ಬಿಗ್ ಬಾಸ್ ಸೀಸನ್ 09 ಯಶಸ್ವಿಯಾಗಿ ಮುಗಿದಿದೆ. ರೂಪೇಶ್ ಶೆಟ್ಟಿ ಗೆದ್ದಾಗಿದೆ. ಮನೆಯಿಂದ ಆಚೆ ಬಂದ ಮೇಲೂ ಕೆಲ ಸಂಬಂಧಗಳು ಮುಂದುವರೆದಿವೆ. ರೂಪೇಶ್ ಶೆಟ್ಟಿ ಆರ್ಯವರ್ಧನ್ ಗುರೂಜಿ ಮನೆಗೆ ಭೇಟಿ ನೀಡಿದ್ದಾರೆ.
2/ 8
ಆರ್ಯವರ್ಧನ್ ಗುರೂಜಿ ಮನೆಗೆ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಮತ್ತು ಆತನ ಸ್ನೇಹಿತರು ಭೇಟಿ ಕೊಟ್ಟಿದ್ದರು. ರೂಪೇಶ್ ಗೆ ಗುರೂಜಿ ಸನ್ಮಾನ ಮಾಡಿ ಗೌರವ ನೀಡಿದ್ದಾರೆ.
3/ 8
ಆರ್ಯವರ್ಧನ್ ಮಗಳು ರೂಪೇಶ್ ಶೆಟ್ಟಿಗೆ ಅಣ್ಣ ಎನ್ನುತ್ತಿದ್ದಾರೆ. ಬಿಗ್ ಬಾಸ್ ನಿಂದ ರೂಪೇಶ್ ಶೆಟ್ಟಿಗೆ ಹೊಸ ತಂಗಿ ಸಿಕ್ಕಿದ್ದಾಳೆ. ಪ್ರೀತಿಯಿಂದ ತಂಗಿ ಎನ್ನುತ್ತಿದ್ದಾರೆ.
4/ 8
ಓಟಿಟಿಯಿಂದ ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ಶೆಟ್ಟಿ ಆತ್ಮೀಯರು. ಸದಾ ಜೊತೆಗೆ ಕಾಲ ಕಳೆಯುತ್ತಿದ್ದರು. ಬಿಗ್ ಬಾಸ್ ಸೀಸನ್ 09ಕ್ಕೆ ಇಬ್ಬರೂ ಆಯ್ಕೆ ಆಗಿದ್ದರು.
5/ 8
ಆರ್ಯವರ್ಧನ್ ಗುರೂಜಿ ರೂಪೇಶ್ ಶೆಟ್ಟಿಯನ್ನು ಪ್ರೀತಿಯಿಂದ ಮಗ ಎನ್ನುತ್ತಿದ್ದರು ರೂಪೇಶ್ ಸಹ ಅಪ್ಪಾಜಿ ಅಪ್ಪಾಜಿ ಎಂದು ಕರೆಯುತ್ತಿದ್ರು. ಇಬ್ಬರ ನಡುವೆ ಒಳ್ಳೆ ಬಾಂಧವ್ಯ ಇತ್ತು.
6/ 8
ಆರ್ಯವರ್ಧನ್ ಗುರೂಜಿ ಎಷ್ಟೋ ಸಲ ಸುದೀಪ್ ಮುಂದೆ, ನಾನು ಗೆಲ್ಲಲಿಲ್ಲ ಎಂದ್ರೂ ಪರವಾಗಿಲ್ಲ. ನನ್ನ ಮಗ ರೂಪೇಶ್ ಶೆಟ್ಟಿ ಗೆಲ್ಲಬೇಕು. ಅವನು ಕರುನಾಡ ಮಗ ಎನ್ನುತ್ತಿದ್ದರು.
7/ 8
ಆರ್ಯವರ್ಧನ್ ಗುರೂಜಿ ಔಟ್ ಆದಾಗ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟು ನಿಜವಾಗಿತ್ತು ಇವರ ಆತ್ಮೀಯತೆ. ಎಲ್ಲರಿಗೂ ಇವರ ಸಂಬಂಧ ಇಷ್ಟವಾಗಿತ್ತು.
8/ 8
ರೂಪೇಶ್ ಶೆಟ್ಟಿ ಗೆದ್ದಾಗ ಆರ್ಯವರ್ಧನ್ ಗುರೂಜಿ ಸಂಭ್ರಮಿಸಿದ್ದರು. ಖುಷಿಯಿಂದ ಕುಣಿದಾಡಿದ್ದರು. ಬಿಗ್ ಬಾಸ್ ನಿಂದ ಬಂದ ಮೇಲೆ ರೂಪೇಶ್ ಗೂರೂಜಿಯನ್ನು ಭೇಟಿಯಾಗಿದ್ದಾರೆ.