Bigg Boss Kannada: ವಿನೋದ್ ಔಟ್ ಆದ ಬೆನ್ನಲ್ಲೇ, 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಭಿಯಾನ!
ಬಿಗ್ ಬಾಸ್ ನಲ್ಲಿ ಪ್ರತಿ ವಾರವೂ ಒಬ್ಬೊಬ್ಬರು ಎಲಿಮಿನೇಟ್ ಆಗಿ ಹೋಗ್ತಾರೆ. ಈ ಸರಿ ಕಾಮಿಡಿಯನ್ ವಿನೋದ್ ಗೊಬ್ಬರಗಾಲ ಔಟ್ ಆಗಿದ್ದಾರೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ, 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಭಿಯಾನ ಶುರುವಾಗಿದೆ.
ಬಿಗ್ ಬಾಸ್ ಸೀಸನ್ 09 ಕ್ಕೆ ಬಂದಿದ್ದ ವಿನೋದ್ ಗೊಬ್ಬರಗಾಲ ಬಡತನದಿಂದ ಬಂದವರು. ಕಷ್ಟ ಪಟ್ಟು ಮಜಾ ಭಾರತ ಕಾರ್ಯಕ್ರಮದ ಮೂಲಕ ಹೆಸರು ಮಾಡಿದ್ದರು.
2/ 8
ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಅದ್ಭುತವಾಗಿ ಸ್ಕಿಟ್ಗಳನ್ನು ಮಾಡಿ ರನ್ನರ್ ಅಪ್ ಕೂಡ ಆಗಿದ್ದರು. ಅದಾದ ನಂತರ ಬಿಗ್ ಬಾಸ್ಗೆ ಅವಕಾಶ ಸಿಕ್ಕಿತು. ಮೊದಲ ದಿನದಿಂದಲೂ ಚೆನ್ನಾಗಿ ಆಡಿದ್ದಾರೆ.
3/ 8
ಟಾಸ್ಕ್ ವಿಚಾರಕ್ಕೆ ಬಂದಾಗ ವಿನೋದ್ ಗೊಬ್ಬರಗಾಲ ಯಾವಾಗಲೂ ಮುಂದೆ ಇರುತ್ತಿದ್ರು. ಹಲವು ಟಾಸ್ಕ್ ಗಳನ್ನು ಸಹ ಗೆದ್ದಿದ್ದಾರೆ. ಅಲ್ಲದೇ ಮನೆಯವರನ್ನು ನಗಿಸುತ್ತಿದ್ದರು.
4/ 8
ವಿನೋದ್ ಗೊಬ್ಬರಗಾಲ ಬಿಗ್ ಬಾಸ್ ಮನೆಯಲ್ಲಿ ಎರೆಡೆರೆಡು ಬಾರಿ ಕಿಚ್ಚನ ಚಪ್ಪಾಳೆ ಪಡೆದಿದ್ದರು. ಎಲ್ಲವೂ ಚೆನ್ನಾಗಿತ್ತು. ಆದ್ರೆ 9ನೇ ವಾರ ಮಾತ್ರ ಆಟವನ್ನು ಚೆನ್ನಾಗಿ ಆಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
5/ 8
ಅಲ್ಲದೇ ಈ ವಾರ 12 ಕ್ಕೆ 12 ಮಂದಿ ನಾಮಿನೇಟ್ ಆಗಿದ್ದರು. ವಿನೋದ್ ಅತೀ ಕಡಿಮೆ ವೋಟ್ಗಳನ್ನು ಪಡೆದು ಮನೆಯಿಂದ ಹೊರ ನಡೆದಿದ್ದಾರೆ. ಅಳುತ್ತಾ ಮನೆ ಬಿಟ್ಟು ಹೋಗಿದ್ದಾರೆ.
6/ 8
ವಿನೋದ್ ಔಟ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ 'ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ' ಅಭಿಯಾನ ಶುರುವಾಗಿದೆ. ಅಭಿಮಾನಿಗಳು ವಿನೋದ್ ರನ್ನು ವಾಪಸ್ ಕರೆಸಿ ಎನ್ನುತ್ತಿದ್ದಾರೆ.
7/ 8
ವಿನೋದ್ ಗೊಬ್ಬರಗಾಲ ಇನ್ನೂ ಸ್ಪಲ್ಪ ದಿನ ಇರಬೇಕಿತ್ತು. ಬಡ ಪ್ರತಿಭೆ ಬೆಳೆಯಬೇಕು ಎಂದು ಕಾಮೆಂಟ್ ಹಾಕುತ್ತಿದ್ದಾರೆ. ನಾವು ವಿನೋದ್ ಬೆಂಬಲವಾಗಿ ನಿಲ್ತೀವಿ ಎಂದಿದ್ದಾರೆ.
8/ 8
ಅಭಿಮಾನಿಗಳ ಬೇಡಿಕೆ ಮೇರೆಗೆ ಮತ್ತೆ ಏನಾದ್ರೂ ವಿನೋದ್ ವಾಪಸ್ ಬರ್ತಾರಾ? ಮತ್ತೆ ತನ್ನ ಆಟವನ್ನು ಬಿಗ್ ಬಾಸ್ ನಲ್ಲಿ ಮುಂದುವರೆಸುತ್ತಾರಾ ನೋಡಬೇಕು.