಅವರು ಅವರ ಪಾಡಿಗೆ ಇರುತ್ತಿದ್ರು ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.
3/ 8
ಆರ್ಯವರ್ಧನ್ ಗುರೂಜಿ ಯಾವುದೇ ವಿಷಯ ಆಗಿರಲಿ ಕ್ಯಾಮೆರಾ ನೋಡುವವರೆಗೂ ಬಿಡುತ್ತಿರಲಿಲ್ಲ. ಅದಕ್ಕೆ ಎಲ್ಲರೂ ಆರ್ಯವರ್ಧನ್ ಗುರೂಜಿ ಕ್ಯಾಮೆರಾಕ್ಕಾಗಿ ಬದುಕಿದ್ದಾರೆ ಎಂದು ಹೇಳಿದ್ದಾರೆ.
4/ 8
ಆರ್ಯವರ್ಧನ್ ಗುರೂಜಿ ಕ್ಯಾಮೆರಾಕ್ಕಾಗಿ ಬದುಕಿದ್ದಾರೆ. ಒಂದು ಆಮ್ಲೆಟ್ ಮಾಡಿದ್ರೂ ನೋಡಿ, ನೋಡಿ ಎಂದು ಹಿಂಸೆ ಕೊಡ್ತಾ ಇದ್ರು. ಕ್ಯಾಮೆರಾಗೆ ಹಿಂಸೆ ಆಯ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಕ್ಯಾಮೆರಾ ಹಿಂದೆ ಇದ್ದೋರಿಗೆ ಬೇಜಾರಾಗಿರುತ್ತೆ ಎಂದು ವಿನೋದ್ ಗೊಬ್ಬರಗಾಲ ಹೇಳಿದ್ದಾರೆ.
5/ 8
ರೂಪೇಶ್ ಶೆಟ್ಟಿ ಕ್ಯಾಮೆರಾಗೆ ಬದುಕಿದವರು ಅರುಣ್ ಸಾಗರ್ ಅವರು. ಅವರು ಅವರ ಟ್ಯಾಲೆಂಟ್ ಅನ್ನು ಕ್ಯಾಮೆರಾ ಮುಂದೆ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
6/ 8
ನಾವೆಲ್ಲಾ ಕ್ಯಾಮೆರಾ ಇದೆ ಅಂತ ಹೇಳಿ ಬದುಕಲ್ಲ. ಆದ್ರೆ ರೂಪೇಶ್ ರಾಜಣ್ಣ ಮೊದಲೇ ಪ್ಲ್ಯಾನ್ ಮಾಡಿಕೊಂಡು ಬಂದಿದ್ದಾರೆ. ಕ್ಯಾಮೆರಾ ಜೊತೆ ಬದುಕಿದ್ದಾರೆ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.
7/ 8
ದೀಪಿಕಾ ದಾಸ್ ಸಹ ಕ್ಯಾಮೆರಾ ಜೊತೆ ಬದುಕಿದ್ದು ಆರ್ಯವರ್ಧನ್ ಗುರೂಜಿ, ಕ್ಯಾಮೆರಾ ಇಲ್ಲದೇ ಬದುಕಿದ್ದು ರಾಕೇಶ್ ಅಡಿಗ ಅಂತ ಹೇಳಿದ್ದಾರೆ.
8/ 8
ಒಟಿಟಿಯಿಂದ ರಾಕೇಶ್ ಅಡಿಗ ಒಂದೇ ರೀತಿ ಇದ್ದಾರೆ. ಕ್ಯಾಮೆರಾ ಬಗ್ಗೆ ತಲೆ ಕೆಡಿಸಿಕೊಳ್ಳದೇ ಟಾಪ್ 5ನಲ್ಲಿ ಇದ್ದಾರೆ. ಇವರೇ ವಿನ್ ಆದ್ರೂ ಆಶ್ಚರ್ಯ ಇಲ್ಲ ಅಂತಿದ್ದಾರೆ ಅಭಿಮಾನಿಗಳು.