ಪ್ರತಿ ವಾರ ವಾರದ ಕಥೆ ಕಿಚ್ಚನ ಜೊತೆಯಲ್ಲಿ, ಸುದೀಪ್ ಮನೆಯವರ ತಪ್ಪುಗಳನ್ನು ಹೇಳುತ್ತಾರೆ. ಈ ವಾರ ವಿನೋದ್ ಟಾಸ್ಕ್ ವೇಳೆ ಮಾಡಿದ ತಪ್ಪನ್ನು ಕನ್ನಡಿ ಮೂಲಕ ಹೇಳಿದ್ದಾರೆ.
2/ 8
ಕಳೆದ ವಾರದ ಟಾಸ್ಕ್ ನಲ್ಲಿ ಮನೆ ಕಾಡಾಗಿತ್ತು. ಆಗ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈಜುಕೊಳದಲ್ಲಿರು ಬಾಕ್ಸ್ನ ನಟ್ಗಳನ್ನು ಕೈಯಿಂದ ಬಿಚ್ಚಬೇಕು ಎಂದು. ಆರ್ಯವರ್ಧನ್ ಗುರೂಜಿ ಬಟ್ಟೆ ಬಳಸಿ ಬಿಚ್ಚಿರುತ್ತಾರೆ.
3/ 8
ಮನೆಯವರೆಲ್ಲಾ ಗುರೂಜಿಗೆ ಬೈಯುತ್ತಿರುವಾಗ, ವಿನೋದ್ ಸಹ ಬೈದಿರುತ್ತಾರೆ. ಆದ್ರೆ ಅವರು ಸಹ ಬಟ್ಟೆ ಬಳಸಿ ನಟ್ ಬಿಚ್ಚಿರುತ್ತಾರೆ. ಮನೆಯವರ ಮುಂದೆ ತಪ್ಪೇ ಮಾಡದಂತೆ ನಟಿಸಿರುತ್ತಾರೆ.
4/ 8
ವಿನೋದ್ ಸಹ ನಾನು ಬಟ್ಟೆ ಬಳಸಿ ನಟ್ ಬಿಚ್ಚಲು ಟ್ರೈ ಮಾಡಿದೆ ಎಂದು ಸುದೀಪ್ ಮುಂದೆ ಹೇಳಿದ್ದಾರೆ. ಅದನ್ನು ಕೇಳಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.
5/ 8
ಟಾಸ್ಕ್ ನಿಯಮವನ್ನು ಕರೆಕ್ಟ್ ಆಗಿ ಕೇಳಿಸಿಕೊಳ್ತೀರಾ ನೀವು. ಎಷ್ಟು ಸಲ ತಪ್ಪು ಮಾಡಿದ್ರೆ ಎಂದು ವಿನೋದ್ ಅವರನ್ನು ಪ್ರಶ್ನೆ ಮಾಡ್ತಾರೆ ಸುದೀಪ್. ತುಂಬ ಸಲ ರೂಲ್ಸ್ ಬ್ರೇಕ್ ಮಾಡಿದ್ದೀರಿ ಎಂದು ಕಿಚ್ಚ ಹೇಳಿದ್ರು.
6/ 8
ವಿನೋದ್ ಈ ಬಾರಿಯ ಕಾಡಿನ ಟಾಸ್ಕ್ ನಲ್ಲಿ ಹಲವು ಬಾರಿ ನಿಯಮ ಮುರಿದಿದ್ದಾರೆ. ಆ ರೀತಿ ಮಾಡಬಾರದು ಎಂದು ಬುಕ್ ನಲ್ಲಿ ಬರೆದಿದ್ರೂ, ಗೊತ್ತಿದ್ದೇ ತಪ್ಪು ಮಾಡಿದ್ದಾರೆ.
7/ 8
ಒಂದು ಟಾಸ್ಕ್ ನ್ನು ಕೇಳದೇ ಕರೆಕ್ಟ್ ಆಗಿ ಮಾಡದೇ, ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕೋದು, ಕನ್ನಡಿ ಇದೆ ವಿನೋದ್ ಅವರೇ, ಎದುರು ನಿಂತರೆ ನಮಗೆ ನಾವೇ ಕಾಣ್ತೀವಿ ಎಂದು ಸುದೀಪ್ ಹೇಳಿದ್ದಾರೆ.
8/ 8
ಸುದೀಪ್ ಸತ್ಯ ಹೇಳ್ತಿದ್ದಂತೆ, ವಿನೋದ್ ಗೆ ತಮ್ಮ ತಪ್ಪಿನಿ ಅರಿವಾಯ್ತು. ಬೇಸರವಾಗಿ ಕಣ್ಣಲ್ಲಾ ಕೆಂಪಾಗಿತ್ತು. ಕ್ಷಮಿಸಿ ಗೊತ್ತಾಗಲಿಲ್ಲ ಎಂದು ವಿನೋದ್ ಗೊಬ್ಬರಗಾಲ ಕೇಳಿದ್ದಾರೆ.