ರೂಪೇಶ್ ಶೆಟ್ಟಿ ಯಾರ ಜೊತೆ ಮಾತನಾಡ್ತಾ ಇದ್ರೂ, ಕನ್ನಡಿಯನ್ನೇ ನೋಡ್ತಾರಂತೆ, ಹೌದಾ ಎಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ಸುದೀಪ್ ಕೇಳಿದ್ದಾರೆ.
2/ 8
ರೂಪೇಶ್ ಶೆಟ್ಟಿ ಮನೆಯಲ್ಲಿ ಸದಾ ಕನ್ನಡಿ ನೋಡ್ತಾ ಇರ್ತಾರೆ. ಅವರಿಗೆ ಕನ್ನಡಿ ನೋಡಿಕೊಳ್ಳೋದು ಇಷ್ಟ. ಯಾರೇ ಮಾತನಾಡ್ತಾ ಇರಲಿ, ಅವರನ್ನು ನೋಡೋದೇ ಕನ್ನಡಿ ನೋಡ್ತಾರೆ.
3/ 8
ಹೌದು ಸರ್ ಅವನಿಗೆ ಕನ್ನಡಿ ನೋಡುವುದು ಇಷ್ಟ. ಅದಕ್ಕೆ ಯಾವಾಗಲೂ ಪಾತ್ರೆ ತೊಳೆಯುತ್ತಾನೆ. ಅಲ್ಲಿ ದೊಡ್ಡ ಕನ್ನಡಿ ಇದೆ ಎಂದು ರಾಕೇಶ್ ಅಡಿಗ ಹೇಳುತ್ತಾರೆ.
4/ 8
ಎಲ್ಲರೂ ಸೀರಿಯಸ್ ಆಗಿ ಮಾತನಾಡುವಾಗ್ಲೂ ನಾನು ಕನ್ನಡಿ ನೋಡ್ತಾ ಇರುತ್ತೇನೆ. ನನಗೆ ಒಂದೊಂದು ಸಲ ಅನ್ನಿಸುತ್ತೆ, ನಾನ್ ಯಾಕ್ ಕನ್ನಡಿ ನೋಡ್ತೀನಿ ಅಂತ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
5/ 8
ಪಾತ್ರೆ ತೊಳೆಯುವಾಗ ಕನ್ನಡಿಯಲ್ಲಿ ಯಾರ್ಯಾರೋ ಕಾಣ್ತಾರೆ. ಅದಕ್ಕೆ ರೂಪೇಶ್ ಶೆಟ್ಟಿ ಯಾವಾಗಲೂ ಪಾತ್ರೆ ತೊಳೆಯುತ್ತಾ ಕನ್ನಡಿ ನೋಡ್ತಾರೆ ಎಂದು ಸುದೀಪ್ ಹೇಳಿದ್ದಾರೆ.
6/ 8
ನನ್ನ ಜೊತೆ ಮಾತನಾಡುವಾಗ ರೂಪೇಶ್ ಶೆಟ್ಟಿ ಕನ್ನಡಿ ನೋಡಲ್ಲ ಸರ್.ಯಾವುತ್ತೂ ಆ ರೀತಿ ಅನ್ನಿಸಿಲ್ಲ ಎಂದು ರೂಪೇಶ್ ರಾಜಣ್ಣ ಹೇಳ್ತಾರೆ.
7/ 8
ರೂಪೇಶ್ ರಾಜಣ್ಣ ನೀವು ಅವರು ಕನ್ನಡಿ ನೋಡಲು ಅವಕಾಶ ಕೊಡಲ್ಲ ಎಂದು ಸುದೀಪ್ ಹೇಳಿದ್ದಾರೆ. ನಾನು ಮಾತನಾಡುವಾಗ್ಲೂ ಕನ್ನಡಿ ನೋಡಬೇಕು ಅನ್ನಿಸುತ್ತಾ ರೂಪೇಶ್ ಅವರೇ ಎಂದು ಸುದೀಪ್ ಅವರು ಕೇಳಿದ್ದಾರೆ.
8/ 8
ಮೇಕಪ್ ಹಾಕುವಾಗ್ಲೂ ನಾನು ಕನ್ನಡಿ ನೋಡಲ್ಲ ಎಂದು ರೂಪೇಶ್ ಶೆಟ್ಟಿ ಹೇಳುತ್ತಾರೆ. ಅದಕ್ಕೆ ಸುದೀಪ್ ನಾನು ಕೇಳಿದ್ದು ಕನ್ನಡಿ ಬಗ್ಗೆ ಮೇಕಪ್ ಬಗ್ಗೆ ಅಲ್ಲ ಎನ್ನುತ್ತಾರೆ. ಮನೆಯ ಎಲ್ಲರೂ ನಗ್ತಾರೆ.