ಪ್ರತಿ ವಾರದಂತೆ ಈ ವಾರವೂ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಆದ್ರೆ ಅದು ಭಿನ್ನವಾಗಿ ನಡೆದಿದೆ. ಇಬ್ಬಿಬ್ಬರು ಅಭ್ಯರ್ಥಿಗಳು ಒಮ್ಮೆಯೇ ಹೋಗಿ. ಯಾರನ್ನು ಸೇವ್ ಮಾಡಬೇಕು ಎಂದು ಹೇಳಬೇಕು. ಕಾವ್ಯಶ್ರೀ ಮತ್ತು ಅರುಣ್ ಸಾಗರ್ ಜೊತೆಗೆ ಹೋಗಿದ್ದಾರೆ.
2/ 8
ಹೋಗಿರುವ ಇಬ್ಬರು ಅಭ್ಯರ್ಥಿಗಳು ಒಬ್ಬರ ಫೋಟೋವನ್ನೇ ತೋರಿಸಬೇಕು. ಆಗ ಅವರು ಸೇವ್ ಆಗ್ತಾರೆ. ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಇಬ್ಬರು ನಾಮಿನೇಷನ್ ಪ್ರಕ್ರಿಯೆಗೆ ಹೋಗಿದ್ದಾರೆ.
3/ 8
ಒಂದು ವೇಳೆ ಇಬ್ಬರು ಅಭ್ಯರ್ಥಿಗಳು ಬೇರೆ ಬೇರೆ ಫೋಟೋ ತೋರಿಸಿದ್ರೆ, ಇಬ್ಬರೂ ಕೂಡ ನಾಮಿನೇಟ್ ಆಗ್ತಾರೆ. ಅನುಪಮಾ ಗೌಡ ಅವರ ಫೋಟೋವನ್ನೇ ಸೇವ್ ಮಾಡಲು ಹಿಡಿದುಕೊಂಡಿದ್ದಾರೆ.
4/ 8
ದಿವ್ಯಾ ಉರುಡುಗ, ಅಮೂಲ್ಯ ಗೌಡ ನಾಮಿನೇಷನ್ ಪ್ರಕ್ರಿಯೆಗೆ ಹೋಗಿದ್ದಾರೆ. ಅಮೂಲ್ಯ ಗೌಡ ದಿವ್ಯಾ ಫೋಟೋ ಹಿಡಿದಿದ್ದಾರೆ. ದಿವ್ಯಾ ಯಾರ ಫೋಟೋ ತೋರಿಸ್ತಾರೆ ನೋಡಬೇಕು.
5/ 8
ದೀಪಿಕಾ ದಾಸ್ ಮತ್ತು ಪ್ರಶಾಂತ್ ಸಂಬರ್ಗಿ ಒಟ್ಟಿಗೆ ನಾಮಿನೇಷನ್ ಪ್ರಕ್ರಿಯೆ ಹೋಗಿದ್ದಾರೆ. ಪ್ರಶಾಂತ್ ಅವರ ಫೋಟೋವನ್ನೇ ಹಿಡಿದುಕೊಂಡಿದ್ದಾರೆ. ದೀಪಿಕಾ ದಾಸ್ ಉತ್ತರಕ್ಕೆ ಕಾಯ್ತಾ ಇದ್ದಾರೆ.
6/ 8
ಆರ್ಯವರ್ಧನ್ ಗುರೂಜಿ, ಅನುಪಮಾ ಗೌಡ ಇಬ್ಬರು ಸೇವ್ ಆಗ್ತಾರಾ? ಅಥವಾ ಇಬ್ಬರು ನಾಮಿನೇಟ್ ಆಗ್ತಾರಾ ನೋಡಬೇಕು. ಉತ್ತರಕ್ಕಾಗಿ ಇಬ್ಬರೂ ಕಾಯ್ತಾ ಇದ್ದಾರೆ.
7/ 8
ಎಮೋಷನಲ್ ಆಗಿ ಕನೆಕ್ಟ್ ಆಗಿದ್ರೂ ಕೂಡ, ಈ ಮನೆಯಲ್ಲಿ ಗೇಮ್ ಅಂತ ಬಂದ್ರೆ ಸ್ಪರ್ಧಿ ಆಗಲೇ ಬೇಕು ಎಂದು ದೀಪಿಕಾ ದಾಸ್ ಪ್ರಶಾಂತ್ ಸಂಬರ್ಗಿ ಬಳಿ ಹೇಳ್ತಾ ಇದ್ದಾರೆ.
8/ 8
ಈ ಮನೆಯಲ್ಲಿ ಇರೋದೆಲ್ಲಾ ಹುಲಿಗಳು. ಈ ಟೈಮ್ ನಲ್ಲಿ ಸೇವ್ ಆಗೋದು ಅಂದ್ರೆ ಸಣ್ಣ ಮಾತಲ್ಲ ಎಂದು ರೂಪೇಶ್ ಶೆಟ್ಟಿ ಹೇಳ್ತಾರೆ. ಅಮೂಲ್ಯ ಗೌಡ ಬೇಸರ ಮಾಡಿಕೊಂಡು ಕೂತಿದ್ದಾರೆ.