Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಸೋತ ಸ್ನೇಹ! ರೂಪೇಶ್ ಶೆಟ್ಟಿ, ರಾಜಣ್ಣ, ಗುರೂಜಿ ಮಧ್ಯೆ ಬಿರುಕು!
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಗುರೂಜಿ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಈಗ ಅವರ ಮಧ್ಯೆ ಬಿರುಕು ಉಂಟಾಗಿದೆ. ಹಾಗಿದ್ರೆ ಬಿಗ್ ಬಾಸ್ ಮನೆಯಲ್ಲಿ ಏನಾಗ್ತಿದೆ?
ಹೇಳಲಾಗದ ವಿಷಯವನ್ನು ಪತ್ರದ ಮೂಲಕ ತಿಳಿಸಿ ಎಂದು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಅದರಲ್ಲಿ ರಾಜಣ್ಣ, ರೂಪೇಶ್ ಶೆಟ್ಟಿಗೆ ನೋವಾಗುವಂತೆ ಪತ್ರ ಬರೆದಿದ್ದರು. ನಿಮ್ಮ ಮಾತು ಹೃದಯದಿಂದ ಬರಲ್ಲ. ಬೂಟಾಟಿಕೆ ಅಂತ ಇತ್ತು. ಅದಕ್ಕೆ ರೂಪೇಶ್ ಶೆಟ್ಟಿ ಬೇಸರ ಮಾಡಿಕೊಂಡಿದ್ದಾರೆ.
2/ 8
ಅದಕ್ಕೆ ರಾಜಣ್ಣ ಗುರೂಜಿ ಬಳಿ ಮಾತನಾಡುತ್ತಿದ್ದಾರೆ. ನಾವು ನಿನ್ನನ್ನು ಕುಗ್ಗಿಸಿಲ್ಲ. ನಿನ್ನ ಪದ ನಮ್ಮನ್ನು ಕುಗ್ಗಿಸಿದೆ. ದುರಹಂಕಾರದಿಂದ ಮಾಡತನಾಡಿದ್ದು ಇಷ್ಟ ಆಗಲಿಲ್ಲ ಎಂದು ಗುರೂಜಿ ಹೇಳಿದ್ದಾರೆ.
3/ 8
ಒಳ್ಳೆಯದು ಮಾತ್ರ ಮಾತನಾಡಿದ್ರೆ ನಾನು ಒಳ್ಳೆಯ ಸ್ನೇಹಿತನಾ ಎಂದು ರಾಜಣ್ಣ ರೂಪೇಶ್ ಶೆಟ್ಟಿಗೆ ಕೇಳಿದ್ದಾರೆ. ಒಳ್ಳೆಯದೇ ಮಾತನಾಡಿ ಎಂದು ನಾನು ಎಲ್ಲಿ ಹೇಳಿದೆ ಎಂದು ಕೈ ಮುಗಿದಿದ್ದಾರೆ ರೂಪೇಶ್ ಶೆಟ್ಟಿ.
4/ 8
ನನ್ನ ಬಗ್ಗೆ ಮಾತನಾಡುತ್ತೀರಿ ಅಲ್ವಾ? ನನ್ನ ಬಗ್ಗೆ ನಿಮಗೆ ತಲೆಯಿಲ್ಲ ಏನೂ ಇಲ್ವಾ? ಒಳ್ಳೆಯ ಸ್ನೇಹಿತರನ್ನು ಕಳೆದುಕೊಳ್ಳುತ್ತಾ ಹೋಗುತ್ತೀರಿ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
5/ 8
ಕಂಡಿದ್ದು ಹೇಳಿದ್ರೆ, ನಮ್ಮ ಕ್ಯಾರೆಕ್ಟರ್ ಸರಿ ಇಲ್ಲ ಅಂತ ಅರ್ಥನಾ? ಯಾರು ಮಾತನಾಡಬೇಕು ಅಂದುಕೊಂಡಿದ್ದೀರಿ ಅವರು ಬನ್ನಿ ನನ್ನ ಮುಂದೆ ಎಂದು ರಾಜಣ್ಣ ಸವಾಲ್ ಹಾಕ್ತಾರೆ.
6/ 8
ಯಾರು ಸಿಕ್ಕಿಲ್ಲ ಅಂದ್ರೆ ಇರೋರನ್ನೇ ಹಾಳು ಮಾಡ್ತೀರಿ. ಕೊಚ್ಚೆ ಎಂದು ಗೊತ್ತಾದ ಮೇಲೆ, ಯಾರು ಕೊಚ್ಚೆ ಮೇಲೆ ಕಲ್ಲು ಹಾಕ್ತಾರೆ ಎಂದು ಗುರೂಜಿ ರಾಜಣ್ಣನನ್ನು ಕೊಚ್ಚೆಗೆ ಹೊಲಿಸಿದ್ದಾರೆ.
7/ 8
ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯಲ್ಲಿದ್ರಾ ಎಂದು ಯಾರಾದ್ರೂ ಕೇಳಿದ್ರೆ, ನನಗೆ ಗೊತ್ತಿಲ್ಲ ಅಂತೀನಿ ಎಂದು ಗುರೂಜಿ ಹೇಳಿದ್ದಾರೆ. ಇಲ್ಲಿ ಸೋತಿದ್ದು ನಮ್ಮ ಸ್ನೇಹ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
8/ 8
ರಾಜಣ್ಣನವರ ಮಾತಿನಿಂದ ಒಂದು ಸುಂದರ ಸ್ನೇಹ ಅಂತ್ಯವಾಗಿದೆ. ಈ ಮುನಿಸು ಮುಂದುವರೆಯುತ್ತಾ? ಮತ್ತೆ ಎಲ್ಲಾ ಮರೆತು ಒಂದಾಗ್ತಾರಾ ನೋಡಬೇಕು.