Bigg Boss Kannada: ಬಿಗ್ ಬಾಸ್ ಮನೆಯಿಂದ ವಿನೋದ್ ಔಟ್, ಗೊಬ್ಬರಗಾಲನ ಆಟ ಗೋಲ್ ಮಾಲ್ ಆಗಿದ್ದಕ್ಕೆ ಶಿಕ್ಷೆನಾ?
ಬಿಗ್ ಬಾಸ್ ನಲ್ಲಿ ಪ್ರತಿ ವಾರವೂ ಒಬ್ಬಬ್ಬರು ಎಲಿಮಿನೇಟ್ ಆಗಿ ಹೋಗ್ತಾರೆ. ಈ ಬಾರಿ ಕಾಮಿಡಿಯನ್ ವಿನೋದ್ ಗೊಬ್ಬರಗಾಲ ಔಟ್ ಆಗಿದ್ದಾರೆ. ಎರೆಡೆರೆಡು ಬಾರಿ ಕಿಚ್ಚನ ಚಪ್ಪಾಳೆ ಪಡೆದ ವಿನೋದ ಆಟ ಮುಗಿದಿದೆ.
ಬಿಗ್ ಸೀಸನ್ 09 ಕ್ಕೆ ನವೀನರು, ಪ್ರವೀಣರು ಎಂಟ್ರಿ ಆಗಿದ್ದರು. ನವೀನರಾಗಿ ಕಾಮಿಡಿಯನ್ ವಿನೋದ್ ಗೊಬ್ಬರಗಾಲ ಇದ್ದರು. ಆದ್ರೆ ಈ ವಾರ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
2/ 8
ವಿನೋದ್ ಗೊಬ್ಬರಗಾಲ ಎಲ್ಲಾ ಆಟಗಳನ್ನು ತುಂಬಾ ಚೆನ್ನಾಗಿ ಆಡ್ತಾ ಇದ್ರು. ಯಾವುದೇ ಟಾಸ್ಕ್ ಆಗಲಿ ಗೆಲ್ಲುತ್ತಿದ್ದರು. ಅವರ ಎಲಿಮಿನೇಷನ್ ಎಲ್ಲರಿಗೂ ಶಾಕ್ ನೀಡಿದೆ.
3/ 8
ಬಿಗ್ ಬಾಸ್ ಮನೆಯಲ್ಲೂ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಿದ್ದರು. ಎಲ್ಲರನ್ನೂ ನಗಿಸುತ್ತಿದ್ದರು ಕೂಡ. ಅರುಣ್ ಸಾಗರ್ ಜೊತೆ ಹೆಚ್ಚು ಇರುತ್ತಿದ್ದರು ವಿನೋದ್ ಗೊಬ್ಬರಗಾಲ.
4/ 8
ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋನಿಂದ ಹೆಸರು ವಾಸಿಯಾಗಿದ್ದರು ವಿನೋದ್ ಗೊಬ್ಬರಗಾಲ. ಅಲ್ಲದೇ ಗಿಚ್ಚಿ ಗಿಲಿ ಗಿಲಿ ಶೋನ ರನ್ನರ್ ಅಪ್ ಕೂಡ ಆಗಿದ್ದರು.
5/ 8
ಎಲ್ಲಾ ಇದ್ದು, ಅವರು ಔಟ್ ಆಗಲು ಅವರು ಮಾಡಿದ ಗೋಲ್ ಮಾಲ್ ಕಾರಣವಾಯ್ತಾ ಎನ್ನೋ ಪ್ರಶ್ನೆಗಳು ಎದ್ದಿವೆ. ಹೌದು ನಟ್ ಬಿಚ್ಚುವ ಟಾಸ್ಕ್ ನಲ್ಲಿ ವಿನೋದ್ ಸಹ ಬಟ್ಟೆ ಬಳಸಿದ್ದರು.
6/ 8
ಕಳೆದ ವಾರದ ಟಾಸ್ಕ್ ನಲ್ಲಿ ಮನೆ ಕಾಡಾಗಿತ್ತು. ಆಗ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈಜುಕೊಳದಲ್ಲಿರು ಬಾಕ್ಸ್ ನ ನಟ್ ಗಳನ್ನು ಕೈಯಿಂದ ಬಿಚ್ಚಬೇಕು ಎಂದು. ಗುರೂಜಿ ಬಟ್ಟೆ ಬಳಸಿ ಬಿಚ್ಚಿರುತ್ತಾರೆ.
7/ 8
ಮನೆಯವರೆಲ್ಲಾ ಗುರೂಜಿಗೆ ಬೈಯುತ್ತಿರುವಾಗ, ವಿನೋದ್ ಸಹ ಬೈದಿರುತ್ತಾರೆ. ಆದ್ರೆ ಅವರು ಸಹ ಬಟ್ಟೆ ಬಿಚ್ಚಿ ನಟ್ ಬಿಚ್ಚಿರುತ್ತಾರೆ. ಮನೆಯವರ ಮುಂದೆ ತಪ್ಪೇ ಮಾಡದಂತೆ ನಟಿಸಿರುತ್ತಾರೆ. ಇದೇ ವಿನೋದ್ ಔಟ್ ಆಗಲು ಕಾರಣ ಇರಬಹುದು.
8/ 8
ಅಲ್ಲದೇ ಈ ವಾರ ಮನೆಯಲ್ಲಿ 12 ಮಂದಿಯೂ ಸಹ ನಾಮಿನೇಟ್ ಆಗಿದ್ದರು. ಎಲ್ಲಾ ಘಟಾನುಘಟಿಗಳೇ, ಅವರೆಲ್ಲಾ ಮುಂದೆ ವಿನೋದ್ ಆಟ ಕಮ್ಮಿ ಆಯ್ತಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಾ ಇದ್ದಾರೆ.