Bigg Boss Kannada: ಡಿವೋರ್ಸ್ ಆದ ಇಬ್ಬರನ್ನು ಮದುವೆ ಆಗಿದ್ರಂತೆ ರೂಪೇಶ್ ಶೆಟ್ಟಿ! ನಿಜಾನಾ?
ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದೆ. 5 ಜನ ಸದಸ್ಯರಿದ್ದು, ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ನಡುವೆ ರೂಪೇಶ್ ಶೆಟ್ಟಿ ಒಂದು ಶಾಂಕಿಂಗ್ ಸುದ್ದಿ ಹೇಳಿದ್ದಾರೆ.
ರೂಪೇಶ್ ಶೆಟ್ಟಿ ಓಟಿಟಿ ಸೀಸನ್ ನಿಂದ ಬಿಗೆ ಬಾಸ್ ಸೀಸನ್ 9ಕ್ಕೂ ಬಂದಿದ್ದರು. ಅಲ್ಲಿಂದ ಚೆನ್ನಾಗಿ ಆಡುತ್ತಾ ಬಂದು, ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
2/ 8
ರೂಪೇಶ್ ಶೆಟ್ಟಿ ಯಾವಾಗಲೂ ಎನರ್ಜಿಟಿಕ್ ಆಗಿ ಇರ್ತಾರೆ. ಸದಾ ಉತ್ಸಹ. ಎಲ್ಲರ ಜೊತೆ ಮಾತನಾಡುತ್ತಾ, ತಮಾಷೆ ಮಾಡುತ್ತಾ, ಒಳ್ಳೆ ಸ್ಪರ್ಧೆ ನೀಡ್ತಾರೆ.
3/ 8
ರೂಪೇಶ್ ಶೆಟ್ಟಿ ದಿವ್ಯಾ ಉರುಡುಗ ಬಳಿ ತಮಗೆ ಬಿದ್ದ ಕನಸಿನ ಬಗ್ಗೆ ಹೇಳಿದ್ದಾರೆ. ದಿವ್ಯಾ ನನಗೆ ಎಂಥಾ ಕೆಟ್ಟ ಕನಸು ಬಿದ್ದಿತ್ತು ಮಾರಾಯ್ತಿ. ಸದ್ಯ ಕನಸು ಅಂತ ಗೊತ್ತಾಗಿ ನೆಮ್ಮದಿ ಆಯ್ತು ಎಂದಿದ್ದಾರೆ. ಏನದು ಎಂದು ದಿವ್ಯಾ ಕೇಳಿದ್ದಾರೆ.
4/ 8
ಮದುವೆ ಆಗಿರೋರನ್ನೇ ನಾನು ಎರಡು ಮದುವೆ ಆಗಿದ್ದೆ. ನನಗೆ ಇರಿಟೇಟ್ ಆಗೋಯ್ತು. ಆಗಲೇ ಮದುವೆ ಆಗಿ ಡಿವೋರ್ಸ್ ಏನೋ ಆಗಿದೆ. ಅಂಥ ಇಬ್ಬರನ್ನ ಮದುವೆಯಾಗಿದ್ದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
5/ 8
ಮದುವೆಯಾಗಿ ಡಿವೋರ್ಸ್ ಆಗಿರೋ ಇಬ್ಬರನ್ನ ನಾನು ಮದುವೆಯಾಗಿದ್ದೆ. ಲೈಫ್ ಲಾಕ್ ಆಯ್ತು ಎಂಬ ಭಾವನೆ ಮೂಡಿತು. ಈ ರೀತಿ ನನ್ನ ಕೈಯಲ್ಲಿ ಆಗಲ್ಲ ಎಂದು ಹೇಳ್ತಾ ಇದ್ದೆ. ಆಗ ಎಚ್ಚರ ಆಯ್ತು ಎಂದು ದಿವ್ಯಾ ಬಳಿ ರೂಪೇಶ್ ಶೆಟ್ಟಿ ಹೇಳಿದ್ದಾರೆ.
6/ 8
ಈ ರೀತಿ ಕನಸು ಒಂದು ವೇಳೆ ನಿಜ ಆದ್ರೆ ಹೇಗಿರುತ್ತೆ, ಯಪ್ಪಾ ಸತ್ತೆ. ಇದು ಕನಸಾಗಿದ್ದಕ್ಕೆ ಸ್ಪಲ್ಪ ನೆಮ್ಮದಿ ಆಯ್ತು ಎಂದು ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.
7/ 8
ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆಲ್ಲಬೇಕು ಎನ್ನುವ ಕನಸನ್ನು ಹೊಂದಿದ್ದಾರೆ. ಶನಿವಾರ ಯಾರಿಗೆ ಗೆಲುವಿನ ಪಟ್ಟ ಎಂದು ತಿಳಿಯಲಿದೆ. ರೂಪೇಶ್ ಶೆಟ್ಟಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೋಟ್ ಹಾಕಿ ಎಂದು ಕೇಳಿಕೊಳ್ತಾ ಇದ್ದಾರೆ.
8/ 8
ಶುಕ್ರವಾರ, ಶನಿವಾರ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಇರುವ 5 ಜನರಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.