ಕಮಲಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಅಮೂಲ್ಯ ಗೌಡ ಬಿಗ್ ಬಾಸ್ ಸೀಸನ್ ಗೆ ಪ್ರವೀಣರಾಗಿ ಬಂದಿದ್ದರು. ಆದ್ರೆ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಇರುವಾಗ ಮನೆಯಿಂದ ಔಟ್ ಆಗಿದ್ದಾರೆ.
2/ 8
ಧಾರಾವಾಹಿಯಲ್ಲಿ ಮುಗ್ಧ ಪಾತ್ರ ಮಾಡಿದ್ದ ಅಮೂಲ್ಯಳನ್ನು ಬಿಗ್ ಬಾಸ್ ನಲ್ಲಿ ನೋಡಿ ಜನ ಶಾಕ್ ಆಗಿದ್ದು ನಿಜ. ಯಾಕಂದ್ರೆ ಅಮೂಲ್ಯ ಸಖತ್ ನೇರ ಮಾತಿನ ಹುಡುಗಿ. ಬೋಲ್ಡ್ ಅಂಡ್ ಸ್ಮಾರ್ಟ್ ಚೆಲುವೆ.
3/ 8
ಮೊದಲ ವಾರವೇ ಬ್ಯಾಲೆನ್ಸಿಂಗ್ ಟಾಸ್ಕ್ ನಲ್ಲಿ ಗೆದ್ದು ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ರೆ, ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಸ್ಟ್ರಾಂಗ್ ಅಭ್ಯರ್ಥಿ ಎಂದು ಮನೆಯಲ್ಲಿ ಗುರುತಿಸಿಕೊಂಡಿದ್ರು.
4/ 8
ಅಮೂಲ್ಯ ಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಅಮೂಲ್ಯ ಅವರೇ ನಿಮ್ಮ ನೇರ ನುಡಿ ಎಲ್ಲರಿಗೂ ಇಷ್ಟ. ಆದ್ರೆ ಖಾರವಾದ ಮಾತುಗಳು ಬೇಕಿತ್ತಾ ಎಂದು ಅಭಿಮಾನಿಗಳು ಕೇಳಿದ್ದಾರೆ ಎಂದು ಸುದೀಪ್ ಅವರು ಹೇಳಿದ್ದಾರೆ.
5/ 8
13 ವಾರಗಳ ಕಾಲ ಇದ್ದ ಅಮೂಲ್ಯ ಗೌಡ, ಕೊನೆ ವಾರದಲ್ಲಿ ಕಾಣಲಿಲ್ಲ ಎಂದು ಸುದೀಪ್ ಅವರು ಹೇಳಿದ್ರು. ನಿಮ್ಮ ಶಾರ್ಪ್ ಮಾತು ಇರಲಿಲ್ಲ. ಹಾಗಾದ್ರೆ ಯಾವುದು ನಕಲಿ ಎಂದು ಕೇಳಿದ್ರು.
6/ 8
ಅಲ್ಲದೇ ಅಮೂಲ್ಯ ಗೌಡ ಟಾಸ್ಕ್ ಅಂತ ಬಂದ್ರೆ ಮಾತ್ರ ಮುಂದೆ ಇರುತ್ತಿದ್ರು, ಆದ್ರೆ ಜನರಿಗೆ ಮನರಂಜನೆ ನೀಡುವಲ್ಲಿ ಹಿಂದೆ ಉಳಿದ್ರು ಎಂದು ಸುದೀಪ್ ಅವರು ವೇದಿಕೆಯಲ್ಲಿ ಅಮೂಲ್ಯ ಅವರಿಗೆ ಕೇಳಿದ್ದಾರೆ.
7/ 8
ಅಮೂಲ್ಯ ಗೌಡ ಸದಾ ರಾಕೇಶ್ ಅಡಿಗ ಜೊತೆ ಇರ್ತಿದ್ರು. ಅಲ್ಲದೇ ಅನುಪಮಾ ಗೌಡ, ದಿವ್ಯಾ ಉರುಡುಗ ಇವರ ಜೊತೆ ಕಾಲ ಕಳೆಯುತಿದ್ರು. ಬೇರೆ ಯಾರ ಜೊತೆಯೂ ಅಷ್ಟಾಗಿ ಮಾತನಾಡಿಲ್ಲ.
8/ 8
ಅಮೂಲ್ಯ ಗೌಡ ಆಟ ಮಾತ್ರ ಅಲ್ಲದೇ ತಮ್ಮ ನೋಟದಿಂದಲೂ ಅಭಿಮಾನಿಗಳ ಮನಸ್ಸು ಗೆದ್ದಿದ್ರು. ಆದ್ರೆ ಅವರ ನೇರ ಮತ್ತು ಖಾರವಾದ ಮಾತುಗಳಿಂದ ಫಿನಾಲೆ ತಲುಪಲು ಆಗಲಿಲ್ಲ ಎಂದು ಹೇಳಲಾಗ್ತಿದೆ.